ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಈ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಚೆನ್ನೈ ಸೂಪರ್ಕಿಂಗ್ಸ್ (ಸಿಎಸ್ಕೆ) ನಡುವಿನ ಪಂದ್ಯದಲ್ಲಿ ಜಿಯೋಸಿನಿಮಾ  ವೀಕ್ಷಕರ ವೀಕ್ಷಣೆಯ ದಾಖಲೆಯನ್ನು ಮುರಿದಿದೆ.


COMMERCIAL BREAK
SCROLL TO CONTINUE READING

ಪಂದ್ಯದ ವೇಳೆ ಸಂಖ್ಯೆ 2.4 ಕೋಟಿಗೂ ಅಧಿಕ ವೀಕ್ಷಕರಿಂದ ವೀಕ್ಷಣೆ ಪಡೆದಿದೆ.  ಇದು ಪ್ರಸಕ್ತ ಐಪಿಎಲ್-2023ರ ಆವೃತ್ತಿಯ ಆನ್ಲೈನ್ ಲೈವ್ ಸ್ಟ್ರೀಮಿಂಗ್ ಫ್ಲಾಟ್ಫಾರ್ಮ್ ಜಿಯೋಸಿನಿಮಾದಲ್ಲಿ ಇದುವರೆಗಿನ ಅತಿ ಹೆಚ್ಚು ವೀಕ್ಷಕರ ವೀಕ್ಷಣೆಯಾಗಿದೆ. 


ಇದನ್ನೂ ಓದಿ: RCB vs CSK: ಧೋನಿಯನ್ನ ತಬ್ಬಿ ಮುದ್ದಾಡಿದ ವಿರಾಟ್: ಈ ಬಾಂಧವ್ಯದ ಅಪರೂಪದ ದೃಶ್ಯ ಕಣ್ತುಂಬಿಕೊಳ್ಳಿ


ಈ ಹಿಂದೆ ಏಪ್ರಿಲ್ 12ರಂದು ಜಿಯೋಸಿನಿಮಾದಲ್ಲಿ ವೀಕ್ಷಕರ ಸಂಖ್ಯೆ 2.2 ಕೋಟಿ ತಲುಪಿತ್ತು. ಈ ಬಾರಿ ಆರ್ಸಿಬಿ-ಸಿಎಸ್ಕೆ ಪಂದ್ಯದ ಎರಡನೇ ಇನಿಂಗ್ಸ್ನ ಕೊನೆಯ ಓವರ್ನಲ್ಲಿ ಜಿಯೋಸಿನಿಮಾದ ವೀಕ್ಷಕರ ಸಂಖ್ಯೆ 24 ದಶಲಕ್ಷ ತಲುಪಿದೆ.  


ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ಕಿಂಗ್ಸ್ ತಂಡ 8 ರನ್ಗಳಿಂದ ಗೆದ್ದುಕೊಂಡಿತು.  ಈ ಪಂದ್ಯದಲ್ಲಿ ದಾಖಲೆಯ 33 ಸಿಕ್ಸರ್ಗಳೂ ಸಿಡಿದವು.ಟಾಟಾ ಐಪಿಎಲ್-2023ರ  ಟಿವಿ ಮತ್ತು ಡಿಜಿಟಲ್ ಗಳಿಗೆ  ಬಿಸಿಸಿಐ ಪ್ರತ್ಯೇಕ ಕಂಪನಿಗಳಿಗೆ ನೀಡಿದೆ.  


ಇದನ್ನೂ ಓದಿ: RCB vs CSK: ಮೂರನೇ ಗೆಲುವಿಗೆ ಬೆಂಗಳೂರು-ಚೆನ್ನೈ ಫೈಟ್! ಹೀಗಿರಲಿದೆ Playing XI; ಪಿಚ್ ರಿಪೋರ್ಟ್ ಇಲ್ಲಿದೆ


ಪಂದ್ಯವನ್ನು ಟಿವಿಯಲ್ಲಿ ವೀಕ್ಷಣೆಗಿಂತ ಡಿಜಿಟಲ್ ಮಾಧ್ಯಮದಲ್ಲಿ ಪ್ರಸಾರದಲ್ಲಿ ಮುಂದಿದೆ . ಜಿಯೋಸಿನಿಮಾ ಈ ಬಾರಿ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ನೇರಪ್ರಸಾರವನ್ನು ಮಾಡುತ್ತಿದೆ.  ಇದರಿಂದ ಡಿಜಿಟಲ್ ಫ್ಲಾಟ್ಫಾರ್ಮ್ನಲ್ಲಿ ಐಪಿಎಲ್ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. 


2019ರ ಆವೃತ್ತಿಯ ಫೈನಲ್ ಪಂದ್ಯವನ್ನು ಡಿಸ್ನಿ-ಹಾಟ್ಸ್ಟಾರ್ನಲ್ಲಿ ಗರಿಷ್ಠ 1.86 ಕೋಟಿ ವೀಕ್ಷಕರು ನೋಡಿದ್ದರು ಆದರೆ  ಜಿಯೋಸಿನಿಮಾದಲ್ಲಿ 2.4 ಕೋಟಿ ವೀಕ್ಷಕರ ಗಡಿದಾಟಿದೆ.  ಪ್ರಸಕ್ತ ಐಪಿಎಲ್ ಟೂರ್ನಿ ಇನ್ನೂ ತನ್ನ ಲೀಗ್ ಹಂತದಲ್ಲಿದ್ದು, ಜಿಯೋಸಿನಿಮಾ ಈಗಾಗಲೆ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಐಪಿಎಲ್-2023 ಫೈನಲ್ ಹಂತದತ್ತ ಸಾಗುತ್ತಿರುವಂತೆ, ಜಿಯೋಸಿನಿಮಾದಲ್ಲಿ ವೀಕ್ಷಕರ ಸಂಖ್ಯೆಯು ಹೊಸ ಎತ್ತರವನ್ನು ತಲುಪಲಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.