IPL 2023 News: IPL 2023ರ ಪ್ಲೇ-ಆಫ್ ರೇಸ್‌ ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೊರಗುಳಿದಿದೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ ದೊಡ್ಡ ಶತ್ರು ಒಬ್ಬರು ಅವರ ಸುಟ್ಟಗಾಯಕ್ಕೆ ಉಪ್ಪು ಎರಚುವ ಕೆಲಸವನ್ನು ಮಾಡಿದ್ದಾರೆ. ವಿರಾಟ್ ಕೊಹ್ಲಿಯ ಈ ದೊಡ್ಡ ಶತ್ರು ಮತ್ತೊಮ್ಮೆ ಅವರ ಅಭಿಮಾನಿಗಳ ದ್ವೇಷಕ್ಕೆ ಕಾರಣವಾಗಿದ್ದಾರೆ.


COMMERCIAL BREAK
SCROLL TO CONTINUE READING

ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್‌ ಗಳಿಂದ ಸೋಲಿಸಿತು. ಈ ವೇಳೆ ವಿರಾಟ್ ಕೊಹ್ಲಿಯ ದೊಡ್ಡ ಶತ್ರು ಅವರನ್ನು ಗೇಲಿ ಮಾಡಿದ್ದರು.


ಇದನ್ನೂ ಓದಿ: RCB ಪ್ಲೇಆಫ್’ನಿಂದ ಔಟ್! ಈ ಆಟಗಾರನೇ ಸೋಲಿಗೆ ಕಾರಣ ಎಂದು ಪಬ್ಲಿಕ್’ನಲ್ಲಿಯೇ ದೂಷಿಸಿದ ಡು ಪ್ಲೆಸಿಸ್


ಲಕ್ನೋ ಸೂಪರ್ ಜೈಂಟ್ಸ್ ಪರ ಕ್ರಿಕೆಟ್ ಆಡುತ್ತಿರುವ ಅಫ್ಘಾನ್ ಕ್ರಿಕೆಟಿಗ ನವೀನ್ ಉಲ್ ಹಕ್ ಅವರು ವಿರಾಟ್ ಕೊಹ್ಲಿಯನ್ನು ಗೇಲಿ ಮಾಡುವ ಮೀಮ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿಯ ಸುಟ್ಟಗಾಯಕ್ಕೆ ಉಪ್ಪು ಸುರಿಯಲು ನವೀನ್-ಉಲ್-ಹಕ್ ಹೀಗೆ ಮಾಡಿದ್ದಾರೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.  


ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿನ ನಂತರ ನವೀನ್-ಉಲ್-ಹಕ್ ಇನ್‌ ಸ್ಟಾಗ್ರಾಂ ಸ್ಟೋರಿಯಲ್ಲಿ ತಮಾಷೆಯ ಮೀಮ್ಸ್ ನ್ನು ಹಂಚಿಕೊಂಡಿದ್ದಾರೆ. ಈ ಮೀಮ್ಸ್ ನಲ್ಲಿ ಒಬ್ಬ ವ್ಯಕ್ತಿ ಜೋರಾಗಿ ನಗುತ್ತಿರುವುದು ಮತ್ತು ಚಪ್ಪಾಳೆ ತಟ್ಟುತ್ತಿರುವುದನ್ನು ಕಾಣಬಹುದು. ನವೀನ್-ಉಲ್-ಹಕ್ ಅವರ ಈ ಪೋಸ್ಟ್‌ ಕಂಡ ವಿರಾಟ್ ಕೊಹ್ಲಿ ಫ್ಯಾನ್ಸ್ ಕೆಂಡಾಮಂಡಲವಾಗಿದ್ದಾರೆ.


