RCB ಗೆ ಗೆಲುವಿನ ಬೆನ್ನಲ್ಲೇ ಆಘಾತ! ಕೋಟಿ ರೂ. ಖರ್ಚು ಮಾಡಿ ಖರೀದಿಸಿದ್ದ ಈ ಆಟಗಾರ ಟೂರ್ನಿಯಿಂದಲೇ ಹೊರಕ್ಕೆ…
Reece Topley: ಮೊದಲು ಬ್ಯಾಟಿಂಗ್’ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 172 ರನ್‌ಗಳ ಟಾರ್ಗೆಟ್ ನೀಡಿತ್ತು. ಆರ್ ಸಿ ಬಿ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಆದರೆ ತಿಲಕ್ ವರ್ಮಾ ಅವರ ಅತ್ಯುತ್ತಮ ಬ್ಯಾಟಿಂಗ್’ನಿಂದಾಗಿ ಮುಂಬೈ 171 ರನ್ ಗಳಿಸಲು ಸಾಧ್ಯವಾಯಿತು.
Reece Topley: ಐಪಿಎಲ್ 2023ರ ಐದನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ನಾಯಕತ್ವ ವಹಿಸಿದ್ದು ಭರ್ಜರಿ ಗೆಲುವು ಸಾಧಿಸಿದೆ. ಆದರೆ ಈ ಮಧ್ಯೆ RCB ಪಾಲಿಗೆ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಖರೀದಿಸಿದ್ದ ಈ ಆಟಗಾರ ಹೊರಗುಳಿದಿದ್ದಾನೆ.
ಇದನ್ನೂ ಓದಿ: RCB: ಕೊಹ್ಲಿ-ಫಾಫ್ ಭರ್ಜರಿ ಜೊತೆಯಾಟ: ತವರಿನಲ್ಲಿ ಅಬ್ಬರಿಸಿ ಅದ್ಧೂರಿ ಶುಭಾರಂಭ ಮಾಡಿದ ‘ಬೆಂಗಳೂರು’
ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ವೇಗದ ಬೌಲರ್ ರೀಸ್ ಟೋಪ್ಲೆ ಗಾಯದ ಕಾರಣ ಇಡೀ ಪಂದ್ಯದಿಂದ ಹೊರಗುಳಿದಿದ್ದಾರೆ. ಫೀಲ್ಡಿಂಗ್ ವೇಳೆ ಟೋಪ್ಲಿ ಗಾಯಗೊಂಡಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಭುಜದ ಗಾಯದಿಂದ ಅವರು ಇನ್ನು ಮುಂದೆ ಪಂದ್ಯದ ಭಾಗವಾಗಿರಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಈ ಪಂದ್ಯದ ದೃಷ್ಟಿಯಿಂದ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಟೋಪ್ಲಿ 2 ಓವರ್ ಬೌಲ್ ಮಾಡಿ 14 ರನ್ ನೀಡಿ 1 ವಿಕೆಟ್ ಪಡೆದಿದ್ದರು.
ಮೊದಲು ಬ್ಯಾಟಿಂಗ್’ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 172 ರನ್‌ಗಳ ಟಾರ್ಗೆಟ್ ನೀಡಿತ್ತು. ಆರ್ ಸಿ ಬಿ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಆದರೆ ತಿಲಕ್ ವರ್ಮಾ ಅವರ ಅತ್ಯುತ್ತಮ ಬ್ಯಾಟಿಂಗ್’ನಿಂದಾಗಿ ಮುಂಬೈ 171 ರನ್ ಗಳಿಸಲು ಸಾಧ್ಯವಾಯಿತು. ಆರ್ ಸಿ ಬಿ ಪರ ಸ್ಪಿನ್ನರ್ ಕರ್ಣ್ ಶರ್ಮಾ ಗರಿಷ್ಠ 2 ವಿಕೆಟ್ ಪಡೆದರೆ, ಸಿರಾಜ್, ಬ್ರೇಸ್‌ವೆಲ್, ಟೋಪ್ಲಿ, ಹರ್ಷಲ್ ಮತ್ತು ಆಕಾಶದೀಪ್ ತಲಾ 1 ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್ ಬ್ಯಾಟ್ಸ್’ಮನ್ ತಿಲಕ್ ವರ್ಮಾ 46 ಎಸೆತಗಳನ್ನು ಎದುರಿಸಿ 84 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿಗಳು ಮತ್ತು 4 ದೊಡ್ಡ ಸಿಕ್ಸರ್‌ಗಳು ಸೇರಿದ್ದವು. ತಿಲಕ್ ವರ್ಮಾ ಬಿಟ್ಟರೆ ತಂಡದ ಯಾವೊಬ್ಬ ಬ್ಯಾಟ್ಸ್ ಮನ್ ಕೂಡ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾಗಲಿಲ್ಲ.
ಇದನ್ನೂ ಓದಿ: Faf du Plessis: 38 ಹರೆಯದಲ್ಲೂ 23ರ ತರುಣನ ಶಕ್ತಿ: ಸೂಪರ್’ಮ್ಯಾನ್ ಥರ ಹಾರಿ ಕ್ಯಾಚ್ ಹಿಡಿದ ಫಾಫ್ ಆಟಕ್ಕೆ ಜಗತ್ತೇ ಫಿದಾ!
ಇನ್ನೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಂಟು ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಅದ್ಭುತ ಜೊತೆಯಾಟವನ್ನಾಡಿದ್ದಾರೆ. ಬೌಲಿಂಗ್ ಬ್ಯಾಟಿಂಗ್ ಎರಡರಲ್ಲೂ ಅಬ್ಬರಿಸಿದ ಆರ್ ಸಿ ಬಿ ತವರಿನಲ್ಲಿ ಅದ್ಧೂರಿ ಶುಭಾರಂಭ ಮಾಡಿದೆ. 2 ವಿಕೆಟ್ ನಷ್ಟಕ್ಕೆ 172 ರನ್ ಬಾರಿಸಿದ ಬೆಂಗಳೂರು ಪರ ವಿರಾಟ್ ಕೊಹ್ಲಿ 82 ರನ್ ಕಲೆ ಹಾಕಿದರೆ, ಫಾಫ್ ಡು ಪ್ಲೆಸಿಸ್ 73 ರನ್ ಸಿಡಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.