ಚಟ್ಟೋಗ್ರಾಮ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೂರನೇ ಎಕದಿನದ ಪಂದ್ಯದಲ್ಲಿ ಇಶಾನ್ ಕಿಶನ್ ಕ್ರಿಸ್ ಗೇಲ್ ಅವರ ಏಕದಿನದ ಪಂದ್ಯಗಳಲ್ಲಿ ವೇಗದ ದ್ವಿಶತಕದ ವಿಶ್ವದಾಖಲೆಯನ್ನು ಮುರಿದಿದ್ದಾರೆ.
ಗಾಯಗೊಂಡ ನಂತರ ಸರಣಿಯ ಕೊನೆಯ ಪಂದ್ಯಕ್ಕೆ ಗೈರಾಗಿದ್ದ ನಾಯಕ ರೋಹಿತ್ ಶರ್ಮಾ ಸ್ಥಾನದಲ್ಲಿ ಬಡ್ತಿ ಪಡೆದ ಇಶಾನ್ ಕಿಶನ್ ಸಿಕ್ಕಿರುವ ಆರಂಭಿಕ ಸ್ಥಾನವನ್ನು ಸರಿಯಾಗಿ ಬಳಸಿಕೊಂಡರು. ಅವರು ಕೇವಲ 126 ಎಸೆತಗಳಲ್ಲಿ 23 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ 200 ರನ್‌ಗಳ ಗಡಿಯನ್ನು ತಲುಪಿದರು.ಅವರು ಕೇವಲ 85 ಎಸೆತಗಳಲ್ಲಿ ಶತಕವನ್ನು ಪೂರೈಸಿದರು.
ಇದನ್ನೂ ಓದಿ: ಪರೀಕ್ಷೆಯಲ್ಲಿ ಫೇಲ್ ಆಗಲು YouTube Ads ಕಾರಣ..! 75 ಲಕ್ಷ ರೂ. ಪರಿಹಾರಕ್ಕೆ ಸುಪ್ರೀಂಗೆ ಮೊರೆ....!
ಇದಕ್ಕೂ ಮೊದಲು 50 ಓವರ್‌ಗಳ ಕ್ರಿಕೆಟ್‌ನಲ್ಲಿ ವೇಗದ ದ್ವಿಶತಕ ಸಿಡಿಸಿದ ವೆಸ್ಟ್ ಇಂಡೀಸ್ ಶ್ರೇಷ್ಠ ಕ್ರಿಸ್ ಗೇಲ್ ಅವರ ವಿಶ್ವ ದಾಖಲೆಯನ್ನು ಕಿಶನ್ ಮುರಿದರು. ಗೇಲ್ 2015ರ ಐಸಿಸಿ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ದ್ವಿಶತಕ ಗಳಿಸಲು 138 ಎಸೆತಗಳನ್ನು ತೆಗೆದುಕೊಂಡಿದ್ದರು.ಈಗ ಇಶಾನ್ ಕಿಶನ್ ಕೇವಲ 126 ಗಳಲ್ಲಿ ತಲುಪುವ ಮೂಲಕ ನೂತನ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ದ್ವಿಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
WATCH: #BNNIndia Reports.
Indian Cricketer Ishan Kishan (@ishankishan51) broke the world record of the fastest double hundred in 50-over cricket which was previously held earlier by West Indies batsman Chris Gayle.#India #IshanKishan #Cricket pic.twitter.com/GOg2pwu5K6
— Gurbaksh Singh Chahal (@gchahal) December 10, 2022
ಇದನ್ನೂ ಓದಿ: “ನಾನು 4 ಮಕ್ಕಳಿಗೆ ಜನ್ಮ ನೀಡಲು ಕಾಂಗ್ರೆಸ್ ಪಕ್ಷವೇ ಕಾರಣ”
ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ರೋಹಿತ್ ಶರ್ಮಾ ನಂತರ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ನಾಲ್ಕನೇ ಭಾರತೀಯ ಮತ್ತು ಒಟ್ಟಾರೆಯಾಗಿ ಏಳನೇ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ರೋಹಿತ್ ಶರ್ಮಾ ಮೂರು ದ್ವಿಶತಕಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.ಭಾರತೀಯರನ್ನು ಹೊರತುಪಡಿಸಿ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್, ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ಪಾಕಿಸ್ತಾನದ ಫಖರ್ ಜಮಾನ್ ಅವರು ದ್ವಿಶತಕಗಳಿಸಿದ ಆಟಗಾರರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.