PBKS vs KKR: ಐಪಿಎಲ್‌’ನ ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಋತುವಿನ ಮೊದಲ ಪಂದ್ಯದಲ್ಲಿ ಗುಜರಾತ್ ತಂಡ ಚೆನ್ನೈ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಗೆಲುವಿನ ಶುಭಾರಂಭ ಮಾಡಿದೆ. ಆದರೆ ಈ ಪಂದ್ಯ ಮಳೆಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video: ಸ್ಟಂಟ್ ಮಾಡಲು ಹೋದ ವಧುವಿನ ಮುಖಕ್ಕೆ ಹಿಡದ ಬೆಂಕಿ! ಮುಂದೆ... ಈ ವಿಡಿಯೋ ನೋಡಿ


ಇನ್ನು ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರನೊಬ್ಬ ಬೌಲಿಂಗ್ ಎದುರಾಳಿಗೆ ರನ್ ಕಲೆ ಹಾಕಲು ಸಹಾಯ ಮಾಡಿದ್ದಾನೆ ಎನ್ನಬಹುದು. ಈ ಆಟಗಾರ ಐಪಿಎಲ್ 2023 ರಲ್ಲಿ ತಂಡದ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ.


ತಂಡಕ್ಕೆ ಹೊರೆಯಾದ ಈ ಆಟಗಾರ!


ಮೊದಲ ಬಾರಿಗೆ ಕೋಲ್ಕತ್ತಾ ತಂಡ 10 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿ ಈ ಆಟಗಾರನಿಗೆ ಅವಕಾಶ ನೀಡಿತ್ತು. ಆದರೆ ಈ ಆಟಗಾರನು ಭರವಸೆಯನ್ನು ಹುಸಿಗೊಳಿಸಿದ್ದಾನೆ. ಆತ ಬೇರೆ ಯಾರೂ ಅಲ್ಲ ಶಾರ್ದೂಲ್ ಠಾಕೂರ್. ಶಾರ್ದೂಲ್ ಠಾಕೂರ್ ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವಾಗ ನಾಲ್ಕು ಓವರ್‌ಗಳನ್ನು ಬೌಲ್ ಮಾಡಿದರು. ಆದರೆ ಈ ಸಮಯದಲ್ಲಿ ಅವರು ತಮ್ಮ ಹೆಸರಿನಲ್ಲಿ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಇದಲ್ಲದೆ, ಅವರು 4 ಓವರ್‌ಗಳಲ್ಲಿ 43 ರನ್‌ಗಳನ್ನು ಸಹ ನೀಡಿದರು.


ಐಪಿಎಲ್ 2023 ರ ಮೆಗಾ ಹರಾಜಿನಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಶಾರ್ದೂಲ್ ಠಾಕೂರ್ ಮೇಲೆ ನೀರಿನಂತೆ ಹಣವನ್ನು ಖರ್ಚು ಮಾಡಿದೆ. ಶಾರ್ದೂಲ್ ಅವರನ್ನು 10 ಕೋಟಿ 75 ಲಕ್ಷ ರೂ ನೀಡಿ ತಮ್ಮ ತಂಡದಲ್ಲಿ ಸೇರ್ಪಡೆಗೊಳಿಸಿತ್ತು. ಆದರೆ, ಮೊದಲ ಪಂದ್ಯದಲ್ಲಿ ಶಾರ್ದೂಲ್ ಬೌಲಿಂಗ್ ನಲ್ಲಿ ಹೆಚ್ಚಿನ ಸಾಧನೆ ಮಾಡಲಿಲ್ಲ.


ಐಪಿಎಲ್ ಅಂಕಿಅಂಶಗಳು ಹೀಗಿವೆ:


ಶಾರ್ದೂಲ್ ಠಾಕೂರ್ ಐಪಿಎಲ್‌’ನಲ್ಲಿ ಇದುವರೆಗೆ 76 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಅವರು ಕೇವಲ 173 ರನ್ ಗಳಿಸಿದ್ದಾರೆ. ಬೌಲಿಂಗ್ ನಲ್ಲಿ ಇಷ್ಟೇ ಪಂದ್ಯಗಳಲ್ಲಿ 82 ವಿಕೆಟ್ ಪಡೆದಿದ್ದಾರೆ. ಆದರೆ, ಈ ಬಾರಿ ಉತ್ತಮ ಪ್ರದರ್ಶನದ ನಿರೀಕ್ಷೆಯೊಂದಿಗೆ ಕೋಲ್ಕತ್ತಾ ತಂಡ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.


ಕೋಲ್ಕತ್ತಾ ಪ್ಲೇಯಿಂಗ್-11: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಮನ್ದೀಪ್ ಸಿಂಗ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಟಿಮ್ ಸೌಥಿ, ಅನುಕುಲ್ ರಾಯ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್ ಮತ್ತು ವರುಣ್ ಚಕ್ರವರ್ತಿ


ಇದನ್ನೂ ಓದಿ: Virat Kohli Alcohol: ವಿರಾಟ್’ಗೆ ಕುಡಿತದ ಚಟ! ಮದ್ಯ ಸೇವಿಸಿದರೆ ಅವರು ಮಾಡೋ ಈ ಕೆಲಸವನ್ನು ತಡೆಯೋರೆ ಇಲ್ಲ..!


ಪಂಜಾಬ್ ಕಿಂಗ್ಸ್‌ ಪ್ಲೇಯಿಂಗ್-11: ಶಿಖರ್ ಧವನ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ಶಾರುಖ್ ಖಾನ್, ಸ್ಯಾಮ್ ಕರೆನ್, ಸಿಕಂದರ್ ರಜಾ, ನಾಥನ್ ಎಲ್ಲಿಸ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್ ಮತ್ತು ಅರ್ಷದೀಪ್ ಸಿಂಗ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.