ಕ್ರಿಕೆಟ್ ಇತಿಹಾಸದಲ್ಲಿ ಈ ವಿಶ್ವ ದಾಖಲೆಗಳನ್ನು ಮುರಿಯುವುದು ಅಸಾಧ್ಯ! ಭಾರತದ ದಿಗ್ಗಜರ ರೆಕಾರ್ಡ್ಸ್ ಕೂಡ ಈ ಪಟ್ಟಿಯಲ್ಲಿದೆ
Unbreakable World Records of Cricket: ಇಂಗ್ಲೆಂಡ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ಸರ್ ಜಾಕ್ ಹಾಬ್ಸ್ ಪ್ರಥಮ ದರ್ಜೆ ಕ್ರಿಕೆಟ್ʼನಲ್ಲಿ ಒಟ್ಟು 61760 ರನ್ ಗಳಿಸಿದ್ದಾರೆ. ಅವರ ಈ ವಿಶ್ವ ದಾಖಲೆಯನ್ನು ಮುರಿಯುವುದು ಅಸಾಧ್ಯ. ಹಾಬ್ಸ್ ಪ್ರಥಮ ದರ್ಜೆ ಕ್ರಿಕೆಟ್ʼನಲ್ಲಿ 199 ಶತಕ ಮತ್ತು 273 ಅರ್ಧ ಶತಕಗಳನ್ನು ಬಾರಿಸಿ ವಿಶ್ವದಾಖಲೆ ಮಾಡಿದ್ದರು.
Unbreakable World Records of Cricket: ಕ್ರಿಕೆಟ್ ಇತಿಹಾಸದಲ್ಲಿ ಬ್ರೇಕ್ ಮಾಡಲು ಅಸಾಧ್ಯವೆನ್ನುವ ಕೆಲ ದಾಖಲೆಗಳಿವೆ. ಅಂತಹ ದಾಖಲೆಗಳ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
ಇಂಗ್ಲೆಂಡ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ಸರ್ ಜಾಕ್ ಹಾಬ್ಸ್ ಪ್ರಥಮ ದರ್ಜೆ ಕ್ರಿಕೆಟ್ʼನಲ್ಲಿ ಒಟ್ಟು 61760 ರನ್ ಗಳಿಸಿದ್ದಾರೆ. ಅವರ ಈ ವಿಶ್ವ ದಾಖಲೆಯನ್ನು ಮುರಿಯುವುದು ಅಸಾಧ್ಯ. ಹಾಬ್ಸ್ ಪ್ರಥಮ ದರ್ಜೆ ಕ್ರಿಕೆಟ್ʼನಲ್ಲಿ 199 ಶತಕ ಮತ್ತು 273 ಅರ್ಧ ಶತಕಗಳನ್ನು ಬಾರಿಸಿ ವಿಶ್ವದಾಖಲೆ ಮಾಡಿದ್ದರು.
ಇದನ್ನೂ ಓದಿ: ಸೊಸೆಯಾಗಿ ಬಂದ ಐಶ್ವರ್ಯಾಗೆ ಆ ಮಾತು ಕೊಟ್ಟಿದ್ದ ಅಮಿತಾಬ್! ಆದ್ರೆ ಅದನ್ನು ಉಳಿಸಿಕೊಳ್ಳಲೇ ಇಲ್ಲ...
ಕ್ರಿಕೆಟ್ ಇತಿಹಾಸದ ಶ್ರೇಷ್ಠ ಬ್ಯಾಟ್ಸ್‌ಮನ್ ಆಸ್ಟ್ರೇಲಿಯಾದ ಡೊನಾಲ್ಡ್ ಬ್ರಾಡ್‌ಮನ್ ತಮ್ಮ ಜೀವನದಲ್ಲಿ ಕೇವಲ 52 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಬ್ರಾಡ್ಮನ್ ತಮ್ಮ ವೃತ್ತಿಜೀವನದಲ್ಲಿ 6996 ಟೆಸ್ಟ್ ರನ್ ಗಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಬ್ಯಾಟಿಂಗ್ ಸರಾಸರಿ 99.94 ಆಗಿದೆ. ಇದು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕವಾಗಿದ್ದು, ಈ ದಾಖಲೆಯನ್ನು ಮುರಿಯಲು ಇಂದಿನ ಯಾವುದೇ ಬ್ಯಾಟ್ಸ್‌ಮನ್ʼಗಳಿಗೆ ಸಾಧ್ಯವಾಗಿಲ್ಲ.
ಶ್ರೀಲಂಕಾದ ದಿಗ್ಗಜ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅಂತರಾಷ್ಟ್ರೀಯ ಕ್ರಿಕೆಟ್ʼನಲ್ಲಿ ಒಟ್ಟು 1347 ವಿಕೆಟ್ʼಗಳನ್ನು ಪಡೆದಿದ್ದಾರೆ. ಈ ವಿಶ್ವ ದಾಖಲೆಯನ್ನು ಮುರಿಯಲು ಯಾವುದೇ ಬೌಲರ್ʼನಿಂದ ಸಾಧ್ಯವಾಗಿಲ್ಲ. ಇವರು ತಮ್ಮ ವೃತ್ತಿಜೀವನದಲ್ಲಿ 133 ಟೆಸ್ಟ್, 350 ODI ಮತ್ತು 12 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಎಲ್ಲದರಲ್ಲೂ ಒಟ್ಟು 1347 ವಿಕೆಟ್ಗಳನ್ನು ಪಡೆದಿದ್ದಾರೆ.
