Saif Ali Khan-Kareena Kapoor: ಬಾಲಿವುಡ್‌ನ ಹಾಟೆಸ್ಟ್ ಜೋಡಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ತಮ್ಮ ಮದುವೆಯಿಂದ ಹಿಡಿದು ಇಲ್ಲಿಯವರೆಗೆ ಚರ್ಚೆಯಲ್ಲಿದ್ದಾರೆ. ಇವರು ಏನೇ ಮಾಡಿದರೂ ಸಹ ಅದು ಮಾಧ್ಯಮದಲ್ಲಿ ಚರ್ಚೆಯಾಗುತ್ತವೆ. ಇವರ ಮಕ್ಕಳಿಗೆ ನಾಮಕರಣ ಮಾಡಿದ ಸಂದರ್ಭದಲ್ಲೂ ಅನೇಕರು ಆ ಹೆಸರಿಗೆ ವಿರೋಧ ವ್ಯಕ್ತಪಡಿಸಿದ್ದರು. ಇನ್ನು ಸೈಫ್ ಅಲಿ ಖಾನ್ ಕರೀನಾ ಕಪೂರ್ ಗೂ ಮುನ್ನ ಅಮೃತಾ ಸಿಂಗ್ ಎಂಬವರನ್ನು ವಿವಾಹವಾಗಿದ್ದರು. ಇವರೂ ಸಹ ನಟಿ. ಆದರೆ ಇವರ ಮದುವೆಗೆ ಕರೀನಾ ಆಗಮಿಸಿದ್ದರಂತೆ. ಆ ಸಂದರ್ಭದಲ್ಲಿ ಸೈಫ್ ‘ಮಗಳೇ’ ಎಂದು ಕರೆದಿದ್ದರಂತೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಧಿಡೀರ್‌ ಮದುವೆ ಮುಂದೂಡಿದ ಶೇರ್‌ ಷಾ ಜೋಡಿ....


ಸೈಫ್ ಪಟೌಡಿ ಸಾಮ್ರಾಜ್ಯದ ಪುತ್ರ. ರವೀಂದ್ರನಾಥ ಟ್ಯಾಗೋರ್ ಅವರ ಪೂರ್ವಜರ ಸಾಲಿಗೆ ಸೇರಿದವರು ಎಂದು ಹೇಳಲಾಗುತ್ತದೆ. ಕರೀನಾ ಬಾಲಿವುಡ್‌ನ ಪ್ರಸಿದ್ಧ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಸೈಫ್ ಮತ್ತು ಅಮೃತಾ 1991 ರಲ್ಲಿ ವಿವಾಹವಾಗಿದ್ದರು. ಇಲ್ಲಿನ ಪ್ರಮುಖ ವಿಷಯವೆಂದರೆ ಕರೀನಾ ಕಪೂರ್ ಸಹ ಸೈಫ್ ಮದುವೆಗೆ ಹಾಜರಾಗಿದ್ದರು. ಆ ಸಮಯದಲ್ಲಿ ಆಕೆಗೆ ಕೇವಲ 11 ವರ್ಷ ವಯಸ್ಸಾಗಿತ್ತು.


13 ವರ್ಷಗಳ ದಾಂಪತ್ಯದ ನಂತರ ಸೈಫ್ ಮತ್ತು ಅಮೃತಾ ಸಿಂಗ್ ವಿಚ್ಛೇದನ ಪಡೆದರು. ಅಮೃತಾ ಅವರನ್ನು ಮದುವೆಯಾದಾಗ ಸೈಫ್ ಅವರಿಗೆ 20 ವರ್ಷ. ಅಮೃತಾಗೆ 32 ವರ್ಷ. ಇಲ್ಲಿಯೂ ಸಹ ವಯಸ್ಸಿನ ಅಂತರವಿತ್ತು. ಇನ್ನು  ವಯಸ್ಸಿನ ಅಂತರದಿಂದಾಗಿ ಅವರ ಕುಟುಂಬಗಳು ತಮ್ಮ ಸಂಬಂಧವನ್ನು ನಿರಾಕರಿಸಬಾರದು ಎಂಬ ಭಯದಿಂದ ಇಬ್ಬರೂ ತಮ್ಮ ಮನೆಯವರಿಗೆ ಹೇಳದೆ ಮದುವೆಯಾದರು ಎಂದು ತಿಳಿದುಬಂದಿದೆ.


