Grammy Award Winners: ಇಲ್ಲಿಯವರೆಗೆ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್‌ ಗೆದ್ದ ಭಾರತೀಯರು ಇವರೇ ನೋಡಿ!

Grammy Award Winners: ದಿವಂಗತ ಸಂಯೋಜಕ ಪಂಡಿತ್ ರವಿಶಂಕರ್ ಅವರು 1968 ರಲ್ಲಿ 'ಬೆಸ್ಟ್ ಚೇಂಬರ್ ಮ್ಯೂಸಿಕ್ ಪರ್ಫಾರ್ಮೆನ್ಸ್' ವಿಭಾಗದಲ್ಲಿ ವೆಸ್ಟ್ ಮೀಟ್ಸ್ ಈಸ್ಟ್ ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಇತಿಹಾಸವನ್ನು ನಿರ್ಮಿಸಿದರು. ಇದು ನಿಜಕ್ಕೂ ಭಾರತಕ್ಕೆ ಹೆಮ್ಮೆಯ ಕ್ಷಣವಾಗಿತ್ತು. 

Written by - Chetana Devarmani | Last Updated : Feb 6, 2023, 05:53 PM IST
  • ಪಂಡಿತ್ ರವಿಶಂಕರ್ ಗ್ರ್ಯಾಮಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ
  • ಇದುವರೆಗೆ ಭಾರತದ 12 ಮಂದಿ ಗ್ರ್ಯಾಮಿ ಅವಾರ್ಡ್ ಪಡೆದಿದ್ದಾರೆ
  • ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್‌ ಗೆದ್ದ ಭಾರತೀಯರು ಇವರೇ ನೋಡಿ!
Grammy Award Winners: ಇಲ್ಲಿಯವರೆಗೆ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್‌ ಗೆದ್ದ ಭಾರತೀಯರು ಇವರೇ ನೋಡಿ! title=
Grammy Award

ಗ್ರ್ಯಾಮಿ ಅವಾರ್ಡ್‌ ಗೆದ್ದ ಭಾರತೀಯರು : ದಿವಂಗತ ಸಂಯೋಜಕ ಪಂಡಿತ್ ರವಿಶಂಕರ್ ಅವರು 1968 ರಲ್ಲಿ 'ಬೆಸ್ಟ್ ಚೇಂಬರ್ ಮ್ಯೂಸಿಕ್ ಪರ್ಫಾರ್ಮೆನ್ಸ್' ವಿಭಾಗದಲ್ಲಿ ವೆಸ್ಟ್ ಮೀಟ್ಸ್ ಈಸ್ಟ್ ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಇತಿಹಾಸವನ್ನು ನಿರ್ಮಿಸಿದರು. ಇದು ನಿಜಕ್ಕೂ ಭಾರತಕ್ಕೆ ಹೆಮ್ಮೆಯ ಕ್ಷಣವಾಗಿತ್ತು. ಅಂದಿನಿಂದ ಅನೇಕ ಅಸಾಧಾರಣ ಭಾರತೀಯ ಕಲಾವಿದರು ಹಲವಾರು ವರ್ಷಗಳಿಂದ ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಭಾರತದ ಸಂಗೀತ ಪ್ರತಿಭೆಯನ್ನು ಜಗತ್ತಿಗೆ ಸಾರಿದ್ದಾರೆ. 65ನೇ ಸಾಲಿನ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಿತು. ಬೆಂಗಳೂರು ಮೂಲದ ರಿಕ್ಕಿ ಕೇಜ್ ಇದೀಗ ಮೂರನೇ ಬಾರಿ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ. ‘ಡಿವೈನ್​ ಟೈಡ್ಸ್​’​​ ಆಲ್ಬಂಗೆ ಗ್ರ್ಯಾಮಿ ಅವಾರ್ಡ್ ದೊರೆತಿದೆ. 2015 ಹಾಗೂ 2022ರಲ್ಲಿಯೂ ರಿಕ್ಕಿ ಗ್ರ್ಯಾಮಿ ಅವಾರ್ಡ್ ಪಡೆದಿದ್ದರು. ಇದುವರೆಗೆ ಭಾರತದ 12 ಮಂದಿ ಗ್ರ್ಯಾಮಿ ಅವಾರ್ಡ್ ಪಡೆದಿದ್ದಾರೆ.  