ಇತ್ತೀಚೆಗೆ ನವೀನ್-ಉಲ್-ಹಕ್ ಮೈದಾನದಲ್ಲಿರುವಾಗ ವಿರಾಟ್ ಅಭಿಮಾನಿಗಳು ಸ್ಟೇಡಿಯಂನಲ್ಲಿ ನಿಂತು ಕೊಹ್ಲಿ ಪರ ಘೋಷಣೆಗಳನ್ನು ಕೂಗುತ್ತಿದ್ದರು. ಈ ಸಂದರ್ಭದಲ್ಲಿ ನವೀನ್ ಭಾರತೀಯ ಫ್ಯಾನ್ಸ್’ಗೆ ‘ಶ್’ ಎಂಬ ಸನ್ನೆಯನ್ನು ಮಾಡಿದ್ದರು. ಈ ಸನ್ನಿವೇಶದಿಂದ ಅಭಿಮಾನಿಗಳು ಕುಪಿತಗೊಂಡಿದ್ದರು.


ಮೇ 1, 2023 ರಂದು ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌’ಸಿಬಿ) ಲಕ್ನೋವನ್ನು 18 ರನ್‌ ಗಳಿಂದ ಸೋಲಿಸಿತ್ತು. ಪಂದ್ಯದ ನಂತರ, ವಿರಾಟ್ ಕೊಹ್ಲಿ ಮತ್ತು ನವೀನ್-ಉಲ್-ಹಕ್ ನಡುವೆ ವಾಗ್ವಾದ ನಡೆದಿತ್ತು. ಪಂದ್ಯದಲ್ಲಿ ಗೌತಮ್ ಗಂಭೀರ್ ಕೂಡ ವಿರಾಟ್ ಕೊಹ್ಲಿ ಜೊತೆ ಜಗಳವಾಡಿದ್ದರು.


ಇದನ್ನೂ ಓದಿ: Virat Kohli: ಒಬ್ಬರಲ್ಲ, ಇಬ್ಬರಲ್ಲ.. ಅನುಷ್ಕಾ ಜೊತೆ ಮದುವೆಗೂ ಮುನ್ನ ಕೊಹ್ಲಿ ಈ 6 ಹುಡುಗಿಯರ ಜೊತೆ ಡೇಟಿಂಗ್ ಮಾಡಿದ್ರು!


ಶುಭ್‌ಮನ್ ಗಿಲ್ ಅವರ ಇನ್ನಿಂಗ್ಸ್ ವಿರಾಟ್ ಕೊಹ್ಲಿ ಅವರ ಸತತ ಎರಡನೇ ಶತಕವನ್ನು ಮರೆಮಾಚಿದೆ. ಈ ಕಾರಣದಿಂದಾಗಿ ಗುಜರಾತ್ ಟೈಟಾನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು 6 ವಿಕೆಟ್‌ ಗಳಿಂದ ಸೋಲಿಸಿತು. ಐಪಿಎಲ್ ಪ್ಲೇ-ಆಫ್‌ ಗೆ ತಲುಪುವ ಕನಸನ್ನು ಭಗ್ನಗೊಳಿಸಿದೆ. ಆರ್‌ ಸಿ ಬಿಯ ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ಪ್ಲೇ ಆಫ್‌ ಗೆ ಪ್ರವೇಶಿಸಿದ ನಾಲ್ಕನೇ ತಂಡವಾಯಿತು. ಇದಕ್ಕೂ ಮುನ್ನ ಆರ್ ಸಿ ಬಿ ಸನ್‌ ರೈಸರ್ಸ್ ಹೈದರಾಬಾದ್ ತಂಡವನ್ನು ಎಂಟು ವಿಕೆಟ್‌ ಗಳಿಂದ ಸೋಲಿಸುವ ಮೂಲಕ ತಮ್ಮ ಅಂಕಗಳನ್ನು 16ಕ್ಕೆ ಏರಿಸಿಕೊಂಡಿದ್ದರು. ಆರ್‌ ಸಿ ಬಿ 14 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿ ಉಳಿಯುವ ಮೂಲಕ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