Won T20 International in just 2 balls: ಟಿ 20 ಕ್ರಿಕೆಟ್ ಎಂದರೆ ಅಲ್ಲಿ ಬೌಂಡರಿಗಳು ಮತ್ತು ಸಿಕ್ಸರ್’ಗಳದ್ದೇ ಅಬ್ಬರ ಇರುತ್ತದೆ. ಅಷ್ಟೇ ಅಲ್ಲದೆ 20 ಓವರ್’ನಲ್ಲಿ ಊಹೆಗೂ ಮೀರಿದ ಸ್ಕೋರ್ ಕಲೆ ಹಾಕಲಾಗುತ್ತದೆ. ಆದರೆ ಇಲ್ಲೊಂದು ತಂಡವು ಕೇವಲ 2 ಎಸೆತಗಳಲ್ಲಿ ಪಂದ್ಯವನ್ನು ಗೆದ್ದಿದೆ. ಇದು ಹೇಗೆ ಸಾಧ್ಯ? ಅದರಲ್ಲೂ ಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ… ಎಂದು ಯೋಚಿಸುತ್ತಿದ್ದೀರಾ? ಈ ವರದಿ ಓದಿ:


COMMERCIAL BREAK
SCROLL TO CONTINUE READING

ಐಲ್ ಆಫ್ ಮ್ಯಾನ್ ತಂಡದ ವಿರುದ್ಧ ಸ್ಪೇನ್ ಈ ದಾಖಲೆ ಬರೆದಿದೆ. ಪಂದ್ಯದಲ್ಲಿ, ಐಲ್ ಆಫ್ ಮ್ಯಾನ್ ತಂಡವು ಮೊದಲು ಬ್ಯಾಟಿಂಗ್ ಮಾಡಿದ್ದು, ಈ ವೇಳೆ ಕೇವಲ 10 ರನ್ ಗಳಿಸಿದೆ. ಇದು ಟಿ 20 ಇತಿಹಾಸದಲ್ಲಿ ಅತೀ ಕಡಿಮೆ ಸ್ಕೋರ್ ಆಗಿದೆ. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಸ್ಪೇನ್ ಕೇವಲ 2 ಎಸೆತಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿದೆ. ಈ ದಾಖಲೆಯನ್ನು ಉಭಯ ದೇಶಗಳ ನಡುವಿನ ಟಿ 20 ನ ದ್ವಿಪಕ್ಷೀಯ ಸರಣಿಯಲ್ಲಿ ರಚಿಸಲಾಗಿದೆ.


ಇದನ್ನೂ ಓದಿ: ಪಾಕಿಸ್ತಾನದ ಟ್ರೈನ್ಸ್ ಇಂಡಿಯನ್ ರೈಲುಗಳಿಗಿಂತ ವಿಭಿನ್ನ ಹೇಗೆ?


ಪುರುಷರ ಟಿ 20 ರ ದಾಖಲೆಯನ್ನು ನೋಡಿದರೆ, ಅದಕ್ಕೂ ಮೊದಲು ಸಿಡ್ನಿ ಥಂಡರ್ ಅತೀ ಕಡಿಮೆ ಸ್ಕೋರ್ ಮಾಡಿದ ತಂಡದು ಹೇಳಲಾಗುತ್ತಿತ್ತು. ಕಳೆದ ವರ್ಷ ಡಿಸೆಂಬರ್ 16 ರಂದು ಸಿಡ್ನಿ ಥಂಡರ್ ತಂಡವು ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಕೇವಲ 15 ರನ್ ಗಳಿಸಿತ್ತು.


