Funny Video: ಕೋತಿಯ ಚೇಷ್ಟೆಗೆ ಎತ್ತರದ ಮರದಿಂದ ಬಿತ್ತು ಹುಲಿ: ವ್ಯಾಘ್ರನನ್ನೂ ‘ಮಂಗ’ ಮಾಡಿದ ವಿಡಿಯೋ ನೋಡಿ

Monkey Tiger Video: ಹುಲಿಗಳು ಹೆಚ್ಚು ಶಕ್ತಿಶಾಲಿ ಶಕ್ತಿಯಾಗಿದ್ದು, ಅವಕಾಶ ಸಿಕ್ಕರೆ ಹೊಟ್ಟೆ ತುಂಬಿಸಲು ಕೋತಿಯನ್ನು ಬೇಟೆಯಾಡುತ್ತವೆ. ಆದರೆ ಮಂಗಗಳು ಹುಲಿಗಳಿಗಿಂತ ಹೆಚ್ಚು ಬುದ್ಧಿವಂತವಾಗಿವೆ. ಹುಲಿಗಳು ದೈಹಿಕವಾಗಿ ಹೆಚ್ಚು ಬಲಶಾಲಿಯಾಗಿದ್ದರೂ ಸಹ, ಕೋತಿಗಳು ತಮ್ಮ ಬುದ್ಧಿವಂತ ತಂತ್ರಗಳಿಂದ ಅವುಗಳನ್ನು ಮೀರಿಸುತ್ತವೆ.

Written by - Bhavishya Shetty | Last Updated : Feb 25, 2023, 05:25 PM IST
    • ಹುಲಿಗಳು ಹೆಚ್ಚು ಶಕ್ತಿಶಾಲಿ ಶಕ್ತಿಯಾಗಿದ್ದು, ಅವಕಾಶ ಸಿಕ್ಕರೆ ಹೊಟ್ಟೆ ತುಂಬಿಸಲು ಕೋತಿಯನ್ನು ಬೇಟೆಯಾಡುತ್ತವೆ
    • ಹುಲಿಗಳು ದೈಹಿಕವಾಗಿ ಹೆಚ್ಚು ಬಲಶಾಲಿಯಾಗಿದ್ದರೂ ಸಹ, ಕೋತಿಗಳು ಬುದ್ಧಿವಂತ ತಂತ್ರಗಳಿಂದ ಅವುಗಳನ್ನು ಮೀರಿಸುತ್ತವೆ
    • ಇವೆಲ್ಲದರೆ ಮಧ್ಯೆ ಈ ಎರಡು ಪ್ರಾಣಿಗಳು ಒಂದಾದರೆ ಹೇಗಿರಬಹುದು? ಯೋಚನೆ ಮಾಡಲು ಸಾಧ್ಯವಿಲ್ಲ ಅಲ್ಲವೇ?
Funny Video: ಕೋತಿಯ ಚೇಷ್ಟೆಗೆ ಎತ್ತರದ ಮರದಿಂದ ಬಿತ್ತು ಹುಲಿ: ವ್ಯಾಘ್ರನನ್ನೂ ‘ಮಂಗ’ ಮಾಡಿದ ವಿಡಿಯೋ ನೋಡಿ title=
Monkey tiger video

Monkey Tiger Video: ಮಂಗಗಳು ಅತ್ಯಂತ ಬುದ್ಧಿವಂತ ಜೀವಿಗಳು ಎಂಬುದು ಎಲ್ಲರಿಗೂ ತಿಳಿದಿದೆ. ಇನ್ನೊಂದೆಡೆ ಹುಲಿಗಳು ಬಲಿಷ್ಠ ಮತ್ತು ಪರಾಕ್ರಮಶಾಲಿ ಪ್ರಾಣಿಯೆಂದು ಗುರುತಿಸಲ್ಪಟ್ಟಿದೆ. ಇವೆಲ್ಲದರೆ ಮಧ್ಯೆ ಈ ಎರಡು ಪ್ರಾಣಿಗಳು ಒಂದಾದರೆ ಹೇಗಿರಬಹುದು? ಯೋಚನೆ ಮಾಡಲು ಸಾಧ್ಯವಿಲ್ಲ ಅಲ್ಲವೇ?

ಇದನ್ನೂ ಓದಿ: Trending Video: ವಧುವಿಗೆ ಮಾಲೆ ಹಾಕುತ್ತಿದ್ದಂತೆ ಸಿಡಿದ ಪಟಾಕಿ: ಸೌಂಡ್ ಕೇಳಿ ಭಯಗೊಂಡ ವರ ಮಂಟಪದಲ್ಲಿ ಏನು ಮಾಡಿದ ನೋಡಿ

ಹುಲಿಗಳು ಹೆಚ್ಚು ಶಕ್ತಿಶಾಲಿ ಶಕ್ತಿಯಾಗಿದ್ದು, ಅವಕಾಶ ಸಿಕ್ಕರೆ ಹೊಟ್ಟೆ ತುಂಬಿಸಲು ಕೋತಿಯನ್ನು ಬೇಟೆಯಾಡುತ್ತವೆ. ಆದರೆ ಮಂಗಗಳು ಹುಲಿಗಳಿಗಿಂತ ಹೆಚ್ಚು ಬುದ್ಧಿವಂತವಾಗಿವೆ. ಹುಲಿಗಳು ದೈಹಿಕವಾಗಿ ಹೆಚ್ಚು ಬಲಶಾಲಿಯಾಗಿದ್ದರೂ ಸಹ, ಕೋತಿಗಳು ತಮ್ಮ ಬುದ್ಧಿವಂತ ತಂತ್ರಗಳಿಂದ ಅವುಗಳನ್ನು ಮೀರಿಸುತ್ತವೆ. ಇತ್ತೀಚೆಗೆ ವೈರಲ್ ಆಗಿರುವ ಅಂತಹ ಒಂದು ವೀಡಿಯೊದಲ್ಲಿ, ಮಂಗವು ಹುಲಿಯನ್ನು ಮೀರಿಸಿ, ತಮ್ಮ ಚೇಷ್ಟೆಯಿಂದಲೇ ಅದನ್ನು ಮರದಿಂದ ಬೀಳುವಂತೆ ಮಾಡುತ್ತದೆ.

