ಕೊಚ್ಚಿ: ಭಾರತೀಯ ಹಾಕಿ ತಂಡದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರಿಗೆ ಯಾವುದೇ ಬಹುಮಾನಗಳನ್ನು ಘೋಷಿಸದಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದ ಕೇರಳ ಸರ್ಕಾರ, ಆಗಸ್ಟ್ 11 ಬುಧವಾರದಂದು ಪಿ.ಆರ್. ಶ್ರೀಜೇಶ್ ಅವರಿಗೆ 2 ಕೋಟಿ ನಗದು ಬಹುಮಾನ ಮತ್ತು ಉದ್ಯೋಗ ಬಡ್ತಿಯನ್ನು ಘೋಷಿಸಿದೆ. ಅಲ್ಲದೆ ಶ್ರೀಜೇಶ್ ಅವರನ್ನು ಕ್ರೀಡಾ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಬಡ್ತಿ ನೀಡಲು ನಿರ್ಧರಿಸಲಾಗಿದೆ.  ಶ್ರೀಜೇಶ್ ಈ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ (ಕ್ರೀಡೆ) ಉಪ ನಿರ್ದೇಶಕರಾಗಿದ್ದರು.


Tokyo Olympics) ಭಾಗವಹಿಸಿದ ಕೇರಳದ ಎಂಟು ಕ್ರೀಡಾಪಟುಗಳಿಗೆ ಸರ್ಕಾರ 5 ಲಕ್ಷ ಬಹುಮಾನವನ್ನು ಘೋಷಿಸಿದೆ. ಕಳೆದ ವಾರ, ಭಾರತ ಪುರುಷರ ಹಾಕಿ ತಂಡವು ಟೋಕಿಯೊ 2020 ಒಲಿಂಪಿಕ್ಸ್‌ನಲ್ಲಿ ಜರ್ಮನಿಯನ್ನು ಸೋಲಿಸಿ ಭಾರತಕ್ಕೆ ಬಹುನಿರೀಕ್ಷಿತ ಕಂಚಿನ ಪದಕವನ್ನು ಮರಳಿ ತರುವ ಮೂಲಕ ಇತಿಹಾಸ ನಿರ್ಮಿಸಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ- Tokyo Olympics 2020: ಪದಕ ಗೆದ್ದ ಕ್ರೀಡಾಪಟುಗಳಿಗೆ ಕೋಟಿ ಕೋಟಿ, ಯಾರಿಗೆ ಎಷ್ಟು ಬಹುಮಾನ ಗೊತ್ತಾ..?


ವಾಸ್ತವವಾಗಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡವು ಇತಿಹಾಸ ನಿರ್ಮಿಸಿರುವುದು ನಮಗೆಲ್ಲಾ ಗೊತ್ತೇ ಇದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಹುಮಾನ ಘೋಷಿಸುತ್ತಿವೆ. ಆದರೆ ಹಾಕಿ ತಂಡದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ (PR Sreejesh) ಅವರ ಪ್ರತಿಭೆಯನ್ನು ಕೇರಳ ಸರ್ಕಾರ ಗುರುತಿಸಿಯೂ ಇಲ್ಲ, ಅವರಿಗೆ ಯಾವುದೇ ಮನ್ನಣೆಯನ್ನೂ ನೀಡಿಲ್ಲ ಎಂದು ಪ್ರತಿಪಕ್ಷಗಳು ಕೇರಳ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದವು.


ಒಲಂಪಿಕ್ ಕ್ರೀಡಾ ಪಟುಗಳಿಗೆ ಬಹುಮಾನವನ್ನು ಬೇಗನೆ ಘೋಷಿಸದ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವು ಕೇರಳ ಸರ್ಕಾರದ ಮೇಲೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿತ್ತು. ಕೇರಳ ಸರ್ಕಾರವು ಕರ್ಕಿಡಕ ತಿಂಗಳು ಮುಗಿಯಲು ಕಾಯುತ್ತಿದೆಯೇ ಎಂದು ತ್ರಿಪುನಿಥುರಾದ ಕಾಂಗ್ರೆಸ್ ಶಾಸಕ ಕೆ. ಬಾಬು ವಿಧಾನಸಭೆಯಲ್ಲಿ ಸರ್ಕಾರವನ್ನು ಪ್ರಶ್ನಿಸಿದ್ದರು. ಕರ್ಕಿಡಕ ಅಥವಾ ರಾಮಾಯಣ ಮಾಸವನ್ನು ಅನೇಕರು ಅಶುಭವೆಂದು ಪರಿಗಣಿಸುತ್ತಾರೆ.


ಇದನ್ನೂ ಓದಿ- 'Don't Let Us Die': 'ನಮ್ಮನ್ನು ಸಾಯಲು ಬಿಡಬೇಡಿ' ವಿಶ್ವದ ನಾಯಕರುಗಳಿಗೆ ಅಫ್ಘಾನಿಸ್ತಾನ್ ಕ್ರಿಕೆಟಿಗನ ಮನವಿ


ಹರಿಯಾಣ ಸರ್ಕಾರವು ನೀರಜ್ ಚೋಪ್ರಾಗೆ 6 ಕೋಟಿ ರೂಪಾಯಿಗಳನ್ನು ಘೋಷಿಸಿತು, ಇತರ ರಾಜ್ಯ ಸರ್ಕಾರಗಳು ಹಾಕಿ ಆಟಗಾರರಿಗೆ ಪ್ರಶಸ್ತಿ ನೀಡಿರುವುದನ್ನು ಉಲ್ಲೇಖಿಸಿದ ಕಾಂಗ್ರೆಸ್ ಶಾಸಕರು ಸರ್ಕಾರದ ಗಮನಸೆಳೆದರು. "ಡಾ. ಶಮ್ಸೀರ್ ವಯಲೀಲ್ ಅವರಿಂದ ಶ್ರೀಜೇಶ್ ಗೆ 1 ಕೋಟಿ ಬಹುಮಾನ ನೀಡಲಾಗಿದೆ. ಆದರೆ ಸರ್ಕಾರವು ಅವರ ಪ್ರತಿಭೆಯನ್ನು ಗುರುತಿಸದೇ ಇರುವುದು ಅವಮಾನಕರ ಸಂಗತಿ" ಎಂದು ಬಾಬು ಹೇಳಿದರು. ಶಮ್ಸೀರ್ ವಯಲೀಲ್ ಯುಎಇ ಮೂಲದ ವಿಪಿಎಸ್ ಹೆಲ್ತ್‌ಕೇರ್‌ನ ಅಧ್ಯಕ್ಷರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