RR vs LSG: “ಇದು ಆಟದ ಚಂದ..”; ಲಕ್ನೋ ವಿರುದ್ಧ ಸೋತರು ರಾಜಸ್ಥಾನ ನಾಯಕ ಹೀಗಂದಿದ್ದೇಕೆ?
RR vs LSG: ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಎರಡೂ ತಂಡಗಳ ಬ್ಯಾಟಿಂಗ್ ಬಹಳ ನಿಧಾನವಾಗಿತ್ತು. ಮೊದಲ ಬ್ಯಾಟಿಂಗ್ ಮಾಡಿದ ಲಕ್ನೋ 7 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಇದರ ನಂತರ ಕಣಕ್ಕಿಳಿದ ರಾಜಸ್ಥಾನ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಲಕ್ನೋ ಪರ ಬೌಲಿಂಗ್ ಮಾಡಿದ ಆವೇಶ್ ಖಾನ್ 4 ಓವರ್‌ಗಳಲ್ಲಿ 25 ರನ್ ನೀಡಿ 3 ವಿಕೆಟ್ ಕಬಳಿಸಿದರು
RR vs LSG: ರಾಜಸ್ಥಾನ ರಾಯಲ್ಸ್ ಇಂದು ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ರಾಯಲ್ಸ್ ತಂಡವು 10 ರನ್’ಗಳ ಅಂತರದಲ್ಲಿ ಸೋಲು ಕಂಡಿತು, ಈ ಸೋಲಿನ ಬಳಿಕ ಮಾತನಾಡಿದ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್, ವ್ಯಂಗ್ಯವಾಗಿ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: IPL 2023: ವಿಶ್ವದ ಈ ದಿಗ್ಗಜ ಆಟಗಾರನಿಗೆ ಅವಕಾಶ ಕೊಡುತ್ತಿಲ್ಲ ಕೆಎಲ್ ರಾಹುಲ್! ಕೊನೆಗೊಳಿಸುತ್ತಾರಾ ವೃತ್ತಿಜೀವನ?
ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಎರಡೂ ತಂಡಗಳ ಬ್ಯಾಟಿಂಗ್ ಬಹಳ ನಿಧಾನವಾಗಿತ್ತು. ಮೊದಲ ಬ್ಯಾಟಿಂಗ್ ಮಾಡಿದ ಲಕ್ನೋ 7 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಇದರ ನಂತರ ಕಣಕ್ಕಿಳಿದ ರಾಜಸ್ಥಾನ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಲಕ್ನೋ ಪರ ಬೌಲಿಂಗ್ ಮಾಡಿದ ಆವೇಶ್ ಖಾನ್ 4 ಓವರ್‌ಗಳಲ್ಲಿ 25 ರನ್ ನೀಡಿ 3 ವಿಕೆಟ್ ಕಬಳಿಸಿದರು. ಲಕ್ನೋ ಪರ ಕೈಲ್ ಮೇಯರ್ಸ್, 42 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಸಹಾಯದಿಂದ 51 ರನ್’ಗಳ ಭರ್ಜರಿ ಬ್ಯಾಟಿಂಗ್ ನಡೆಸಿದರು.
ಸೋಲಿನಿಂದ ಕೋಪಗೊಂಡ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್, “ಸೋಲುವುದು ಒಳ್ಳೆಯದಲ್ಲ, ಆದರೂ ಪರವಾಗಿಲ್ಲ. ಜೈಪುರದಲ್ಲಿ ಮೊದಲ ಪಂದ್ಯ ಗೆಲ್ಲಬೇಕೆಂಬ ಆಸೆ ನಮ್ಮಲ್ಲಿತ್ತು. ಆದರೆ ಈ ಪಂದ್ಯದಿಂದ ಒಳ್ಳೆಯ ಪಾಠಗಳನ್ನು ಕಲಿತು ಮುಂದೆ ಸಾಗುತ್ತೇವೆ. ನಮ್ಮಲ್ಲಿ ಉತ್ತಮವಾದ ಬ್ಯಾಟ್ಸ್’ಮನ್’ಗಳಿದ್ದಾರೆ. ಆದರೆ ಲಕ್ನೋ ಅದಕ್ಕಿಂತಲೂ ಮಿಂಚಿ ಬೌಲಿಂಗ್ ಮಾಡಿತ್ತು” ಎಂದರು.
ಇದನ್ನೂ ಓದಿ: ಹರಿದ ಚಡ್ಡಿ ವರ್ಷಪೂರ್ತಿ ಹಾಕೋರ ಗಮನಕ್ಕೆ.. ಒಳಉಡುಪುಗಳಿಗೂ ಇದೆ Expire Date! ಹೀಗೆ ತಿಳಿಯಿರಿ
ಕ್ಯಾಪ್ಟನ್ ಸ್ಯಾಮ್ಸನ್ ಈ ಪಂದ್ಯದಿಂದ ಪಾಠ ಕಲಿತುಕೊಳ್ಳುವುದಾಗಿ ಹೇಳಿದರು. “ನೀವು ಪಂದ್ಯವನ್ನು ಗೆದ್ದರೂ ಅಥವಾ ಸೋತರೂ ಅವರಿಂದ ಪಾಠಗಳನ್ನು ಕಲಿತುಕೊಳ್ಳಬೇಕು. ಈ ಆಟದ ಸೌಂದರ್ಯ ಇದು. ಇದರಿಂದ ನಾವು ಸಾಕಷ್ಟು ಪಾಠಗಳನ್ನು ತೆಗೆದುಕೊಂಡು ಮುಂದೆ ಹೋಗುತ್ತೇವೆ. ನಮ್ಮ ಕ್ರಿಕೆಟ್ ಮಟ್ಟವನ್ನು ನಾವೆಲ್ಲರೂ ತಿಳಿದಿದ್ದೇವೆ. ಹಾಗೆಯೇ ಇನ್ನಷ್ಟು ಕಲಿತು ಮುಂದುವರಿಯಬೇಕು, ಉತ್ತಮ ಕ್ರಿಕೆಟ್ ಆಡಬೇಕು” ಎಂದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.