ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ 3ನೇ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಭರ್ಜರಿ ದ್ವಿಶತಕ ಭಾರಿಸಿದರು. ಎಡಗೈ ಬ್ಯಾಟ್ಸ್‌ಮನ್ ಕಿಶನ್ 131 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ ಮತ್ತು 24 ಬೌಂಡರಿ ಇದ್ದ  210 ರನ್ ಗಳಿಸಿದರು. ಈ ಮೂಲಕ ಅತಿವೇಗವಾಗಿ ದ್ವಿಶತಕ ಗಳಿಸಿದ ಆಟಗಾರ ಅನ್ನೋ ಹೆಗ್ಗಳಿಕೆಗೆ ಕಿಶನ್ ಪಾತ್ರರಾದರು. ಈ ಯುವ ಬ್ಯಾಟ್ಸ್‌ಮನ್‌ಗೆ ಬಹಳ ದಿನಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಇದರ ಸಂಪೂರ್ಣ ಲಾಭ ಪಡೆದ ಕಿಶನ್ ಬಾಂಗ್ಲಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮೂಲಕ ದಾಖಲೆ ನಿರ್ಮಿಸಿದರು.


COMMERCIAL BREAK
SCROLL TO CONTINUE READING

ಕೆಲವು ವರ್ಷಗಳ ಹಿಂದೆ ಇಶಾನ್ ಕಿಶನ್ ಮತ್ತೆ ಕ್ರಿಕೆಟ್ ಆಡುತ್ತಾರಾ ಅನ್ನೋ ಅಪಾಯ ಎದುರಾಗಿತ್ತು. 2018ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ಕಿಶನ್ ಕಣ್ಣಿಗೆ ಗಾಯವಾಗಿತ್ತು. ನಂತರ ಅವರ ಕ್ರಿಕೆಟ್ ವೃತ್ತಿಜೀವನವು ಅಪಾಯಕ್ಕೆ ಸಿಲುಕಿತ್ತು.  


ಇದನ್ನೂ ಓದಿ: FIFA WC 2022: ಪೋರ್ಚುಗಲ್‌ಗೆ ಆಘಾತ ನೀಡಿದ ಮೊರೊಕ್ಕೊ, ರೊನಾಲ್ಡೊ ವಿಶ್ವಕಪ್ ಕನಸು ಭಗ್ನ!


ಐಪಿಎಲ್‍ನಲ್ಲಿ ಗಾಯಗೊಂಡಿದ್ದ ಕಿಶನ್


ಐಪಿಎಲ್ 2018ರ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯ ನಡೆದಿತ್ತು. ಆರ್‌ಸಿಬಿ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಇಶಾನ್ ಕಿಶನ್ ಗಾಯಗೊಂಡಿದ್ದರು. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ವಿರಾಟ್ ಕೊಹ್ಲಿ ಹೊಡೆದ ಶಾಟ್ ಶಾರ್ಟ್ ಮಿಡ್ ವಿಕೆಟ್‌ನಲ್ಲಿದ್ದ ಹಾರ್ದಿಕ್ ಪಾಂಡ್ಯಗೆ ಕೈಗೆ ಸಿಕ್ಕಿತ್ತು. ಪಾಂಡ್ಯ ಎಸೆದ ತಕ್ಷಣ ಚೆಂಡು ವಿಕೆಟ್ ಕೀಪರ್ ಇಶಾನ್ ಕಿಶನ್ ಮುಖಕ್ಕೆ ಬಡಿದಿತ್ತು. ಆಗ ಇಶಾನ್ ಹೆಲ್ಮೆಟ್ ಧರಿಸಿರಲಿಲ್ಲ. ಇದಾದ ಬಳಿಕ ನೋವಿನಿಂದ ಬಳಲಿದ ಕಿಶನ್ ನೆಲದ ಮೇಲೆ ಮಲಗಿದ್ದರು. ತಕ್ಷಣವೇ ಫಿಸಿಯೋ ಮೈದಾನಕ್ಕೆ ಆಗಮಿಸಿ ಪ್ರಥಮ ಚಿಕಿತ್ಸೆ ನೀಡಿದ್ದರು. ಈ ವೇಳೆ  ಮುಂಬೈ ತಂಡದ ಸಹ ಆಟಗಾರರೂ ಸಹ ಇಶಾನ್ ಅವರ ಗಾಯವನ್ನು ಪರಿಶೀಲಿಸಿದ್ದರು. ಚೆಂಡು ಇಶಾನ್ ಬಲಗಣ್ಣಿನ ಬಳಿ ಬಡಿದಿದ್ದರಿಂದ ಅವರ ಮುಖ ಊದಿಕೊಂಡಿತ್ತು.


ಗಾಯದ ನಂತರ ಕೆಲವೇ ದಿನಗಳಲ್ಲಿ ಇಶಾನ್ ಮೈದಾನಕ್ಕೆ ಮರಳಿದರು. ಅದೇ ಟೂರ್ನಿಯಲ್ಲಿಯೇ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಇಶಾನ್ ಕಿಶನ್ ಫಿಟ್ ಆಗಿರುವ ಫೋಟೋವನ್ನು ಹಂಚಿಕೊಳ್ಳುವುದರೊಂದಿಗೆ ಹಾರ್ದಿಕ್ ಪಾಂಡ್ಯ ಕ್ಷಮೆಯಾಚಿಸಿದ್ದರು.  


ಇದನ್ನೂ ಓದಿ: Ishan Kishan: ಹೋಟೆಲ್ ರೂಮಿನಲ್ಲೂ ಇಶಾನ್ ಕಿಶನ್... ಬಾಲ್ಯದ ಕೋಚ್ ಉತ್ತಮ್ ಮಜುಂದಾರ್ ಬಿಚ್ಚಿಟ್ಟ ರಹಸ್ಯವೇನು?


ಇಶಾನ್ ಅತಿ ವೇಗದ ದ್ವಿಶತಕ  


ಇಶಾನ್ ಕಿಶನ್ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 126 ಎಸೆತಗಳಲ್ಲಿ ತಮ್ಮ ದ್ವಿಶತಕವನ್ನು ಪೂರ್ಣಗೊಳಿಸಿದರು. ಇದು ಏಕದಿನ ಸ್ವರೂಪದಲ್ಲಿ ವೇಗದ ದ್ವಿಶತಕದ ದಾಖಲೆಯಾಗಿದೆ. ಈ ಹಿಂದೆ ಪುರುಷರ ಕ್ರಿಕೆಟ್‌ನಲ್ಲಿ ಈ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. 2015ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ 138 ಎಸೆತಗಳಲ್ಲಿ ಗೇಲ್ ದ್ವಿಶತಕ ಭಾರಿಸಿದ್ದರು.


ಇಶಾನ್ ಈ ಮಾದರಿಯಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ತಮ್ಮ 24 ವರ್ಷ ಮತ್ತು 145 ದಿನಗಳ ವಯಸ್ಸಿನಲ್ಲಿ ದ್ವಿಶತಕ ಗಳಿಸದ ದಾಖಲೆ ನಿರ್ಮಿಸಿದರು. ಈ ಮೊದಲು ಈ ದಾಖಲೆಯು 26 ವರ್ಷ ಮತ್ತು 186 ದಿನಗಳಲ್ಲಿ ತಮ್ಮ ಮೊದಲ ದ್ವಿಶತಕ (2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ) ಗಳಿಸಿದ ರೋಹಿತ್ ಶರ್ಮಾರ ಹೆಸರಿನಲ್ಲಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.