ವೀಡಿಯೊ ಪ್ರಾರಂಭವಾಗುತ್ತಿದ್ದಂತೆ, ದೊಡ್ಡ ಹುಲಿ ಮತ್ತು ಹೆಣ್ಣು ಮಂಗವು ತನ್ನ ಮರಿಯೊಂದಿಗೆ ಮರದ ಮೇಲೆ ಇರುವುದನ್ನು ಕಾಣಬಹುದು. ಇದು ಯಾವ ಮರ ಎಂದು ಅಸ್ಪಷ್ಟವಾಗಿದ್ದರೂ, ಮರದ ಕೊಂಬೆಗಳು ಹೆಚ್ಚು ಬಲವಾಗಿಲ್ಲ ಎಂದು ತೋರುತ್ತದೆ. ಮರದ ಮೇಲೆ ಮೇಲೆ ಏರುತ್ತಿದ್ದಂತೆ, ಕೊಂಬೆಗಳು ಬಾಗುತ್ತಿವೆ. ಒಂದೆಡೆ ಹುಲಿಯ ತೂಕ, ಮತ್ತೊಂದೆಡೆ ಕೋತಿಯ ಭಾರವನ್ನು ಆ ಕೊಂಬೆ ಸಹಿಸಿಕೊಂಡಿದೆ ಎಂಬಂತೆ ತೋರುತ್ತದೆ.

ಪಟ್ಟೆಯುಳ್ಳ ಮೃಗ ಹುಲಿಯು ಮಂಗವನ್ನು ಹಿಂಬಾಲಿಸುವುದನ್ನು ಕಾಣಬಹುದು. ಅದು ಮರದ ಕೊಂಬೆಗಳ ಸುತ್ತಲೂ ಚತುರವಾಗಿ ಅಡ್ಡಾದಿಡ್ಡಿಯಾಗಿ ಓಡುತ್ತಿದೆ. ಆದರೆ, ಹುಲಿಗಳು ಅತ್ಯುತ್ತಮ ಪರ್ವತಾರೋಹಿಗಳಲ್ಲ. ಹೀಗಾಗಿ, ಹುಲಿಗೆ ಮಂಗ ಸಿಗುವುದು ಕಷ್ಟವಾಗುವಂತೆ ಕಾಣಿಸುತ್ತಿದೆ. ಮಂಗವು ತನ್ನ ಮರಿ ಜೊತೆಗೆ ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಗೆ ಚತುರವಾಗಿ ಹಾರುತ್ತಿದೆ. ಆ ಕೋತಿಗೆ ಆತಂಕವಾಗಲೀ, ಭಯವಾಗಲೀ ಕಾಣುತ್ತಿಲ್ಲ. ದೂರ ಚಲಿಸುವ ಮೊದಲು ಹುಲಿ ಹತ್ತಿರ ಬರುವವರೆಗೆ ಕಾಯುತ್ತಿದೆ ಕೋತಿ.

ಕೊನೆಗೆ ಕೋತಿ ನೇತಾಡುವ ಕೊಂಬೆಯನ್ನು ಹಿಡಿಯುತ್ತದೆ. ಹುಲಿ ಮತ್ತೆ ಅದನ್ನು ಹಿಂಬಾಲಿಸಲು ಪ್ರಾರಂಭಿಸಿದಾಗ, ಕಪಿ ಎತ್ತರದ ಕೊಂಬೆಯನ್ನು ಹಿಡಿದು ಅಲ್ಲಿಂದ ತಪ್ಪಿಸಿಕೊಳ್ಳಲು ಮುಂದಾಗುತ್ತದೆ. ಈ ಸಮಯದಲ್ಲಿ, ಹುಲಿ ತನ್ನ ಸಮತೋಲನವನ್ನು ಕಳೆದುಕೊಂಡು ಮರದಿಂದ ಬೀಳುತ್ತದೆ. ಕೆಳಗೆ ಬಿದ್ದ ಪರಿಣಾಮ ಕೊಂಚ ನೋವು ಅನುಭವಿಸಿದೆ. ಹೀಗಾಗಿ ಸ್ಥಳದಲ್ಲಿಯೇ ವಿರಾಮ ತೆಗೆದುಕೊಂಡು ಕುಳಿತುಕೊಳ್ಳುತ್ತದೆ.  

ಇದನ್ನೂ ಓದಿ: Business Tips: ಈ ಹುಲ್ಲಿನಿಂದ ರಾತ್ರೋರಾತ್ರಿ ಲಕ್ಷಾಧಿಪತಿಯಾಗಬಹುದು: ಈ ಕೃಷಿಗೆ ಬೇಕಾಗಿರುವುದು ಇದು ಮಾತ್ರ!

ಐಎಎಸ್ ಅವನೀಶ್ ಶರಣ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ವಿಡಿಯೋ ಸಾಕಷ್ಟು ಗಮನ ಸೆಳೆದಿದೆ. ಇದನ್ನು 1,75,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು 8000 ಕ್ಕೂ ಹೆಚ್ಚು ಲೈಕ್ ಗಳನ್ನು ಹೊಂದಿದೆ.

ವೈರಲ್ ವೀಡಿಯೊವನ್ನು ಇಲ್ಲಿ ನೋಡಿ:

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News