Akshaya Tritiya 2023 Vastu Tips: ತಾಯಿ ಲಕ್ಷ್ಮಿದೇವಿ ಮತ್ತು ಭಗವಾನ್ ವಿಷ್ಣುವನ್ನು ಆರಾಧಿಸಲು ಅಕ್ಷಯ ತೃತೀಯವು ಬಹಳ ಉತ್ತಮ ದಿನವಾಗಿದೆ. ಈ ದಿನ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಮಹತ್ವದಿಂದ ಜೋತಿಷ್ಯದ ಪ್ರಕಾರ ಪೂಜಿಸುವುದು, ಕೆಲವು ನಿಯಮಗಳನ್ನು ಪಾಲಿಸುವುದು, ಶುಭ ಕಾರ್ಯಗಳನ್ನು ಮಾಡುವುದು, ಮಂಗಳಕರ ವಸ್ತುಗಳನ್ನು ಖರೀದಿಸುವುದು ನಿಮಗೆ ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ.
ತಾಯಿ ಲಕ್ಷ್ಮಿದೇವಿ ಮತ್ತು ಭಗವಾನ್ ವಿಷ್ಣುವನ್ನು ಆರಾಧಿಸಲು ಅಕ್ಷಯ ತೃತೀಯವು ಬಹಳ ಉತ್ತಮ ದಿನವಾಗಿದೆ. ಈ ದಿನ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಮಹತ್ವದಿಂದ ಜೋತಿಷ್ಯದ ಪ್ರಕಾರ ಪೂಜಿಸುವುದು, ಕೆಲವು ನಿಯಮಗಳನ್ನು ಪಾಲಿಸುವುದು, ಶುಭ ಕಾರ್ಯಗಳನ್ನು ಮಾಡುವುದು, ಮಂಗಳಕರ ವಸ್ತುಗಳನ್ನು ಖರೀದಿಸುವುದು ನಿಮಗೆ ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ.
ವಾಸ್ತು ಶಾಸ್ತ್ರದಲ್ಲಿಯೂ ಅಕ್ಷಯ ತೃತೀಯ ಕುರಿತು ಕೆಲವು ಪ್ರಮುಖ ವಿಷಯಗಳನ್ನು ಹೇಳಲಾಗಿದೆ. ಇದರ ಪ್ರಕಾರ ಅಕ್ಷಯ ತೃತೀಯ ದಿನದಂದು ತಾಯಿ ಲಕ್ಷ್ಮಿಗೆ ಇಷ್ಟವಾಗದ ಯಾವುದೇ ಅಶುಭ ವಸ್ತುಗಳು ಮನೆಯಲ್ಲಿ ಇರಬಾರದು. ಅಂತಹ ವಸ್ತುಗಳು ಯಾವುವೆಂದು ತಿಳಿಯೋಣ.
ನಿಮ್ಮ ಮನೆಯಲ್ಲಿ ಮುರಿದ ಪೊರಕೆಯಿದ್ದರೆ, ಅಕ್ಷಯ ತೃತೀಯಕ್ಕೂ ಮೊದಲು ಅದನ್ನು ತೆಗೆಯಿರಿ. ಪೊರಕೆಯನ್ನು ಎಲ್ಲೆಂದರಲ್ಲಿ ಇಟ್ಟರೆ, ಅಥವಾ ಸರಿಯಾದ ಪದ್ಧತಿಯಂತೆ ಇಡದಿದ್ದರೆ ತಾಯಿ ಲಕ್ಷ್ಮೀ ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. ಅಂತಹ ಸಂದರ್ಭದಲ್ಲಿ ಮುರಿದ ಪೊರಕೆ ಮನೆಯಲ್ಲಿದ್ದರೆ ತಾಯಿ ಲಕ್ಷ್ಮಿ ಅಸಮಾಧಾನಗೊಂದು ಬಡತನವನ್ನು ತರುತ್ತಾಳೆಂದು ಹೇಳಲಾಗುತ್ತದೆ.
ಅಕ್ಷಯ ತೃತೀಯ ದಿನವು ಸಂತೋಷ ಮತ್ತು ಸಮೃದ್ಧಿಯ ದಿನವಾಗಿದೆ. ಈ ದಿನ ಮನೆಯಲ್ಲಿ ಮುರಿದ ಪೊರಕೆಯನ್ನು ತಪ್ಪಿಯೂ ಇಡಬೇಡಿ.
ಮನೆಯಲ್ಲಿ ಕಸಕಡ್ಡಿ, ಜೇಡರ ಬಲೆಗಳು, ಸ್ವಚ್ಛತೆ ಇಲ್ಲದಿರುವುದು, ಹಳೆಯ ಚಪ್ಪಲಿ ಹೀಗೆ ಹಲವು ನಕಾರಾತ್ಮಕ ಅಂಶಗಳಿದ್ದರೆ, ಅದನ್ನು ಅಕ್ಷಯ ತೃತೀಯಕ್ಕೂ ಮೊದಲು ನಿರ್ಮೂಲನೆ ಮಾಡಿ.
ಮನೆಯಲ್ಲಿ ಒಡೆದ ಪಾತ್ರೆಗಳು, ತುಕ್ಕು ಹಿಡಿದ ಬೀಗಗಳು, ಛಿದ್ರಗೊಂಡ ವಿಗ್ರಹಗಳು ಇತ್ಯಾದಿಗಳು ಇದ್ದರೆ ಅದನ್ನು ಮನೆಯಿಂದ ಹೊರಹಾಕಿ.
ಇನ್ನು ಮನೆಯಲ್ಲಿ ಒಣಗಿದ ಸಸ್ಯಗಳಿದ್ದರೆ, ಒಣಗಿದ ಹೂವುಗಳು ಇದ್ದರೆ ಅವುಗಳನ್ನು ಮನೆಯಿಂದ ತೆಗೆದುಹಾಕಿ.
ಇನ್ನು ಅಡುಗೆಯ ಮನೆಯಲ್ಲಿ ಕೊಳಕಾಗಿದ್ದರೆ, ತಕ್ಷಣವೇ ಸ್ವಚ್ಛತೆ ಕಾಪಾಡಿಕೊಳ್ಳಿ. ಇದು ಅದೃಷ್ಟ, ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)