22 ವರ್ಷ 91 ದಿನಗಳ ಸುದೀರ್ಘ ODI ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ, ಸಚಿನ್ ತೆಂಡೂಲ್ಕರ್ 463 ODI ಪಂದ್ಯಗಳನ್ನಾಡಿದ್ದಾರೆ. 452 ಇನ್ನಿಂಗ್ಸ್‌ಗಳಲ್ಲಿ 44.83 ರ ಅತ್ಯುತ್ತಮ ಸರಾಸರಿಯಲ್ಲಿ 18426 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 49 ಶತಕ ಮತ್ತು 96 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ತೆಂಡೂಲ್ಕರ್ ಅವರ ODI ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಅಜೇಯ 200 ರನ್ ಗಳಿಸಿದ ಅತ್ಯುತ್ತಮ ಸ್ಕೋರ್ ಆಗಿದೆ. ಇನ್ನು ಸಚಿನ್ ತೆಂಡೂಲ್ಕರ್ ಅವರ 18426 ODI ರನ್ʼಗಳ ವಿಶ್ವ ದಾಖಲೆಯನ್ನು ಮುರಿಯುವುದು ಅಸಾಧ್ಯ.
ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಮಾಡಿದ ವಿಶ್ವದಾಖಲೆ ಹೊಂದಿದ್ದಾರೆ. 2014ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 264 ರನ್ ಗಳ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದರು. ಇಲ್ಲಿಯವರೆಗೆ ವಿಶ್ವದ ಯಾವುದೇ ಬ್ಯಾಟ್ಸ್‌ಮನ್ ಈ ವಿಶ್ವ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.
ವೆಸ್ಟ್ ಇಂಡೀಸ್ʼನ ಶ್ರೇಷ್ಠ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ 2013 ರ ಐಪಿಎಲ್ʼನಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ 175 ರನ್ ಗಳಿಸಿದ್ದರು. ಕ್ರಿಸ್ ಗೇಲ್ 66 ಎಸೆತಗಳಲ್ಲಿ ಅಜೇಯ 175 ರನ್ ಗಳಿಸಿದ್ದರು. ಐಪಿಎಲ್‌ನಲ್ಲಿ ಮಾಡಿದ ಈ ವಿಶ್ವ ದಾಖಲೆಯನ್ನು ಇಲ್ಲಿಯವರೆಗೂ ವಿಶ್ವದ ಯಾವುದೇ ಬ್ಯಾಟ್ಸ್‌ಮನ್ ಮುರಿದಿಲ್ಲ.
ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಮಿಸ್ಬಾ-ಉಲ್-ಹಕ್ ಏಕದಿನ ಕ್ರಿಕೆಟ್ʼನಲ್ಲಿ ಅರ್ಧಶತಕ ಗಳಿಸದೆ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ಹೊಂದಿದ್ದಾರೆ. ODI ವೃತ್ತಿಜೀವನದಲ್ಲಿ, ಮಿಸ್ಬಾ-ಉಲ್-ಹಕ್ 162 ಪಂದ್ಯಗಳಲ್ಲಿ 43.41 ಸರಾಸರಿಯಲ್ಲಿ ಯಾವುದೇ ಅರ್ಧಶತಕವನ್ನು ಗಳಿಸದೆ 5122 ರನ್ ಗಳಿಸಿದ್ದಾರೆ. ಮಿಸ್ಬಾ-ಉಲ್-ಹಕ್ ಅವರ ಈ ಅಪರೂಪದ ದಾಖಲೆಯನ್ನು ಮುರಿಯುವುದು ಅಸಾಧ್ಯ.
ಇಂಗ್ಲೆಂಡ್ʼನ ಶ್ರೇಷ್ಠ ಬೌಲರ್ ಜಿಮ್ ಲೇಕರ್ ಒಂದೇ ಟೆಸ್ಟ್ ಪಂದ್ಯದಲ್ಲಿ 19 ವಿಕೆಟ್ ಪಡೆದ ವಿಶ್ವದಾಖಲೆ ಹೊಂದಿದ್ದಾರೆ. 68 ವರ್ಷಗಳಿಂದ ಈ ವಿಶ್ವ ದಾಖಲೆಯನ್ನು ಮುರಿಯಲು ವಿಶ್ವದ ಯಾವುದೇ ಬೌಲರ್ʼಗೆ ಸಾಧ್ಯವಾಗಿಲ್ಲ.
ಶ್ರೀಲಂಕಾದ ಮಾಜಿ ಬೌಲರ್ ಚಮಿಂದಾ ವಾಸ್ 2001 ರಲ್ಲಿ ಏಕದಿನ ಪಂದ್ಯವೊಂದರಲ್ಲಿ 8 ವಿಕೆಟ್ ಪಡೆದು ವಿಶ್ವದಾಖಲೆ ಮಾಡಿದ್ದರು. 23 ವರ್ಷಗಳಿಂದ ಚಮಿಂದಾ ವಾಸ್ ಅವರ ಈ ವಿಶ್ವ ದಾಖಲೆಯನ್ನು ಮುರಿಯಲು ವಿಶ್ವದ ಯಾವುದೇ ಬೌಲರ್‌ಗೆ ಸಾಧ್ಯವಾಗಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.