ಇದನ್ನೂ ಓದಿ :Kiara Sidharth Marriage: ಫೆ. 6ಕ್ಕೆ ನಡೆಯಲ್ಲ ಸಿದ್ಧಾರ್ಥ್ ಕಿಯಾರಾ ಅದ್ಧೂರಿ ಮದುವೆ! ವಿವಾಹದ ಡೇಟ್ ಚೇಂಜ್

ಪಂಡಿತ್ ರವಿಶಂಕರ್ 

1968 ರಲ್ಲಿ, ದಿವಂಗತ ಭಾರತೀಯ ಸಂಗೀತ ಸಂಯೋಜಕ ಪಂಡಿತ್ ರವಿಶಂಕರ್ ಅವರು 'ಬೆಸ್ಟ್ ಚೇಂಬರ್ ಮ್ಯೂಸಿಕ್ ಪರ್ಫಾರ್ಮೆನ್ಸ್' ವಿಭಾಗದಲ್ಲಿ 'ವೆಸ್ಟ್ ಮೀಟ್ಸ್ ಈಸ್ಟ್' ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾದರು. ಅವರು 'ದಿ ಕನ್ಸರ್ಟ್ ಫಾರ್ ಬಾಂಗ್ಲಾದೇಶ' ಮತ್ತು 'ಫುಲ್ ಸರ್ಕಲ್: ಕಾರ್ನೆಗೀ ಹಾಲ್ 2000' ನಲ್ಲಿನ ಅವರ ಕೆಲಸಕ್ಕಾಗಿ 1973 ಮತ್ತು 2002 ರಲ್ಲಿ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದರು. ಪಂಡಿತ್ ರವಿಶಂಕರ್ ಅವರಿಗೆ ಐದು ಗ್ರ್ಯಾಮಿ ಪ್ರಶಸ್ತಿಗಳು ಲಭಿಸಿವೆ. 

ಜುಬಿನ್ ಮೆಹ್ತಾ

ಭಾರತ ಮೂಲದ ಪಾಶ್ಚಾತ್ಯ ಸಂಗೀತ ಸಂಯೋಜಕ ಜುಬಿನ್ ಮೆಹ್ತಾ. ಇವರು ಕೂಡ ಐದು ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದಾರೆ. ಮೊದಲ ಬಾರಿಗೆ 1981ರಲ್ಲಿ ಜುಬಿನ್ ಮೆಹ್ತಾ ಗ್ರ್ಯಾಮಿ ಅವಾರ್ಡ್ ಗೆದ್ದರು .

ಟಿಹೆಚ್​ ವಿನಯಕ್ರಮ್

ಟಿಹೆಚ್​ ವಿನಯಕ್ರಮ್ ಘಟಂ ವಾದಕರಾಗಿದ್ದರು. ಘಟಂ ದೇವರು ಎಂದೇ ಟಿಹೆಚ್​ ವಿನಯಕ್ರಮ್ ಹೆಸರುವಾಸಿಯಾಗಿದ್ದರು. ಇವರು ಸಹ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಗೆದ್ದಿದ್ದಾರೆ. ಗ್ರ್ಯಾಮಿಯಿಂದ ಬಂದ ಹಣವನ್ನು ‌NGO ಒಂದಕ್ಕೆ ಟಿಹೆಚ್​ ವಿನಯಕ್ರಮ್ ನೀಡಿದ್ದರು. 

ಇದನ್ನೂ ಓದಿ :ಬಾಕ್ಸ್ ಆಫೀಸ್ ನಲ್ಲಿ ಮುಂದುವರೆದ ಪಠಾಣ್ ಅಬ್ಬರ, 12 ದಿನಗಳಲ್ಲಿ 832.20 ಕೋಟಿ..! 

ಸೋನು ನಿಗಮ್

ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವಿ ಮತ್ತು ಯಶಸ್ವಿ ಹಿನ್ನೆಲೆ ಗಾಯಕರಲ್ಲಿ ಒಬ್ಬರೆಂದು ಕರೆಯಲ್ಪಡುವ ಸೋನು ನಿಗಮ್ ಕೂಡ 2017 ರಲ್ಲಿ 'ಮುಬಾರಕನ್' ಗಾಗಿ 'ಮುಬಾರಕನ್ ಆಲ್ಬಮ್' ವಿಭಾಗದಲ್ಲಿ ಅವರ ಶ್ಲಾಘನೀಯ ಕೆಲಸಕ್ಕಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದರು.  

