Collins Obuya Retirement: ಕೀನ್ಯಾದ ಆಲ್‌ರೌಂಡರ್ ಕಾಲಿನ್ಸ್ ಒಬುಯಾ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ್ದಾರೆ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2003 ರ ಸೆಮಿ-ಫೈನಲ್‌ಗೆ ಕೀನ್ಯಾ ತಂಡವನ್ನು ಕೊಂಡೊಯ್ಯುವಲ್ಲಿ ಈ ಆಲ್‌ರೌಂಡರ್ ಪ್ರಮುಖ ಪಾತ್ರ ವಹಿಸಿದ್ದರು. 2001 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅವರು, ಇದೀಗ ತಮ್ಮ 23 ವರ್ಷಗಳ ಸುದೀರ್ಘ ಅಂತರಾಷ್ಟ್ರೀಯ ವೃತ್ತಿ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಪತ್ನಿ ಜೊತೆ ವಿರಾಟ್ ಡೇಟಿಂಗ್!? ಕ್ಯಾಮರಾ ನೋಡ್ತಿದ್ದಂತೆ ಕಾಗದದಿಂದ ಮುಖ ಮುಚ್ಚಿಕೊಂಡ ಸುಂದರಿ!


42ರ ಹರೆಯದ ಕಾಲಿನ್ಸ್ ಒಬುಯಾ, “ನಾನು 23 ವರ್ಷಗಳ ನಂತರ ಆಟದಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಕೀನ್ಯಾ ಪರ ಆಡುವುದು ದೊಡ್ಡ ಗೌರವ. ಯಾವಾಗಲೂ ನನ್ನೊಂದಿಗೆ ಇರುವ ನನ್ನ ಎಲ್ಲಾ ಪಾಲುದಾರರು ಮತ್ತು ನನ್ನ ಕುಟುಂಬಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ನನಗೆ ಅದ್ಭುತವಾದ ವೃತ್ತಿಜೀವನವಾಗಿದೆ. ಇಷ್ಟು ದಿನ ಆಡಲು ಸಾಧ್ಯವಾಗಿರುವುದು ವಿಶೇಷ. ನಾನು ನನ್ನ ವೃತ್ತಿಜೀವನದ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ” ಎಂದಿದ್ದಾರೆ.


ಇದನ್ನೂ ಓದಿ: ಮನೆ ಅಂಗಳದಲ್ಲೇ ಸಿಗುವ ಈ ಹೂವು ನಿಮಿಷಗಳಲ್ಲಿ ಬಿಳಿಕೂದಲನ್ನು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗಿಸುತ್ತೆ!


2003 ರ ಕ್ರಿಕೆಟ್ ವಿಶ್ವಕಪ್‌’ನಲ್ಲಿ ಒಬುಯಾ ಅವರ 5-24 ಸ್ಕೋರ್, ಶ್ರೀಲಂಕಾ ತಂಡವನ್ನು ಎದುರಿಸಲು ಸಹಾಯ ಮಾಡಿತು. ಈ ಪಂದ್ಯದಲ್ಲಿ ಅರವಿಂದ್ ಡಿ ಸಿಲ್ವಾ, ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆ ಅವರ ವಿಕೆಟ್‌’ಗಳನ್ನು ಕಬಳಿಸಿದ್ದು ಇವರೇ. ಅಷ್ಟೇ ಅಲ್ಲದೆ, ಕೀನ್ಯಾ 53 ರನ್‌’ಗಳಿಂದ ಗೆಲ್ಲಲು ನೆರವಾದರು. ಇನ್ನೊಂದೆಡೆ ಈ ಗೆಲುವಿನಿಂದ ಗಳಿಸಿದ ಪ್ರಮುಖ ಅಂಕಗಳು ಕೀನ್ಯಾ ಪಂದ್ಯಾವಳಿಯ ಸೂಪರ್ ಸಿಕ್ಸ್ ಹಂತವನ್ನು ತಲುಪಲು ಮತ್ತು ಅಂತಿಮವಾಗಿ ಸೆಮಿಫೈನಲ್ ತಲುಪಲು ಸಹಾಯ ಮಾಡಿತು. ಜೊತೆಗೆ ಕೀನ್ಯಾ ವಿಶ್ವಕಪ್ ಸೆಮಿಫೈನಲ್ ತಲುಪಿದ ಏಕೈಕ ಟೆಸ್ಟ್ ಆಡದ ದೇಶವಾಯಿತು.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.