Mitchell Marsh: ಐಪಿಎಲ್ 2023 ರಲ್ಲಿ, ಇಲ್ಲಿಯವರೆಗೆ ಒಂದೇ ಒಂದು ಪಂದ್ಯವನ್ನು ಗೆಲ್ಲದ ದೆಹಲಿ ತಂಡವು 11 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಹಿನ್ನಡೆ ಅನುಭವಿಸಿದೆ. ತಂಡದ ಅನುಭವಿ ಆಟಗಾರರು ಏಕಾಏಕಿ ತಂಡವನ್ನು ತೊರೆದು ತಮ್ಮ ದೇಶಕ್ಕೆ ಮರಳಿದ್ದಾರೆ. ಈ ಆಟಗಾರ ತಂಡಕ್ಕಾಗಿ ಇದುವರೆಗೆ 2 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದರು. ಇದೀಗ ಈ ಆಟಗಾರ ತನ್ನ ದೇಶಕ್ಕೆ ಮರಳಲು ನಿರ್ಧರಿಸುವ ಮೂಲಕ ತಂಡಕ್ಕೆ ದೊಡ್ಡ ಹೊಡೆತ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: KKR ವಿರುದ್ಧ RCB ಸೋತಿದಕ್ಕೆ ಖುಷಿಯಲ್ಲಿ ಕುಣಿದಾಡಿದ ‘ಪ್ರೇಮಲೋಕ’ ನಟಿ ಜೂಹಿ ಚಾವ್ಲಾ! ಆಮೇಲೆ ಏನಂದ್ರು ಗೊತ್ತಾ?


ಆಸ್ಟ್ರೇಲಿಯಾದ ಮಾರಣಾಂತಿಕ ಆಲ್‌ ರೌಂಡರ್ ಮಿಚೆಲ್ ಮಾರ್ಷ್ ಮನೆಗೆ ಹಿಂದಿರುಗಿದ್ದಾರೆ ಎಂಬ ವರದಿಗಳಿವೆ. ಕ್ರಿಕ್‌ ಬಜ್ ಪ್ರಕಾರ, ಮಾರ್ಷ್ ಮದುವೆಯಾಗಲಿದ್ದು. ಈ ಕಾರಣದಿಂದ ಅವರು ಹಿಂತಿರುಗಿದ್ದಾರೆ. 11 ಸೆಪ್ಟೆಂಬರ್ 2022 ರಂದು ಮಾರ್ಷ್ ತನ್ನ ಗೆಳತಿ ಗ್ರೇಟಾ ಮಾರ್ಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಾರ್ಷ್ ಮತ್ತು ಗ್ರೆಟಾ ಕೂಡ ದೀರ್ಘಕಾಲ ಸಂಬಂಧದಲ್ಲಿದ್ದರು. ಇದೀಗ ಒಂದು ವಾರದ ಮಟ್ಟಿಗೆ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದಾದ ಬಳಿಕ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.


ಇದುವರೆಗೆ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಮಾರ್ಷ್ ಪ್ಲೇಯಿಂಗ್-11 ರ ಭಾಗವಾಗಿದ್ದಾರೆ. ಆದರೆ, ಅವರ ಬ್ಯಾಟ್‌’ನಿಂದ ರನ್‌’ಗಳು ಬಂದಿಲ್ಲ. ಕಳೆದ ಪಂದ್ಯದಲ್ಲಿ ಮಾರ್ಷ್ ಬೌಲಿಂಗ್ ಮಾಡುವಾಗ ಒಂದು ವಿಕೆಟ್ ಪಡೆದಿದ್ದಾರೆ.


ಇದನ್ನೂ ಓದಿ: IPL 2023: ಹೀನಾಯ ಸೋಲಿನ ಬಳಿಕ RCBಯಿಂದ ಹೊರಬಿದ್ದ ಆಟಗಾರ: ಈ ಮಾರಕ ಬೌಲರ್ ಗ್ರ್ಯಾಂಡ್ ಎಂಟ್ರಿ!


ಟೂರ್ನಿಯಲ್ಲಿ ಡೆಲ್ಲಿ ಕಳಪೆ ಆರಂಭ:


ಡೆಲ್ಲಿ ಕ್ಯಾಪಿಟಲ್ಸ್ ತಂಡವು ಟೂರ್ನಿಯಲ್ಲಿ ಅತ್ಯಂತ ಕೆಟ್ಟ ಆರಂಭವನ್ನು ಹೊಂದಿದೆ. ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ ಎರಡು ಪಂದ್ಯಗಳನ್ನು ಆಡಿದ್ದು, ಎರಡರಲ್ಲೂ ಸೋಲು ಕಂಡಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ತಂಡ 50 ರನ್‌’ಗಳಿಂದ ಸೋಲನುಭವಿಸಿತ್ತು. ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಡೆಲ್ಲಿ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಇದೀಗ ಮುಂದಿನ ಪಂದ್ಯವು ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯಲಿದ್ದು, ಗೆಲುವಿನ ಫಾರ್ಮ್ ಗೆ ಬರಲು ಪ್ಲಾನ್ ಮಾಡಿದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.