IPL’ನಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆದ ಸ್ಟಾರ್ ಆಟಗಾರ ಇವರೇ: ಹೆಸರು ಕೇಳಿದ್ರೆ ಶಾಕ್ ಆಗೋದು ಪಕ್ಕಾ!
IPL 2023 News: ಭಾರತದ ದಿಗ್ಗಜ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ದಾಖಲೆಯನ್ನು ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಟೀಂ ಇಂಡಿಯಾದ ಪ್ರಸ್ತುತ ನಾಯಕ ರೋಹಿತ್ ಶರ್ಮಾ ಅವರು ಐಪಿಎಲ್’ನಲ್ಲಿ ಗರಿಷ್ಠ 14 ಬಾರಿ ಶೂನ್ಯ ಸ್ಕೋರ್’ನಲ್ಲಿ ಔಟಾಗಿದ್ದಾರೆ.
IPL 2023 News: ಭಾರತದ ಹಿರಿಯ ಕ್ರಿಕೆಟಿಗ ಮತ್ತು ನಾಯಕ ಐಪಿಎಲ್’ನಲ್ಲಿ ವಿಭಿನ್ನವಾದ ದಾಖಲೆಯನ್ನು ಹೊಂದಿದ್ದಾರೆ. ಬ್ಯಾಟ್ಸ್‌ಮನ್’ಗೆ ಕ್ರಿಕೆಟ್‌ನಲ್ಲಿ ಅತ್ಯಂತ ಮುಜುಗರದ ವಿಷಯವೆಂದರೆ ಯಾವುದೇ ರನ್ ಗಳಿಸದೆ ಔಟಾಗುವುದು. ಐಪಿಎಲ್’ನಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಭಾರತದ ಡ್ಯಾಶಿಂಗ್ ನಾಯಕ ಮತ್ತು ಕ್ರಿಕೆಟಿಗ ಯಾರೆಂದು ನಿಮಗೆ ತಿಳಿದಿದೆಯೇ? ಐಪಿಎಲ್’ನಲ್ಲಿ ಈ ಕೆಟ್ಟ ದಾಖಲೆಯನ್ನು ತನ್ನ ಹೆಸರಿನಲ್ಲಿ ದಾಖಲಿಸಿದ ಭಾರತದ ಈ ದಿಗ್ಗಜ ನಾಯಕನ ಹೆಸರು ತಿಳಿದರೆ ಅಭಿಮಾನಿಗಳು ಆಶ್ಚರ್ಯಚಕಿತರಾಗುತ್ತಾರೆ.
ಇದನ್ನೂ ಓದಿ: IPL 2023 ಪ್ರಾರಂಭಕ್ಕೂ ಮುನ್ನ ಚೆನ್ನೈ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್: ಧೋನಿ ಸಹ-ಆಟಗಾರ ಆಡೋದು ಡೌಟ್
ಭಾರತದ ದಿಗ್ಗಜ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ದಾಖಲೆಯನ್ನು ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಟೀಂ ಇಂಡಿಯಾದ ಪ್ರಸ್ತುತ ನಾಯಕ ರೋಹಿತ್ ಶರ್ಮಾ ಅವರು ಐಪಿಎಲ್’ನಲ್ಲಿ ಗರಿಷ್ಠ 14 ಬಾರಿ ಶೂನ್ಯ ಸ್ಕೋರ್’ನಲ್ಲಿ ಔಟಾಗಿದ್ದಾರೆ. ರೋಹಿತ್ ಶರ್ಮಾ ಮತ್ತು ಮಂದೀಪ್ ಸಿಂಗ್ ಐಪಿಎಲ್’ನಲ್ಲಿ ಅತಿ ಹೆಚ್ಚು ಡಕ್’ಗಳಿಗೆ ಔಟಾಗುವ ವಿಷಯದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಮತ್ತು ಮಂದೀಪ್ ಸಿಂಗ್ ಐಪಿಎಲ್‌ನಲ್ಲಿ ಗರಿಷ್ಠ 14 ಬಾರಿ ಶೂನ್ಯಕ್ಕೆ ಔಟ್ ಆಗಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆದ ಬ್ಯಾಟ್ಸ್’ಮನ್’ಗಳು:
1. ರೋಹಿತ್ ಶರ್ಮಾ - 14
2. ಮನ್ದೀಪ್ ಸಿಂಗ್ - 14
3. ಪಿಯೂಷ್ ಚಾಲ್ - 13
4. ಹರ್ಭಜನ್ ಸಿಂಗ್ - 13
5. ಪಾರ್ಥಿವ್ ಪಟೇಲ್ - 13
6. ಅಜಿಂಕ್ಯ ರಹಾನೆ - 13
7. ಅಂಬಟಿ ರಾಯುಡು – 13
8. ದಿನೇಶ್ ಕಾರ್ತಿಕ್ - 13
9. ರಶೀದ್ ಖಾನ್ - 12
10. ಸುನಿಲ್ ನರೈನ್ - 12
ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ಮೊದಲ ಪಂದ್ಯ:
IPL 2023 ರ ಸೀಸನ್ ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಏಪ್ರಿಲ್ 2 ರಂದು ಆಡಬೇಕಾಗಿದೆ. ಐದು ಬಾರಿಯ ದಾಖಲೆಯ ಚಾಂಪಿಯನ್ ತಂಡವು ಕಳೆದ ಋತುವಿನ ಕಳಪೆ ಪ್ರದರ್ಶನವನ್ನು ಬಿಟ್ಟು ಪ್ರಶಸ್ತಿಗೆ ಬಲವಾದ ಶ್ರಮ ವಹಿಸಬೇಕಾಗಿದೆ. ಮುಂಬೈ ಇಂಡಿಯನ್ಸ್ ತಂಡ 2022 ರಲ್ಲಿ 14 ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ ಕೊನೆಯ ಸ್ಥಾನದಲ್ಲಿತ್ತು. ಐಪಿಎಲ್‌ನ 15 ಸೀಸನ್’ಗಳಲ್ಲಿ ತಂಡವು ಮೊದಲ ಬಾರಿಗೆ ಕೊನೆಯ ಸ್ಥಾನದಲ್ಲಿ ಇತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ: ಸೀರೆಯಲ್ಲಿ ಫುಟ್ಬಾಲ್ ಆಡಿದ ಮಹಿಳೆಯರು ವಿಡಿಯೋ ಫುಲ್ ವೈರಲ್
IPL 2023ರಲ್ಲಿ ಮುಂಬೈ ಇಂಡಿಯನ್ಸ್ ತಂಡ:
ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಡೆವಾಲ್ಡ್ ಬ್ರೂವಿಸ್, ತಿಲಕ್ ವರ್ಮಾ, ಜೋಫ್ರಾ ಆರ್ಚರ್, ಟಿಮ್ ಡೇವಿಡ್, ಮೊಹಮ್ಮದ್ ಅರ್ಷದ್ ಖಾನ್, ರಮಣದೀಪ್ ಸಿಂಗ್, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಟ್ರಿಸ್ಟಾನ್ ಸ್ಟಬ್ಸ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆಂಡಾರ್ಫ್, ಆಕಾಶ್ ಮಧ್ವಾಲ್ ಗ್ರೀನ್, ಜ್ಯೆ ರಿಚರ್ಡ್ಸನ್, ಪಿಯೂಷ್ ಚಾವ್ಲಾ, ಡ್ವೇನ್ ಜಾನ್ಸನ್, ವಿಷ್ಣು ವಿನೋದ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ರಾಘವ್ ಗೋಯಲ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.