Team India: “ಆಕೆ ಜೊತೆ 2 ದಿನ ರೂಂನಲ್ಲಿ…”: ಬಯಲಾಯ್ತು ಟೀಂ ಇಂಡಿಯಾದ ಸ್ಟಾರ್ ಆಟಗಾರನ ಪ್ರೇಮಪುರಾಣ!

Shikhar Dhawan Viral Video: ಶಿಖರ್ ಧವನ್ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಅದರಲ್ಲಿ ಧವನ್ ಮತ್ತೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. 2021 ರಲ್ಲಿ, ಧವನ್ ತನ್ನ ಮೊದಲ ಹೆಂಡತಿಯಿಂದ ಬೇರ್ಪಟ್ಟರು. ಆದರೆ ಈಗ ವೈರಲ್ ಆದ ಈ ವೀಡಿಯೋ ನೋಡಿದರೆ ಶಿಖರ್ ಧವನ್ ಒಬ್ಬ ಹುಡುಗಿಯ ಬಗ್ಗೆ ಮಾತನಾಡುತ್ತಿರುವಂತಿದೆ.

Written by - Bhavishya Shetty | Last Updated : Apr 11, 2023, 08:25 PM IST
    • ಶಿಖರ್ ಧವನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಿದ್ದಾರೆ.
    • ಶಿಖರ್ ಧವನ್ ಪ್ರಸ್ತುತ ಐಪಿಎಲ್ 2023 ರಲ್ಲಿ ಪಂಜಾಬ್ ಕಿಂಗ್ಸ್ ನಾಯಕತ್ವವನ್ನು ನಿರ್ವಹಿಸುತ್ತಿದ್ದಾರೆ.
    • ಪ್ರಸ್ತುತ ಐಪಿಎಲ್ 2023 ರಲ್ಲಿ ಪಂಜಾಬ್ ಕಿಂಗ್ಸ್ ನಾಯಕತ್ವವನ್ನು ನಿರ್ವಹಿಸುತ್ತಿದ್ದಾರೆ
Team India: “ಆಕೆ ಜೊತೆ 2 ದಿನ ರೂಂನಲ್ಲಿ…”: ಬಯಲಾಯ್ತು ಟೀಂ ಇಂಡಿಯಾದ ಸ್ಟಾರ್ ಆಟಗಾರನ ಪ್ರೇಮಪುರಾಣ! title=
Shikhar Dhawan

Shikhar Dhawan Viral Video: ಐಪಿಎಲ್’ನಲ್ಲಿ ಟೀಂ ಇಂಡಿಯಾದ ಹಿರಿಯ ಆರಂಭಿಕ ಆಟಗಾರ ಶಿಖರ್ ಧವನ್ ಬ್ಯಾಟ್ ಬಿರುಸಾಗಿ ಓಡುತ್ತಿದೆ ಎನ್ನಬಹುದು. ಈ ನಡುವೆ ಶಿಖರ್ ಧವನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ, ಶಿಖರ್ ಧವನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಿದ್ದಾರೆ. ಶಿಖರ್ ಧವನ್ ಪ್ರಸ್ತುತ ಐಪಿಎಲ್ 2023 ರಲ್ಲಿ ಪಂಜಾಬ್ ಕಿಂಗ್ಸ್ ನಾಯಕತ್ವವನ್ನು ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: RCB ಸೋಲುತ್ತಿದ್ದಂತೆ ವಿಚಿತ್ರ ರಿಯಾಕ್ಷನ್ ಕೊಟ್ಟ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ! ಶಾಕಿಂಗ್ ವಿಡಿಯೋ ನೋಡಿ!

ಕುಟುಕು ಕಾರ್ಯಾಚರಣೆಗೆ ಶಿಖರ್ ಧವನ್ ಬಲಿ?

ಶಿಖರ್ ಧವನ್ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಅದರಲ್ಲಿ ಧವನ್ ಮತ್ತೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. 2021 ರಲ್ಲಿ, ಧವನ್ ತನ್ನ ಮೊದಲ ಹೆಂಡತಿಯಿಂದ ಬೇರ್ಪಟ್ಟರು. ಆದರೆ ಈಗ ವೈರಲ್ ಆದ ಈ ವೀಡಿಯೋ ನೋಡಿದರೆ ಶಿಖರ್ ಧವನ್ ಒಬ್ಬ ಹುಡುಗಿಯ ಬಗ್ಗೆ ಮಾತನಾಡುತ್ತಿರುವಂತಿದೆ. ಈ ವೀಡಿಯೋದಲ್ಲಿ ಎದುರಿಗಿದ್ದ ವ್ಯಕ್ತಿ, “ನೀನು ಅವರ ಬಗ್ಗೆ ಹೇಳುತ್ತಿದ್ದೀಯಾ, ಏನಾಯ್ತು?” ಎಂದು ಕೇಳಿದ್ದಾರೆ.

