ನವದೆಹಲಿ: ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಭಾರತದ ಮಹತ್ವಾಕಾಂಕ್ಷೆ ಮತ್ತೊಮ್ಮೆ ಚಾಲ್ತಿಗೆ ಬಂದಿದೆ. ಹೌದು ಇಂತಹ ವೈಭವಯುತ ಕ್ರೀಡಾಕೂಟವನ್ನು ನಡೆಸಲು ಈಗಾಗಲೇ ಅಹಮದಾಬಾದ್‌ನ ನಗರ ಅಭಿವೃದ್ಧಿ ಪ್ರಾಧಿಕಾರವು ಮುಂದಿನ ಮಾರ್ಗವನ್ನು ನಿರ್ಧರಿಸಲು ಸಲಹೆಗಾರರಿಂದ ಪ್ರಸ್ತಾಪಗಳಿಗೆ ಆಹ್ವಾನಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮಹಾತ್ಮ ಗಾಂಧಿಜೀಯವರ ಮರಿ ಮೊಮ್ಮಗಳು ಆಶಿಶ್ ಲತಾ ರಾಮ್‌ಗೋಬಿನ್ ಗೆ 7 ವರ್ಷ ಜೈಲು ಶಿಕ್ಷೆ


ಅಹಮದಾಬಾದ್ (Ahmedabad) ನಗರಾಭಿವೃದ್ಧಿ ಪ್ರಾಧಿಕಾರ (AUDA) ಈ ನಿಟ್ಟಿನಲ್ಲಿ ಪತ್ರಿಕೆಯ ಜಾಹೀರಾತನ್ನು ಸಹ ಹಂಚಿಕೊಂಡಿದೆ,ಮಹತ್ವಾಕಾಂಕ್ಷೆಯ ಯೋಜನೆಯನ್ನು AUDA ಜೊತೆಗೆ ಭಾರತ ಕ್ರೀಡಾ ಪ್ರಾಧಿಕಾರ (SAI) ಮತ್ತು ರಾಜ್ಯ ಸರ್ಕಾರವು ನಿರ್ವಹಿಸಲಿದೆ.


ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿನ ವರದಿಯು ಆಡಾ ಅಧ್ಯಕ್ಷ ಮುಖೇಶ್ ಕುಮಾರ್ ಅವರನ್ನು ಉಲ್ಲೇಖಿಸಿ ಇದನ್ನು ದೃಢಪಡಿಸಿದೆ."ಒಲಿಂಪಿಕ್ಸ್, ಏಷಿಯಾಡ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸಬಲ್ಲ ಅಹಮದಾಬಾದ್ ಅನ್ನು ಅಂತರರಾಷ್ಟ್ರೀಯ ಕ್ರೀಡಾ ತಾಣವನ್ನಾಗಿ ಮಾಡುವ ಉದ್ದೇಶದಿಂದ ಅಂತರರಾಷ್ಟ್ರೀಯ ಕ್ರೀಡಾಕೂಟಗಳ ಅವಶ್ಯಕತೆಗಳು ಮತ್ತು ಮುಂದಿನ ದಾರಿಗಳನ್ನು ಗುರುತಿಸಲು ಸಲಹೆಗಾರರನ್ನು ಕೇಳಲಾಗುತ್ತದೆ." ಎಂದು ಹೇಳಿದ್ದಾರೆ.


ಇದನ್ನೂ ಓದಿ: ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಟ್ರಂಪ್ ಪುತ್ರಿ ಇವಾಂಕಾ, ನಿಕ್ಕಿ ಹ್ಯಾಲೆ ಸ್ಪರ್ಧೆ ?


ಗುಜರಾತ್ ನರ್ಮದಾ ವ್ಯಾಲಿ ಫರ್ಟಿಲೈಜರ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್ (ಜಿಎನ್‌ಎಫ್‌ಸಿ) ನಿರ್ವಹಿಸುತ್ತಿರುವ ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್‌ನಲ್ಲಿ ಟೆಂಡರ್‌ನ ವಿವರಗಳು ಲಭ್ಯವಿದೆ.ಅರ್ಜಿಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಜತಿನ್ ಕಪಾಡಿಯಾ ಅವರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 24 ಮತ್ತು ಪ್ರಾಥಮಿಕ ಮತ್ತು ತಾಂತ್ರಿಕ ಹಂತದ ಬಿಡ್ಡಿಂಗ್ ಮರುದಿನದಿಂದ ಪ್ರಾರಂಭವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಥಳವಾದ ನರೇಂದ್ರ ಮೋದಿ ಕ್ರೀಡಾಂಗಣವನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಉದ್ಘಾಟಿಸಿದ ಕೇವಲ ಮೂರು ತಿಂಗಳ ನಂತರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಭಾರತದ ದೊಡ್ಡ ಹಾದಿ ತೆರೆದುಕೊಂಡಿದೆ.ಈ ವರ್ಷ ಟೋಕಿಯೊ ನಂತರ, ಪ್ಯಾರಿಸ್ 2024 ರಲ್ಲಿ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದರೆ, ಮುಂದಿನ ಆವೃತ್ತಿಯನ್ನು 2028 ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಆಡಲಾಗುವುದು.ಏತನ್ಮಧ್ಯೆ, ಮಾರ್ಚ್ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 2048 ರ ಒಲಿಂಪಿಕ್ಸ್ ಆಯೋಜಿಸಲು ರಾಜಧಾನಿ ಬಿಡ್ ಮಾಡುವುದಾಗಿ ತಿಳಿಸಿದ್ದರು.


ಇದನ್ನೂ ಓದಿ: ಭಾರತೀಯ ಮೂಲದ ಇಂದ್ರಾ ನೂಯಿ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಪ್ರಮುಖ ಸ್ಪರ್ಧಿ -ವರದಿ


ಮೊಟೆರಾದಲ್ಲಿನ ಮೆಗಾ-ಪ್ರಾಜೆಕ್ಟ್ ಸುಮಾರು 800 ಕೋಟಿ ರೂ. ಮತ್ತು 1.13 ಲಕ್ಷ ಪ್ರೇಕ್ಷಕರನ್ನು ತುಂಬುವ ಸಾಮರ್ಥ್ಯವನ್ನು ಹೊಂದಿದೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್‌ನ ಭಾಗವಾಗಿರುವ ಕ್ರಿಕೆಟ್ ಕ್ರೀಡಾಂಗಣವು 215 ಎಕರೆ ವಿಸ್ತೀರ್ಣದಲ್ಲಿದೆ.ಈ ಸ್ಥಳದ ಜೊತೆಗೆ ಕ್ಲಬ್‌ಹೌಸ್‌ನಲ್ಲಿ 55 ಕೊಠಡಿಗಳು, ಸಂಕೀರ್ಣದಲ್ಲಿ 3 ಡಿ ಮಿನಿ ಥಿಯೇಟರ್, ಒಲಿಂಪಿಕ್ ಗಾತ್ರದ ಈಜುಕೊಳ, ಸಂಪೂರ್ಣ ಸುಸಜ್ಜಿತ ಜಿಮ್ನಾಷಿಯಂ, ಸ್ಟೀಮ್ ಮತ್ತು ಸೌನಾ ಮತ್ತು ಸ್ಕ್ವ್ಯಾಷ್ ಕೋರ್ಟ್‌ಗಳಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.