Bumrah Fitness Secrets: ದೇಹವನ್ನು ಫಿಟ್ ಆಗಿಡಲು ಜಸ್ಪ್ರೀತ್ ಬುಮ್ರಾ ಮಾಡ್ತಾರೆ ಈ ವರ್ಕೌಟ್!
Jasprit Bumrah Fitness: ಬುಮ್ರಾ ಅವರು ವರ್ಕೌಟ್ ಜೊತೆಗೆ ಊಟದ ವಿಚಾರದಲ್ಲೂ ಹೆಚ್ಚಿನ ಗಮನ ನೀಡುತ್ತಾರೆ. ಹೆಚ್ಚಿನ ಪ್ರೊಟೀನ್ ಇರುವ ಆಹಾರವನ್ನು ಸೇವಿಸುತ್ತಾರೆ.
Jasprit Bumrah Fitness: ಕ್ರಿಕೆಟರ್‌ಗಳ ದೇಹ ಸಾಕಷ್ಟು ಫಿಟ್ ಆಗಿರುತ್ತದೆ. ಇದಕ್ಕಾಗಿ ಅವರು ಸ್ಟ್ರಿಕ್ಟ್ ಡಯೆಟ್ ಜೊತೆಗೆ ವರ್ಕೌಟ್ ಕೂಡ ಮಾಡುತ್ತಾರೆ. ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಫಿಟ್ನೆಸ್‌ಗೆ ಮರುಳಾಗದವರಿಲ್ಲ. ದೇಹವನ್ನು ಹೈಡ್ರೀಕರಿಸಿಟ್ಟುಕೊಳ್ಳುವುದು ಬುಮ್ರಾ ಅವರ ವ್ಯಾಯಾಮದ ದಿನಚರಿಯ ಪ್ರಮುಖ ಭಾಗವಾಗಿದೆ. ಜಸ್ಪ್ರೀತ್ ಬುಮ್ರಾ ಯಾವುದೇ ರೂಪದಲ್ಲಿಯೂ ಸಕ್ಕರೆ ತಮ್ಮ ದೇಹವನ್ನು ಸೇರದಂತೆ ಸ್ಟ್ರಿಕ್ಟ್ ಡಯೆಟ್ ಫಾಲೋ ಮಾಡುತ್ತಾರೆ.
ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿಯಿಂದ ಮಾತ್ರವಲ್ಲದೆ ತಮ್ಮ ಫಿಟ್ನೆಸ್‌ನಿಂದಲೂ ಅಭಿಮಾನಿಗಳ ಹೃದಯಗೆದ್ದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇದೀಗ ಮತ್ತೆ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ತೋರಿಸಿದ್ದಾರೆ.
ಇದನ್ನೂ ಓದಿ: W,W,0,W,1,W ಜನ್ಮದಿನದಂದೇ ಭರ್ಜರಿ ಬೌಲಿಂಗ್ ಮಾಡಿ ದಾಖಲೆ ಬರೆದ ಭಾರತದ ಆಟಗಾರ !
ಬುಮ್ರಾ ಕಳೆದ ಜನವರಿ 2016 ರಲ್ಲಿ ODI ಮತ್ತು T20I ಗಳ ಮೂಲಕ ಭಾರತ ತಂಡದ ಭಾಗವಾದರು. ಅಂದಿನಿಂದ ಇಂದಿನವರೆಗೂ ಅವರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬುಮ್ರಾ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರು. ಬಿಸಿಸಿಐನ ಆಟಗಾರರ ಸಂಭಾವನೆ ನೀತಿಯ ಪ್ರಕಾರ ಬುಮ್ರಾ ಅವರ ವಾರ್ಷಿಕ ಸಂಭಾವನೆ 7 ಕೋಟಿ ರೂ. ಎನ್ನಲಾಗಿದೆ.
ಬೆನ್ನುಮೂಳೆಯ ಫಿಟ್ನೆಸ್ : ಬುಮ್ರಾ ಅವರ ವರ್ಕೌಟ್ strength training, cardio and agility training ಮಿಶ್ರಣವಾಗಿದೆ. ಮೈದಾನದಲ್ಲಿ ಆಡುವಾಗ ಈ ವ್ಯಾಯಾಮಗಳು ಅವರಿಗೆ ಬಹಳಷ್ಟು ಸಹಾಯ ಮಾಡುತ್ತವೆ. ಬುಮ್ರಾ ಅವರು ನಿಯಮಿತವಾಗಿ running, swimming, strength training and gym workout ಮಾಡುತ್ತಾರೆ. ದೇಹದ ಪ್ರತಿಯೊಂದು ಭಾಗವು ಫಿಟ್ ಆಗಿರವಂತೆ ಬುಮ್ರಾ ವರ್ಕೌಟ್ ಚಾರ್ಟ್ ರಚಿಸಲಾಗಿದೆ.