ಜಾಕಿರ್ ಹುಸೇನ್

ಜಾಕಿರ್ ಹುಸೇನ್ ಅವರ ಪರಿಚಯದ ಅಗತ್ಯವಿಲ್ಲ. ಸ್ವಾತಂತ್ರ್ಯದ ನಂತರದ ಯುಗದಲ್ಲಿ ತಬಲಾ ವಾದನಕ್ಕೆ ಹೆಸರುವಾಸಿಯಾಗಿದ್ದ ಜಾಕಿರ್ ಹುಸೇನ್ ಗ್ರ್ಯಾಮಿಗೆ ಒಮ್ಮೆ ಅಲ್ಲ ನಾಲ್ಕು ಬಾರಿ ನಾಮನಿರ್ದೇಶನಗೊಂಡರು. ಆದಾಗ್ಯೂ, ಅವರು ತಮ್ಮ 'ಗ್ಲೋಬಲ್ ಡ್ರಮ್ ಪ್ರಾಜೆಕ್ಟ್' ಗಾಗಿ 'ಅತ್ಯುತ್ತಮ ಸಮಕಾಲೀನ ವಿಶ್ವ ಸಂಗೀತ ಆಲ್ಬಮ್' ವಿಭಾಗದಲ್ಲಿ 2008ರಲ್ಲಿ ಗ್ರ್ಯಾಮಿ ಗೆದ್ದರು.

ಪಂಡಿತ್ ವಿಶ್ವ ಮೋಹನ್ ಭಟ್

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಾದ್ಯಗಾರ ಪಂಡಿತ್ ವಿಶ್ವ ಮೋಹನ್ ಭಟ್ ಕೂಡ ಗ್ರ್ಯಾಮಿ ಅವಾರ್ಡ್ ಗೆದ್ದಿದ್ದಾರೆ.

ಎಆರ್ ರೆಹಮಾನ್ 

ಭಾರತದ ಸಂಗೀತ ಮಾಂತ್ರಿಕ, ಎಆರ್ ರೆಹಮಾನ್ ಅವರ ಸಂಗೀತ ಶೈಲಿ ಗಮನಾರ್ಹ. ಅವರಿಗೆ ಸಂದ ಪುರಸ್ಕಾರಗಳ ದೊಡ್ಡ ಪಟ್ಟಿಯಲ್ಲಿ ಎರಡು ಆಸ್ಕರ್ ಪ್ರಶಸ್ತಿಗಳು ಮತ್ತು ಎರಡು ಗ್ರ್ಯಾಮಿ ಪ್ರಶಸ್ತಿಗಳು ಸೇರಿವೆ. ಅವರು 2008ರಲ್ಲಿ ಗ್ರ್ಯಾಮಿ ಅವಾರ್ಡ್‌ ಪಡೆದರು.

ರಿಕಿ ಕೇಜ್‌ 

2022 ರ ಗ್ರ್ಯಾಮಿಗಳಲ್ಲಿ ಪ್ರಶಸ್ತಿಯನ್ನು ಪಡೆದ ಇಬ್ಬರು ಭಾರತೀಯರಲ್ಲಿ ಒಬ್ಬರಾದ ರಿಕಿ ಕೇಜ್ ಅವರು ಬೆಂಗಳೂರು ಮೂಲದ ಸಂಗೀತ ಸಂಯೋಜಕ. ನ್ಯೂಯಾರ್ಕ್ ಮತ್ತು ಜಿನೀವಾದಲ್ಲಿನ ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಸೇರಿದಂತೆ 30 ಕ್ಕೂ ಹೆಚ್ಚು ದೇಶಗಳ ಪ್ರತಿಷ್ಠಿತ ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಇವರು ಈ ವರೆಗೆ 3 ಬಾರಿಗ್ರ್ಯಾಮಿ ಅವಾರ್ಡ್‌ ಪಡೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News