ಈ ಬಗ್ಗೆ ಶಿಖರ್ ಧವನ್, “ಆ ಸಮಯದಲ್ಲಿ ನನ್ನ ಜೀವನದ ಕೆಟ್ಟ ಸಮಯ ನಡೆಯುತ್ತಿತ್ತು. ಅದೇ ಸಂದರ್ಭದಲ್ಲಿ ನಾನು ಅರೋರಾ ಜಿ ಅವರ  ರ್ಮ್ ಹೌಸ್ ಪಾರ್ಟಿಗೆ ಹೋಗಿದ್ದೆ. ಅಲ್ಲಿ ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾದೆ. ಆಗ ನನಗೆ ಲವ್ ಅಟ್ ಫಸ್ಟ್ ಸೈಟ್ ಥರ ಆಗೋಯ್ತು. ನಾನು ನೋಡಿದೆ, ನೋಡುತ್ತಲೇ ಇದ್ದೆ” ಎಂದು ಹೇಳಿದ್ದಾರೆ.

ಇದೇ ವೇಳೆ ಮುಂದೆ ಮಾತನಾಡಿದ ಅವರು, “ನಿಮಗೆ ನನ್ನ ಸಹೋದರ ಗೊತ್ತಲ್ವಾ? ಅವರ ಮನೆಯಲ್ಲಿ 2 ದಿನ ಒಟ್ಟಿಗೆ ಇದ್ದೆವು” ಎಂದು ಹೇಳಿದ್ದಾರೆ. ಈ ವಿಡಿಯೋ ಹೊರಬಿದ್ದ ತಕ್ಷಣ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ. ಆದರೆ, ನೀವು ವೀಡಿಯೋ ರೆಕಾರ್ಡ್ ಮಾಡುತ್ತಿದ್ದೀರಾ? ಎಂದು ಗಬ್ಬರ್ ವೀಡಿಯೋ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಗೆ ಕೇಳುತ್ತಿದ್ದಂತೆ ಬಂದ್ ಮಾಡಿದ್ದಾರೆ. ಇನ್ನು ಈ ವಿಡಿಯೋ ಬಗ್ಗೆ ಶಿಖರ್ ಧವನ್ ಯಾವುದೇ ಹೇಳಿಕೆ ನೀಡಿಲ್ಲ.

ಶಿಖರ್ ಧವನ್ 2012 ರಲ್ಲಿ ಆಯೇಶಾ ಮುಖರ್ಜಿ ಅವರನ್ನು ವಿವಾಹವಾದರು. ಆಯೇಷಾ ಮುಖರ್ಜಿ ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಆಯೇಷಾಗೆ ಇದು ಎರಡನೇ ಮದುವೆಯಾಗಿದ್ದು, ಅವರಿಗೆ ಈಗಾಗಲೇ 2 ಹೆಣ್ಣು ಮಕ್ಕಳಿದ್ದಾರೆ. ಧವನ್ ಮತ್ತು ಆಯೇಷಾ ಅವರ ಮದುವೆಯ ನಂತರ, 2014 ರಲ್ಲಿ ಅವರ ಕುಟುಂಬದಲ್ಲಿ ಒಬ್ಬ ಮಗ ಜನಿಸಿದನು. 2020ರಲ್ಲಿ ಅವರ ಉತ್ತಮ ಸಂಬಂಧದಲ್ಲಿ ಬಿರುಕು ಮೂಡಲು ಪ್ರಾರಂಭಿಸಿ, ಇಬ್ಬರೂ ದೂರವಿರಲು ನಿರ್ಧರಿಸಿದರು. ಇದು ವಿಚ್ಛೇದನದ ಹಂತಕ್ಕೆ ಬಂದಿದೆ. ಈಗ ಇಬ್ಬರೂ ಕಳೆದ ಎರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ: Gautham Gambhir: “ಶ್… ಸೈಲೆನ್ಸ್!”- ಮೈದಾನದಲ್ಲಿ RCB ಫ್ಯಾನ್ಸ್’ಗೆ ಖಡಕ್ ಸೂಚನೆ ಕೊಟ್ಟ ಗಂಭೀರ್!

IPL 2023 ರಲ್ಲಿ ಉತ್ತಮ ಪ್ರದರ್ಶನ:

ಶಿಖರ್ ಧವನ್ ಐಪಿಎಲ್ 2023 ರಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಅವರು ಮೂರು ಪಂದ್ಯಗಳಲ್ಲಿ 225.00 ಸರಾಸರಿಯಲ್ಲಿ 225 ರನ್ ಗಳಿಸಿದ್ದಾರೆ. 2 ಅರ್ಧಶತಕ ಸಿಡಿಸಿರುವ ಅವರು, ಏಪ್ರಿಲ್ 9 ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಶಿಖರ್ ಧವನ್ ಅಜೇಯ 99 ರನ್ ಗಳಿಸಿದ್ದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News