Delhi Capitals vs Mumbai Indians: ಐಪಿಎಲ್ 2023ರ 16 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿವೆ. ಮುಂಬೈ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ. ಈ ಪಂದ್ಯದಲ್ಲಿ ಡೆಲ್ಲಿ ತಂಡಕ್ಕೆ ಯುವ ಕ್ರಿಕೆಟಿಗನೊಬ್ಬನ ಪಾದಾರ್ಪಣೆ ಮಾಡಿದ್ದಾನೆ. ಈ ಕ್ರಿಕೆಟಿಗ ತನ್ನ ತಂಡವನ್ನು ಒಮ್ಮೆ ವಿಶ್ವ ಚಾಂಪಿಯನ್‌ ಆಗಿ ಮಾಡಿದ್ದಾನೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Team India: “ಆಕೆ ಜೊತೆ 2 ದಿನ ರೂಂನಲ್ಲಿ…”: ಬಯಲಾಯ್ತು ಟೀಂ ಇಂಡಿಯಾದ ಸ್ಟಾರ್ ಆಟಗಾರನ ಪ್ರೇಮಪುರಾಣ!


ಈ ಯುವ ಕ್ರಿಕೆಟಿಗನ ಚೊಚ್ಚಲ ಐಪಿಎಲ್:


ಅಂಡರ್-19 ವಿಶ್ವಕಪ್ 2022 ರಲ್ಲಿ ಭಾರತವನ್ನು ಚಾಂಪಿಯನ್ ಮಾಡಿದ ನಾಯಕ ಯಶ್ ಧುಲ್, ದೆಹಲಿ ಕ್ಯಾಪಿಟಲ್ಸ್‌ ತಂಡದ ಮೂಲಕ ಐಪಿಎಲ್‌’ಗೆ ಪಾದಾರ್ಪಣೆ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಪ್ಲೇಯಿಂಗ್-11 ರಲ್ಲಿ ಯಶ್‌’ಗೆ ದೆಹಲಿ ತಂಡದ ಮ್ಯಾನೇಜ್‌’ಮೆಂಟ್ ಅವಕಾಶ ನೀಡಿದೆ. ವೇಗದ ಬೌಲರ್ ಖಲೀಲ್ ಅಹ್ಮದ್ ಬದಲಿಗೆ ಯಶ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಖಲೀಲ್ ಈ ಪಂದ್ಯದಲ್ಲಿ ಆಡಲು ಲಭ್ಯವಿಲ್ಲ.


ಯಶ್ ಧುಲ್ ಅವರ ನಾಯಕತ್ವದಲ್ಲಿ, ಭಾರತದ ಅಂಡರ್ -19 ವಿಶ್ವಕಪ್ ತಂಡವು ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಆಯಿತು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಧುಲ್ 110 ರನ್‌’ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಅದರ ಆಧಾರದ ಮೇಲೆ ತಂಡವು ಫೈನಲ್‌’ಗೆ ತಲುಪಲು ಸಾಧ್ಯವಾಯಿತು. ಈ ಗೆಲುವಿನೊಂದಿಗೆ ಭಾರತವನ್ನು ಅಂಡರ್-19 ವಿಶ್ವ ಚಾಂಪಿಯನ್ ಮಾಡಿದ ಮೊಹಮ್ಮದ್ ಕೈಫ್, ವಿರಾಟ್ ಕೊಹ್ಲಿ, ಉನ್ಮುಕ್ತ್ ಚಂದ್ ಮತ್ತು ಪೃಥ್ವಿ ಶಾ ಅವರಂತಹ ನಾಯಕರೊಂದಿಗೆ ಯಶ್ ಧುಲ್ ಅವರ ಹೆಸರು ಸೇರಿಕೊಂಡಿದೆ.


ಉಭಯ ತಂಡಗಳ ಪ್ಲೇಯಿಂಗ್ 11:


ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಪೃಥ್ವಿ ಶಾ, ಡೇವಿಡ್ ವಾರ್ನರ್ (ನಾ), ಮನೀಶ್ ಪಾಂಡೆ, ಯಶ್ ಧುಲ್, ರೋವ್‌ಮನ್ ಪೊವೆಲ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಅಭಿಷೇಕ್ ಪೊರೆಲ್ (ವಿ.ಕೀ), ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಮುಸ್ತಾಫಿಜುರ್ ರೆಹಮಾನ್


ಇದನ್ನೂ ಓದಿ: Gautham Gambhir: “ಶ್… ಸೈಲೆನ್ಸ್!”- ಮೈದಾನದಲ್ಲಿ RCB ಫ್ಯಾನ್ಸ್’ಗೆ ಖಡಕ್ ಸೂಚನೆ ಕೊಟ್ಟ ಗಂಭೀರ್!


ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾ), ಇಶಾನ್ ಕಿಶನ್ (ವಿ.ಕೀ), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಅರ್ಷದ್ ಖಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ರಿಲೆ ಮೆರೆಡಿತ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