ಕಾಲಿನ ಫಿಟ್ನೆಸ್ : ಕ್ರೀಡಾಪಟುಗಳಿಗೆ ಪಾದಗಳು ಬಹಳ ಮುಖ್ಯ. ಅದರಲ್ಲೂ ವೇಗದ ಬೌಲರ್‌ಗಳಿಗೆ ಕಾಲುಗಳೇ ಪ್ರಮುಖ ಶಕ್ತಿ. ಆದ್ದರಿಂದ ಬುಮ್ರಾ ದೈಹಿಕ ಶಕ್ತಿಯ ಪ್ರಮುಖ ಭಾಗವಾಗಿ ತನ್ನ ಕಾಲುಗಳಲ್ಲಿ ಶಕ್ತಿಯನ್ನು ಅಭಿವೃದ್ಧಿಪಡಿಸುವುದರ ಮೇಲೆ ಕೇಂದ್ರೀಕರಿಸುತ್ತಾರೆ. ಬುಮ್ರಾ ಕಾಲಿನ ಶಕ್ತಿಯನ್ನು ಹೆಚ್ಚಿಸಲು ದೈಹಿಕ ಸಾಮರ್ಥ್ಯದ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಈ ವ್ಯಾಯಾಮಗಳು ಬೌಲಿಂಗ್ ಮಾಡುವಾಗ ಸಮತೋಲನ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Suryakumar Yadav: ಶತಕ ಸಿಡಿಸಿ ಹಲವು ದಾಖಲೆ ಬರೆದ ಸೂರ್ಯಕುಮಾರ್ ಯಾದವ್
ಪ್ರೋಟೀನ್ ಯುಕ್ತ ಆಹಾರಗಳು: ಬುಮ್ರಾ ಅವರು ವರ್ಕೌಟ್ ಜೊತೆಗೆ ಊಟದ ವಿಚಾರದಲ್ಲೂ ಹೆಚ್ಚಿನ ಗಮನ ನೀಡುತ್ತಾರೆ. ಹೆಚ್ಚಿನ ಪ್ರೊಟೀನ್ ಇರುವ ಆಹಾರವನ್ನು ಸೇವಿಸುತ್ತಾರೆ. ಕೋಳಿ ಮತ್ತು ಮೀನುಗಳಂತಹ ಮಾಂಸ, ಮೊಟ್ಟೆ ಮತ್ತು ಸಸ್ಯ ಆಧಾರಿತ ಪ್ರೋಟೀನ್‌ಗಳನ್ನು ಸೇವಿಸುತ್ತಾರೆ. ಬುಮ್ರಾ ಅವರ ಆಹಾರದಲ್ಲಿ ಬ್ರೌನ್ ರೈಸ್ ಸೇರಿದಂತೆ ಕಾರ್ಬೋಹೈಡ್ರೇಟ್ ಆಹಾರಗಳು ಸಹ ಸೇರಿವೆ. ಇದರಿಂದ ದೇಹಕ್ಕೆ ಕ್ರಿಕೆಟ್ ಆಡಲು ಮತ್ತು ಫಿಟ್ ಆಗಿರಲು ಅಗತ್ಯವಿರುವ ಎಲ್ಲಾ ಶಕ್ತಿ ಒದಗುತ್ತದೆ. ಬುಮ್ರಾ ಸಂಸ್ಕರಿಸಿದ ಆಹಾರವನ್ನು ಎಂದಿಗೂ ಸೇವಿಸುವುದಿಲ್ಲ. ಆಹಾರದ ಆಯ್ಕೆಗಳಲ್ಲಿನ ಈ ಶಿಸ್ತು ಉತ್ತಮ ಆರೋಗ್ಯ ಮತ್ತು ಫಿಟ್ನೆಸ್ ಮಟ್ಟವನ್ನು ಕಾಪಾಡಿಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.