ನವದೆಹಲಿ: ಜಸ್ಪ್ರೀತ್ ಬುಮ್ರಾ ತಮ್ಮ ಅಲ್ಪಾವಧಿಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರಿದರು. ಈಗ ಅವರು ತಮ್ಮ ನಿರಂತರ ಪ್ರದರ್ಶನದಿಂದಾಗಿ ಎಲ್ಲ ಮಾದರಿ ಕ್ರಿಕೆಟ್ ನಲ್ಲಿಯೂ ಕೂಡ ಸೈ ಎನಿಸಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಆದರೆ, ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಜಾಕ್ ಅವರು ತಮ್ಮ ಆಟದ ದಿನಗಳಲ್ಲಿ ತಮ್ಮ ವೇಗದ ಬೌಲರ್‌ಗಳಾದ ಗ್ಲೆನ್ ಮೆಕ್‌ಗ್ರಾತ್ ಮತ್ತು ವಾಸಿಮ್ ಅಕ್ರಮ್ ಅವರಂತಹ ಕೆಲವು ಶ್ರೇಷ್ಠ ಬೌಲರ್‌ಗಳ ವಿರುದ್ಧ ಆಡಿದ ಅನುಭವ ಹೊಂದಿದ್ದರಿಂದ ಅವರು ಸುಲಭವಾಗಿ ಈ ಭಾರತೀಯ ವೇಗದ ಬೌಲರ್‌ ಮೇಲೆ ಪ್ರಾಬಲ್ಯ ಸಾಧಿಸಬಹುದೆಂದು ಭಾವಿಸಿದ್ದಾರೆ. ಇನ್ನು ಮುಂದುವರೆದು ಬುಮ್ರಾ ಅವರನ್ನು ಬೇಬಿ ಬೌಲರ್ ಎಂದು ಕರೆದಿದ್ದಾರೆ.


"ನಾನು ಗ್ಲೆನ್ ಮೆಕ್‌ಗ್ರಾತ್ ಮತ್ತು ವಾಸಿಮ್ ಅಕ್ರಮ್‌ನಂತಹ ಶ್ರೇಷ್ಠ ಬೌಲರ್‌ಗಳ ವಿರುದ್ಧ ಆಡಿದ್ದೇನೆ, ಆದ್ದರಿಂದ ಬುಮ್ರಾ ನನ್ನ ಮುಂದೆ ಬೇಬಿ ಬೌಲರ್ ಆಗಿದ್ದಾನೆ ಮತ್ತು ನಾನು ಅವನ ಮೇಲೆ ಸುಲಭವಾಗಿ ಪ್ರಾಬಲ್ಯ ಸಾಧಿಸಿ ಆಕ್ರಮಣ ಮಾಡಬಹುದಿತ್ತು' ಎಂದು ರಜಾಕ್ ಹೇಳಿದ್ದಾರೆ. ಜಸ್ಪ್ರೀತ್ ಬುಮ್ರಾ, ಕಳೆದ ಮೂರು ತಿಂಗಳಿಗಿಂತ ಹೆಚ್ಚು ಕಾಲ ಮೈದಾನದಿಂದ ದೂರವಿದ್ದರೂ, ಐಸಿಸಿಯ ಏಕದಿನ ಬೌಲರ್‌ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.


ಕೊನೆಯ ಬಾರಿಗೆ ಆಗಸ್ಟ್‌ನಲ್ಲಿ ಅಂತರರಾಷ್ಟ್ರೀಯ ಪಂದ್ಯ ಆಡಿದ ಬುಮ್ರಾ, ಪ್ರಸ್ತುತ ವೆಸ್ಟ್ ಇಂಡೀಸ್‌ನಲ್ಲಿ ಆಡುವಾಗ ಅವರು ಅನುಭವಿಸಿದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಬುಮ್ರಾ ತಂಡಕ್ಕೆ ಮರಳಲಿದ್ದಾರೆ ಎಂಬ ಭರವಸೆ ಇದೆ ಎಂದು ಭಾರತೀಯ ಬೌಲಿಂಗ್ ಕೋಚ್ ಭಾರತ್ ಅರುಣ್ ಹೇಳಿದ್ದಾರೆ.