Ishan Kishan: ಹೋಟೆಲ್ ರೂಮಿನಲ್ಲೂ ಇಶಾನ್ ಕಿಶನ್... ಬಾಲ್ಯದ ಕೋಚ್ ಉತ್ತಮ್ ಮಜುಂದಾರ್ ಬಿಚ್ಚಿಟ್ಟ ರಹಸ್ಯವೇನು?

Ishan Kishan Coach Uttam Majumdar: ಇಶಾನ್ ಕಿಶನ್ ಅವರ ಬಾಲ್ಯದ ಕೋಚ್ ಉತ್ತಮ್ ಮಜುಂದಾರ್ ಅವರು ಭಾರತ ತಂಡಕ್ಕೆ ಮರಳುವ ಮೊದಲು ಹೋಟೆಲ್ ಕೊಠಡಿಗಳಲ್ಲಿ ತರಬೇತಿ ಪಡೆಯುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಕಿಶನ್ ಹುಟ್ಟುಹಬ್ಬದ ಉಡುಗೊರೆಯನ್ನೂ ನೀಡಿದ್ದಾರೆ ಎನ್ನುತ್ತಾ ಉತ್ತಮ್ ಮಜುಂದಾರ್ ಭಾವುಕರಾದರು.ಇಶಾನ್ ಕಿಶನ್ ಅವರ ಬಾಲ್ಯದ ಕೋಚ್ ಉತ್ತಮ್ ಮಜುಂದಾರ್ ಅವರು ಭಾರತ ತಂಡಕ್ಕೆ ಮರಳುವ ಮೊದಲು ಹೋಟೆಲ್ ಕೊಠಡಿಗಳಲ್ಲಿ ತರಬೇತಿ ಪಡೆಯುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಕಿಶನ್ ಹುಟ್ಟುಹಬ್ಬದ ಉಡುಗೊರೆಯನ್ನೂ ನೀಡಿದ್ದಾರೆ ಎನ್ನುತ್ತಾ ಉತ್ತಮ್ ಮಜುಂದಾರ್ ಭಾವುಕರಾದರು.

Written by - Bhavishya Shetty | Last Updated : Dec 11, 2022, 08:04 AM IST
    • ಏಕದಿನ ಪಂದ್ಯದಲ್ಲಿ ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ದ್ವಿಶತಕ ಸಿಡಿಸಿ ಅಬ್ಬರ
    • 131 ಎಸೆತಗಳಲ್ಲಿ 24 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಸಿಡಿಸಿದ ಕಿಶನ್
    • ಭಾರತ 400ಕ್ಕೂ ಹೆಚ್ಚು ರನ್ ಗಳಿಸಿದ್ದು ವಿರಾಟ್ ಮತ್ತು ಇಶಾನ್ ಅವರ ಶ್ರಮ
Ishan Kishan: ಹೋಟೆಲ್ ರೂಮಿನಲ್ಲೂ ಇಶಾನ್ ಕಿಶನ್... ಬಾಲ್ಯದ ಕೋಚ್ ಉತ್ತಮ್ ಮಜುಂದಾರ್ ಬಿಚ್ಚಿಟ್ಟ ರಹಸ್ಯವೇನು? title=
ishan kishan

Ishan Kishan Coach Uttam Majumdar: ಬಾಂಗ್ಲಾದೇಶ ವಿರುದ್ಧದ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ದ್ವಿಶತಕ ಸಿಡಿಸಿ ಅಬ್ಬರಿಸಿರುವುದು ನಮಗೆಲ್ಲಾ ತಿಳಿದಿದೆ. ಇಶಾನ್ 131 ಎಸೆತಗಳಲ್ಲಿ 24 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಅನುಭವಿ ವಿರಾಟ್ ಕೊಹ್ಲಿ (113) ಅವರೊಂದಿಗಿನ ಜೊತೆಯಾಟದಲ್ಲಿ ಟೀಂ ಇಂಡಿಯಾಗೆ ಎರಡನೇ ವಿಕೆಟ್‌ಗೆ 290 ರನ್ ಸೇರಿಸಿದರು. ಭಾರತ 400ಕ್ಕೂ ಹೆಚ್ಚು ರನ್ ಗಳಿಸಿದ್ದು ವಿರಾಟ್ ಮತ್ತು ಇಶಾನ್ ಅವರ ಶ್ರಮ ಎಂದು ಹೇಳಬಹುದು. ಈ ಪಂದ್ಯದಲ್ಲಿ ಬಾಂಗ್ಲಾದೇಶ 227 ರನ್‌ಗಳ ಬೃಹತ್ ಅಂತರದಿಂದ ಸೋಲನುಭವಿಸಬೇಕಾಯಿತು. ಪಂದ್ಯದ ನಂತರ, ಇಶಾನ್ ಅವರ ಬಾಲ್ಯದ ಕೋಚ್ ಅವರ ಕಠಿಣ ಪರಿಶ್ರಮ ಮತ್ತು ಉತ್ಸಾಹದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಭಾರಿಗಳೇ ಹುಷಾರ್...! ಈ ಮ್ಯಾಚ್ ಬಾಕ್ಸ್ ಸೈಜ್ ಉಪಕರಣ ನಿಮ್ಮನ್ನು ಜೈಲಿಗಟ್ಟಬಹುದು