ಇನ್ನು ಈ ಪಂದ್ಯದಲ್ಲಿ ಸ್ಪೇನ್ ಟಾಸ್ ಗೆದ್ದು, ಬೌಲಿಂಗ್ ಆಯ್ದುಕೊಂಡಿತು. 8.4 ಓವರ್‌ಗಳಲ್ಲಿ 10 ರನ್ ಗಳಿಸಿದ ಐಲ್ ಆಫ್ ಮ್ಯಾನ್ ತಂಡದ ಬ್ಯಾಟಿಂಗ್ ಕಳಪೆಯಾಗಿತ್ತು. 7 ಬ್ಯಾಟರ್’ಗಳು ಖಾತೆಯನ್ನು ಸಹ ತೆರೆಯಲು ಸಾಧ್ಯವಾಗಲಿಲ್ಲ. ಕೇವಲ 4 ಬ್ಯಾಟ್ಸ್‌ಮನ್‌ಗಳು ಮಾತ್ರ ರನ್ ಗಳಿಸಿದರು.


ಐಲ್ ಆಫ್ ಮ್ಯಾನ್‌ನಿಂದ 7 ನೇ ಸ್ಥಾನಕ್ಕೆ ಇಳಿದ ಜೋಸೆಫ್ ಬೆರೋಸ್ ಹೆಚ್ಚು ಅಂದರೆ 4 ರನ್ ಗಳಿಸಿದರು. ಇದಲ್ಲದೆ 3 ಬ್ಯಾಟರ್ 2-2 ರನ್ ಗಳಿಸಿದರು. ಲೆಫ್ಟ್ -ಆರ್ಮ್ ಫಾಸ್ಟ್ ಬೌಲರ್ ಮೊಹಮ್ಮದ್ ಕಮ್ರಾನ್ 4 ಓವರ್‌ಗಳಲ್ಲಿ 4 ರನ್‌ಗಳಿಗೆ 4 ವಿಕೆಟ್ ಪಡೆದರು. ಮತ್ತೊಂದು ವೇಗದ ಬೌಲರ್, ಎಟಿಐ ಫೆಸ್ 4 ಓವರ್‌ಗಳಲ್ಲಿ 6 ರನ್‌ಗಳಿಗೆ 4 ವಿಕೆಟ್ ಪಡೆದರು. ಅದೇ ಸಮಯದಲ್ಲಿ, ಲೆಗ್ -ಸ್ಪಿನ್ನರ್ ಲಾರ್ನೆ ಬರ್ನ್ಸ್ 4 ಎಸೆತಗಳಲ್ಲಿ 2 ವಿಕೆಟ್ಗಳನ್ನು ತೆಗೆದುಕೊಂಡರು.


ಇದಕ್ಕೆ ಪ್ರತಿಯಾಗಿ, ಸ್ಪೇನ್ 2 ಎಸೆತಗಳಲ್ಲಿ ಗುರಿಯನ್ನು ಸಾಧಿಸಿತು. ತಂಡವು 118 ಎಸೆತಗಳು ಬಾಕಿ ಇರುವಾಗ ಪಂದ್ಯವನ್ನು ಗೆದ್ದುಕೊಂಡಿತು. ಇದು ಒಂದು ದಾಖಲೆಯಾಗಿದೆ. ಇದಕ್ಕೂ ಮೊದಲು ಕೀನ್ಯಾ ಮಾಲಿ ವಿರುದ್ಧ 105 ಎಸೆತಗಳಲ್ಲಿ ಗೆಲುವು ಸಾಧಿಸಿತ್ತು.


ಇದನ್ನೂ ಓದಿ: NPS ನಿಯಮಗಳಲ್ಲಿ ಭಾರಿ ಬದಲಾವಣೆ, ಈಗ ಹಣ ಹಿಂಪಡೆಯಲು ಈ ಕೆಲಸ ಮಾಡಿ!


ಐಲ್ ಆಫ್ ಮ್ಯಾನ್ 2004 ರಲ್ಲಿ ಐಸಿಸಿಯ ಸದಸ್ಯತ್ವವನ್ನು ಪಡೆದಿದೆ. 2017 ರಲ್ಲಿ ಸಹಾಯಕ ಸದಸ್ಯರ ಸದಸ್ಯತ್ವವನ್ನು ಪಡೆಯಿತು. ತಂಡವು ಯುರೋಪಿಯನ್ ಟಿ 20 ವಿಶ್ವಕಪ್‌ನ ಅರ್ಹತಾ ಪಂದ್ಯವನ್ನು ಆಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.