RCB vs GT, IPL 2023: ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 6 ವಿಕೆಟ್ ಗಳ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ ಆಫ್ ರೇಸ್ ನಿಂದ ಹೊರಗುಳಿದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ನಿಂದ ಹೊರಗುಳಿದ ಕಾರಣ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ತಾಳ್ಮೆ ಕಳೆದುಕೊಂಡು, ಈ ಆಟಗಾರನೇ ಸೋಲಿಗೆ ಕಾರಣ ಎಂದು ಪಬ್ಲಿಕ್ ನಲ್ಲಿ ದೂಷಿಸಿದ್ದಾರೆ.
ಇದನ್ನೂ ಓದಿ: Team Indiaಗೆ ಸಿಕ್ಕಾಯ್ತು ಯಾರ್ಕರ್ ಸ್ಪೆಷಲಿಸ್ಟ್! ಜಸ್ಪ್ರೀತ್ ಬುಮ್ರಾ ಜಾಗ ತುಂಬೋದು ಈ ಆಟಗಾರನೇ…
ಐಪಿಎಲ್ ನ 16ನೇ ಸೀಸನ್ ನಲ್ಲಿಯೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರಾಸೆ ಅನುಭವಿಸಿದ್ದು, ಐಪಿಎಲ್ ಟ್ರೋಫಿ ಗೆಲ್ಲುವ ಕನಸು ನನಸಾಗಲಿಲ್ಲ. ಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 6 ವಿಕೆಟ್ ಗಳಿಂದ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್ ಆಸೆ ಭಗ್ನಗೊಂಡಿದೆ. ಪಂದ್ಯದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮಾತನಾಡಿದ್ದು, “ನಮ್ಮ ತಂಡದ ಅಗ್ರ-4 ಬ್ಯಾಟ್ಸ್ಮನ್’ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ, ಆದರೆ ಪಂದ್ಯವನ್ನು ಮುಗಿಸಲು ಸಾಧ್ಯವಾಗದಿರುವುದು ನಮ್ಮ ದೊಡ್ಡ ದೌರ್ಬಲ್ಯವಾಗಿದೆ” ಎಂದು ಹೇಳಿದರು.
“ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಗ್ರ 4 ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ, ಆದರೆ ನಮ್ಮ ಮಧ್ಯಮ ಕ್ರಮಾಂಕವು ಋತುವಿನ ಉದ್ದಕ್ಕೂ ರನ್ ಗಳಿಸಿಲ್ಲ” ಎಂದು ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ. “ಇನಿಂಗ್ಸ್ ನ ಅಂತ್ಯದಲ್ಲೂ ನಾವು ಗಳಿಸಬೇಕಾದಷ್ಟು ರನ್ ಗಳಿಸಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ ಋತುವಿನುದ್ದಕ್ಕೂ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು” ಎಂದರು.
ಇದನ್ನೂ ಓದಿ: ಅಬ್ಬಬ್ಬಾ ಚಿನ್ನದ ಬೆಲೆ ಇಷ್ಟೊಂದಾ? ರೂ.2000 ನೋಟ್ ಬ್ಯಾನ್ ಆಗ್ತಿದ್ದಂತೆ ಎಷ್ಟಾಗಿದೆ ಗೊತ್ತಾ ದರ
ಐಪಿಎಲ್ 2023ರಲ್ಲಿ ದಿನೇಶ್ ಕಾರ್ತಿಕ್ ಅವರ ಕಳಪೆ ಬ್ಯಾಟಿಂಗ್ ಬಗ್ಗೆ ಮಾತನಾಡಿದ ನಾಯಕ ಫಾಫ್ ಡು ಪ್ಲೆಸಿಸ್, “ಕಳೆದ ವರ್ಷ ದಿನೇಶ್ ಕಾರ್ತಿಕ್ ಉತ್ತಮವಾಗಿ ಆಟವಾಡಿದ್ದರು, ಆದರೆ ಈ ಋತುವಿನಲ್ಲಿ ಆಗಲಿಲ್ಲ. ನೀವು ಇತರ ಐಪಿಎಲ್ ತಂಡಗಳನ್ನು ನೋಡಿದರೆ, ಅವರು ನಂ.6 ಅಥವಾ ನಂ.7 ನಲ್ಲಿ ಕೆಲವು ಉತ್ತಮ ಪವರ್ ಹಿಟ್ಟರ್’ಗಳನ್ನು ಹೊಂದಿದ್ದಾರೆ. ಇನ್ನು ಕೊಹ್ಲಿ ನಂಬಲಾಗದ ಇನ್ನಿಂಗ್ಸ್ ಆಡಿದರು, ಆದರೆ ಶುಭಮನ್ ಗಿಲ್ ಪಂದ್ಯವನ್ನು ನಮ್ಮಿಂದ ದೂರ ತೆಗೆದುಕೊಂಡು ಹೋದರು” ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