ಇಶಾನ್ ಕಿಶನ್ ಅವರ ಬಾಲ್ಯದ ಕೋಚ್ ಉತ್ತಮ್ ಮಜುಂದಾರ್ ಅವರು ಭಾರತ ತಂಡಕ್ಕೆ ಮರಳುವ ಮೊದಲು ಹೋಟೆಲ್ ಕೊಠಡಿಗಳಲ್ಲಿ ತರಬೇತಿ ಪಡೆಯುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಕಿಶನ್ ಹುಟ್ಟುಹಬ್ಬದ ಉಡುಗೊರೆಯನ್ನೂ ನೀಡಿದ್ದಾರೆ ಎನ್ನುತ್ತಾ ಉತ್ತಮ್ ಮಜುಂದಾರ್ ಭಾವುಕರಾದರು.

“ನನ್ನ ಮಗ ನನಗೆ ಹುಟ್ಟುಹಬ್ಬದ ಉಡುಗೊರೆ ನೀಡಿದಂತಿದೆ’ ಎಂದು ಅವರು ತಿಳಿಸಿದರು. ಜೂನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯಕ್ಕಾಗಿ ಭಾರತ ತಂಡ ದೆಹಲಿಯಲ್ಲಿದ್ದಾಗ, ಉತ್ತಮ್ ಮಜುಂದಾರ್ ಅವರಿಗೆ ಒಂದು ಕರೆ ಬಂತು. ಬಳಿಕ ಅವರನ್ನು ತಂಡದ ಹೋಟೆಲ್‌ಗೆ ಬರುವಂತೆ ವಿನಂತಿಸಲಾಯಿತು. ಕರೆಯ ಇನ್ನೊಂದು ಬದಿಯಲ್ಲಿ ಅವರ ನೆಚ್ಚಿನ 'ಶಿಷ್ಯ' ಇಶಾನ್ ಕಿಶನ್ ಇದ್ದರು.

ಇಶಾನ್ ಶ್ರಮಜೀವಿ:

ಗ್ರೇಟರ್ ನೋಯ್ಡಾದಲ್ಲಿ ತನ್ನ ಅಕಾಡೆಮಿಯನ್ನು ನಡೆಸುತ್ತಿರುವ ಮಜುಂದಾರ್, 'ಇಶಾನ್ ಅವರು ತರಬೇತಿಯನ್ನು ಮುಂದುವರಿಸಲು ನಾನು ಪ್ರತಿದಿನ ಹೋಟೆಲ್‌ಗೆ ಬರಬೇಕೆಂದು ಬಯಸಿದ್ದರು. ಎನ್ರಿಕ್ ನಾರ್ಕಿಯಾ ಮತ್ತು ಕಗಿಸೊ ರಬಾಡರಂತಹ ಬೌಲರ್ ಗಳ ಶಾರ್ಟ್ ಬಾಲ್ ಅನ್ನು ಎದುರಿಸುವ ತಂತ್ರವನ್ನು ಕಲಿಯಲು ಅವರು ಮುಂದಾಗುತ್ತಾರೆ ಎಂದು ಹೇಳಿದರು. ಹೋಟೆಲ್ ರೂಮ್ ನಲ್ಲಿ ಅವರು ಸಾಕಷ್ಟು ತರಬೇತಿಯನ್ನು ಪಡೆಯುತ್ತಾರೆ. ಆ ಪಂದ್ಯಕ್ಕೆ ನಾಲ್ಕೈದು ದಿನ ಮೊದಲು ಪುಲ್ ಶಾಟ್ ಗೆ ತಯಾರಿ ನಡೆಸುತ್ತಿದ್ದರು ಎಂದು ಹೇಳಿದರು.

ಇದನ್ನೂ ಓದಿ:ಹಾಲಿ ಶಾಸಕರಿಗೆ ಟಿಕೆಟ್ ಫಿಕ್ಸ್...! ಬಿಜೆಪಿ, ಜೆಡಿಎಸ್ ಗೂ ಮೊದಲೇ ಕಾಂಗ್ರೆಸ್ ಪಟ್ಟಿ ರಿಲೀಸ್

ಸರಣಿ ಗೆದ್ದ ಬಾಂಗ್ಲಾ:

ಚಿತ್ತಗಾಂಗ್‌ನಲ್ಲಿ ನಡೆದ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್‌ಗೆ 409 ರನ್ ಗಳಿಸಿತು. ನಂತರ ಆತಿಥೇಯರು 34 ಓವರ್‌ಗಳಲ್ಲಿ 182 ರನ್‌ಗಳಿಗೆ ಆಲೌಟ್ ಆಯಿತು. ಇಶಾನ್ ಹೊರತುಪಡಿಸಿ ವಿರಾಟ್ ಕೊಹ್ಲಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ 72 ನೇ ಶತಕವನ್ನು ಗಳಿಸಿದರು. ವಿರಾಟ್ 91 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ಗಳಿಂದ 113 ರನ್ ಗಳಿಸಿದರು. ಆದರೆ ಈಗಾಗಲೇ ಎರಡು ಪಂದ್ಯವನ್ನು ಗೆದ್ದಿದ್ದ ಬಾಂಗ್ಲಾದೇಶ ಈ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News