ಇದೀಗ ಸೈಫ್ ಅವರ ಎರಡನೇ ಪತ್ನಿಯಾಗಿರುವ ಕರೀನಾ ಕಪೂರ್ ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಆ ಸಮಯದಲ್ಲಿ ಕರೀನಾಗೆ ಕೇವಲ 11 ವರ್ಷ ವಯಸ್ಸಾಗಿತ್ತು. ಅವರು ವೇದಿಕೆಯ ಮೇಲೆ ಹೋಗಿ ಅಮೃತಾ ಮತ್ತು ಸೈಫ್ ಅವರ ಮದುವೆಗೆ ಶುಭಹಾರೈಸಿದರು. ಇದರ ಫೋಟೋ ಎಲ್ಲೆಡೆ ವೈರಲ್ ಆಗಿತ್ತು.


1991 ರಲ್ಲಿ ಸೈಫ್ ಮತ್ತು ಅಮೃತಾ ರಹಸ್ಯವಾಗಿ ವಿವಾಹವಾದರು. ಈ ವಿಷಯ ಮನೆಯವರಿಗೆ ತಿಳಿದಾಗ ಸಾಕಷ್ಟು ಗಲಾಟೆ ನಡೆದಿತ್ತು. ಆದರೆ ಅವರು ಈ ಸಂಬಂಧವನ್ನು ಒಪ್ಪಿಕೊಳ್ಳಬೇಕಾಯಿತು. ಆಗ ಸೈಫ್ ಮೊದಲ ಮದುವೆಗೆ ಬರುವಂತೆ ಮನೆಯವರು ಎಲ್ಲರಿಗೂ ಆಹ್ವಾನ ನೀಡಿದ್ದು, ಕಪೂರ್ ಕುಟುಂಬ ಕೂಡ ಅತಿಥಿಯಾಗಿತ್ತು. ಆ ಸಮಯದಲ್ಲಿ, ಕರೀನಾ ಕಪೂರ್ ಕೂಡ ತನ್ನ ಹೆತ್ತವರೊಂದಿಗೆ ಈ ಮದುವೆಗೆ ಆಗಮಿಸಿದ್ದರು. ಸೈಫ್-ಕರೀನಾ-ಅಮೃತಾ ಅವರ ಈ ಭೇಟಿಯ ನಂತರ, 17 ವರ್ಷಗಳ ನಂತರ ಅವರ ಜೀವನವು ಯಾವ ತಿರುವು ಪಡೆಯುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ.


ಜಬ್ ವಿ ಮೆಟ್ ಸಿನಿಮಾ 2007 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಶಾಹಿದ್ ಮತ್ತು ಕರೀನಾ ಅವರ ಬ್ರೇಕಪ್ ಸುದ್ದಿ ಕೂಡ ಮುನ್ನೆಲೆಗೆ ಬಂದತ್ತು. ಆದರೆ ಸ್ವಲ್ಪ ಸಮಯದ ನಂತರ ಕರೀನಾ ಸೈಫ್ ಜೊತೆ ತಶನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಇವರಿಬ್ಬರ ಲವ್ ಸ್ಟೋರಿ ಇದರಿಂದ ಶುರುವಾಗಿದೆ ಎನ್ನಲಾಗಿದೆ.


ಇದನ್ನೂ ಓದಿ: ಕನ್ನಡ ಕಿರುತೆರೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ "ನಮ್ಮ ಲಚ್ಚಿ"ಗೆ ಸಿಕ್ತು ಈ ಹಿರಿಮೆ...!


ಚಿತ್ರದ ಶೂಟಿಂಗ್ ಸಮಯದಲ್ಲಿ ಅವರಿಬ್ಬರು ಮತ್ತಷ್ಟು ಹತ್ತಿರವಾಗಿದ್ದು ಸೈಫ್ ತಡಮಾಡದೆ ಕರೀನಾಗೆ ಪ್ರಪೋಸ್ ಮಾಡಿದರು. ಆದರೆ ಕರೀನಾ ಈ ಸಂಬಂಧಕ್ಕೆ ಎರಡು ಬಾರಿ ‘ನೋ’ ಎಂದು ಹೇಳಿದ್ದರಂತೆ. ಆ ಬಳಿಕ ‘ಓಕೆ’ ಎಂದಿದ್ದರಂತೆ.  ಆದರೆ ಈ ಮದುವೆಗೂ ಸಹ ಕುಟುಂಬದವರು ಮೊದಲು ಒಪ್ಪಿಗೆ ನೀಡಿರಲಿಲ್ಲ. ಈ ಸಂದರ್ಭದಲ್ಲಿ ಓಡಿ ಹೋಗಿ ಮದುವೆಯಾಗಲು ನಿರ್ಧರಿಸಿದ್ದರಂತೆ. ಆದರೆ ಇವರಿಬ್ಬರ ಪ್ರೀತಿಗೆ ಒಪ್ಪಿಗೆ ಸೂಚಿಸಿದ ಕುಟುಂಬ ಮತ್ತೆ ಅದ್ಧೂರಿಯಾಗಿ ವಿವಾಹ ಏರ್ಪಾಡು ಮಾಡಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.