ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಪತ್ನಿ ಜೊತೆ ವಿರಾಟ್ ಡೇಟಿಂಗ್!? ಕ್ಯಾಮರಾ ನೋಡ್ತಿದ್ದಂತೆ ಕಾಗದದಿಂದ ಮುಖ ಮುಚ್ಚಿಕೊಂಡ ಸುಂದರಿ!

Virat Kohli-Ritika sajdeh Dating Rumour: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಬಗ್ಗೆ ವಿಶೇಷ ಪರಿಚಯದ ಅಗತ್ಯವೇ ಇಲ್ಲ. ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಕೊಹ್ಲಿ, ಪ್ರಸ್ತುತ ಐಪಿಎಲ್’ನಲ್ಲಿ ಆರ್ ಸಿ ಬಿ ಪರ ಆಡುತ್ತಿದ್ದಾರೆ.

  • Mar 24, 2024, 16:34 PM IST

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಅನುಷ್ಕಾ ಶರ್ಮಾ ಜೊತೆ ಮದುವೆಗೂ ಮುನ್ನ ವಿರಾಟ್ 6 ನಟಿಯರ ಜೊತೆ ಡೇಟಿಂಗ್ ಮಾಡಿದ್ದರು ಎಂದು ವದಂತಿಗಳಿವೆ. ಅದರಲ್ಲಿ ಒಬ್ಬರು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಪತ್ನಿ.ಅನುಷ್ಕಾ ಶರ್ಮಾ ಜೊತೆ ಮದುವೆಗೂ ಮುನ್ನ ವಿರಾಟ್ 6 ನಟಿಯರ ಜೊತೆ ಡೇಟಿಂಗ್ ಮಾಡಿದ್ದರು ಎಂದು ವದಂತಿಗಳಿವೆ. ಅದರಲ್ಲಿ ಒಬ್ಬರು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಪತ್ನಿ.

2 /6

ಆಕೆ ಯಾರು? ನಿಜವಾಗಿಯೂ ಇವರಿಬ್ಬರು ಡೇಟಿಂಗ್ ಮಾಡಿದ್ದರೇ? ಎಂಬೆಲ್ಲಾ ಪ್ರಶ್ನೆಗೆ ಈ ವರದಿಯಲ್ಲಿ ಮಾಹಿತಿಯನ್ನು ನೀಡಲಾಗಿದೆ.

3 /6

ಏಷ್ಯನ್ ಏಜ್ ಸುದ್ದಿ ಪ್ರಕಾರ, ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್ 2013 ರಲ್ಲಿ ವಿರಾಟ್ ಕೊಹ್ಲಿ ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದರು. ಆಗ ರಿತಿಕಾ ಮತ್ತು ರೋಹಿತ್ ಮದುವೆ ಆಗಿರಲಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ. ಆ ವರ್ಷ, ವಿರಾಟ್ ಕೊಹ್ಲಿ ಜಿಂಬಾಬ್ವೆ ಪ್ರವಾಸದ ನಂತರ ಭಾರತಕ್ಕೆ ಹಿಂದಿರುಗಿದಾಗ, ಮುಂಬೈನಲ್ಲಿ ಅಪರಿಚಿತ ಯುವತಿಯೊಂದಿಗೆ ಕಾಣಿಸಿಕೊಂಡರು.

4 /6

ಜೊತೆಗೆ ಆಕೆಯ ಜೊತೆ ಸಿನಿಮಾ ಡೇಟ್ ಕೂಡ ತೆರಳಿದ್ದರು. ಈ ವೇಳೆ ಛಾಯಾಗ್ರಾಹಕರ ಕಣ್ಣು ಇಬ್ಬರ ಮೇಲೂ ಬಿತ್ತು. ಈ ಸಂದರ್ಭದಲ್ಲಿ ಕೂಲ್ ಆಗಿದ್ದ ಕೊಹ್ಲಿ, ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನಡೆದಿದ್ದರು. ಆದರೆ ಆ ಯುವತಿ ತಮ್ಮ ಮುಖ ಮುಚ್ಚಿಕೊಳ್ಳಲು ಯತ್ನಿಸಿದ್ದರು. ಮೊದಲು ತನ್ನ ಕೈಗಳಿಂದ ಮರೆಮಾಚಲು ಯತ್ನಿಸಿದರೆ, ನಂತರ ಪೇಪರ್ ಸಹಾಯದಿಂದ ಮುಖವನ್ನು ಮರೆಮಾಡಿದರು.

5 /6

ಅಂದಹಾಗೆ ಆಕೆ ಬೇರಾರು ಅಲ್ಲ ರಿತಿಕಾ ಸಜ್ದೆಹ್ ಎಂದು ತಿಳಿದುಬಂದಿದೆ. ಆಂಗ್ಲ ಪತ್ರಿಕೆ ಡಿ ಎನ್‌ ಎಯಲ್ಲಿ ಕೊಹ್ಲಿ ಮತ್ತು ರಿತಿಕಾ ಚಿತ್ರ ಪ್ರಕಟವಾಗಿದೆ. 2010 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌’ನಲ್ಲಿ ವಿರಾಟ್ ಕೊಹ್ಲಿ ಮತ್ತು ರಿತಿಕಾ ಭೇಟಿಯಾಗಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಇದಾದ ಬಳಿಕ 2013ರವರೆಗೆ ಕೊಹ್ಲಿ ಜೊತೆ ರಿತಿಕಾ ಕೆಲಸ ಮಾಡಿದ್ದರು.

6 /6

ಕೆಲ ವರದಿಗಳ ಪ್ರಕಾರ ರಿತಿಕಾ ಮತ್ತು ಕೊಹ್ಲಿ ಸ್ನೇಹಿತರು. ಆದರೆ ಇನ್ನೂ ಕೆಲ ವದಂತಿಗಳು ಹೇಳುವ ಅನುಸಾರ ಇವರಿಬ್ಬರು ಡೇಟ್ ಮಾಡಿದ್ದರು. ಈ ವದಂತಿ  ಹಬ್ಬುತ್ತಿದ್ದ ಮಧ್ಯೆಯೇ ರಿತಿಕಾ 2015 ರಲ್ಲಿ ರೋಹಿತ್ ಶರ್ಮಾ ಅವರನ್ನು ವಿವಾಹವಾದರು. ಇನ್ನು ವಿರಾಟ್ ಕೊಹ್ಲಿ 2018 ರಲ್ಲಿ ಅನುಷ್ಕಾ ಶರ್ಮಾ ಅವರನ್ನು ವಿವಾಹವಾದರು.