PR Sreejesh: ಹಾಕಿ ಕಿಟ್ ಖರೀದಿಸಲು ಹಸು ಮಾರಿದ್ದ ಗೋಲ್‌ಕೀಪರ್ ಶ್ರೀಜೇಶ್ ಕುಟುಂಬ..!

ಒಲಂಪಿಕ್ಸ್ ನಲ್ಲಿ ಕಂಚು ಗೆದ್ದು ದೇಶಕ್ಕೆ ಹೆಮ್ಮೆ ತಂದಿರುವ ತಮ್ಮ ಮಗನ ಸಾಧನೆಗೆ ಶ್ರೀಜೇಶ್ ತಂದೆ ಖುಷಿಪಟ್ಟಿದ್ದಾರೆ.

Written by - Puttaraj K Alur | Last Updated : Aug 7, 2021, 11:01 AM IST
  • ಟೋಕಿಯೊ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಪಿ.ಆರ್.ಶ್ರೀಜೇಶ್ ಸಾಧನೆಗೆ ಅಭಿನಂದನೆಗಳ ಮಹಾಪೂರ
  • ಬಾಲ್ಯದಲ್ಲಿಯೇ ಹಾಕಿ ಗೋಲ್‌ಕೀಪರ್ ಆಗಿ ಮಿಂಚಿದ್ದ ಪಿ.ಆರ್.ಶ್ರೀಜೇಶ್
  • ಪುತ್ರನಿಗೆ ಹಾಕಿ ಕಿಟ್ ಖರೀದಿಲು ಹಸು ಮಾರಿದ್ದ ಶ್ರೀಜೇಶ್ ತಂದೆ ರವೀಂದ್ರನ್
PR Sreejesh: ಹಾಕಿ ಕಿಟ್ ಖರೀದಿಸಲು ಹಸು ಮಾರಿದ್ದ ಗೋಲ್‌ಕೀಪರ್ ಶ್ರೀಜೇಶ್ ಕುಟುಂಬ..! title=
ಭಾರತ ಹಾಕಿ ತಂಡದ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್

ನವದೆಹಲಿ: ಟೋಕಿಯೊ ಒಲಂಪಿಕ್ಸ್(Tokyo Olympics 2020)ನಲ್ಲಿ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದು ದಾಖಲೆ ನಿರ್ಮಿಸಿದೆ. ಬರೋಬ್ಬರಿ 41 ವರ್ಷಗಳ ಬಳಿಕ ಪದಕ ಸಾಧನೆ ಮಾಡುವ ಮೂಲಕ ಹಾಕಿಗೆ ಮರುಜೀವ ಸಿಕ್ಕಂತಾಗಿದೆ. ಈ ಮಧ್ಯೆ ಭಾರತ ಹಾಕಿ ತಂಡದ ಆಟಗಾರರು ದೇಶಕ್ಕೆ ಪದಕ ತರಲು ವಹಿಸಿದ ಶ್ರಮ, ಕಷ್ಟದ ಪರಿಸ್ಥಿತಿಗಳು ಅನಾವರಣಗೊಳ್ಳುತ್ತಿವೆ. ಭಾರತ ತಂಡದ ಗೆಲುವಿನ ಹಿಂದೆ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್(PR Sreejesh) ಪಾತ್ರ ಬಹುಮುಖ್ಯವಾಗಿತ್ತು. ಎದುರಾಳಿ ತಂಡದ ಪ್ರತಿರೋಧ ತಡೆದು ಭಾರತಕ್ಕೆ ಶ್ರೀರಕ್ಷೆಯಾಗಿ ಶ್ರೀಜೇಶ್ ಅತ್ಯುತ್ತಮ ರಕ್ಷಣಾತ್ಮಕ ಆಟವಾಡಿ ಗಮನ ಸೆಳೆದಿದ್ದರು.

ಕಂಚು ಗೆದ್ದು ತವರಿಗೆ ಆಗಮಿಸಿರುವ ಭಾರತೀಯ ಆಟಗಾರರ ಸಾಧನೆಯನ್ನು ಇಡೀ ದೇಶದ ಜನತೆಯೇ ಕೊಂಡಾಡುತ್ತಿದೆ. ಈ ಪೈಕಿ ತುಸು ಹೆಚ್ಚಾಗಿ ಶ್ರೀಜೇಶ್((PR Sreejesh) ಆಟವನ್ನು ಹೊಗಳಲಾಗುತ್ತಿದೆ. ಏಕೆಂದರೆ ಅವರು ‘ದೇಶದ ಗೋಡೆ’ಯಾಗಿ ಪ್ರದರ್ಶನ ತೋರಿದ್ದರು. ಶ್ರೀಜೇಶ್ ಭಾರತ ಹಾಕಿ ತಂಡಕ್ಕೆ ಸೇರಿದ್ದು ಹೇಗೆ..?, ಅವರ ತಂದೆ ಮತ್ತು ಕುಟುಂಬ ಏನೆಲ್ಲ ತ್ಯಾಗ ಮಾಡಿತ್ತು ಎನ್ನುವುದನ್ನು ತಿಳಿದರೆ ಪ್ರತಿಯೊಬ್ಬರ ಕಣ್ಣಂಚಲಿ ನೀರು ಜಿನುಗದೆ ಇರಲಾರದು. ಸಾಧಾರಣ ಕೃಷಿ ಅವಲಂಬಿತ ಕುಟುಂಬದಲ್ಲಿ ಜನಿಸಿದ ಶ್ರೀಜೇಶ್ ಹಾಕಿ ಕ್ರೀಡಾಸಕ್ತಿಗೆ ನೀರೆರೆದು ಪೋಷಿಸಿದ್ದು ಅವರ ತಂದೆ. ಹೀಗಾಗಿ ಅವರಿಗೆ ಹಾಕಿ ಕಿಟ್ ಖರೀದಿಸಲು ತಂದೆ ಹಲವು ತ್ಯಾಗಗಳು ಮಾಡಿದ್ದಾರೆ. ಒಲಂಪಿಕ್ಸ್ ನಲ್ಲಿ ಕಂಚು ಗೆದ್ದು ದೇಶಕ್ಕೆ ಹೆಮ್ಮೆ ತಂದಿರುವ ತಮ್ಮ ಮಗನ ಸಾಧನೆಗೆ ಶ್ರೀಜೇಶ್ ತಂದೆ ಖುಷಿಪಟ್ಟಿದ್ದಾರೆ. ತಾವು ಮಾಡಿದ ತ್ಯಾಗಗಳ ಕುರಿತು ಅವರು ಹಂಚಿಕೊಂಡಿದ್ದಾರೆ.

  Sreejesh's childhood,

ಇದನ್ನೂ ಓದಿ: MS Dhoni Twitter ಖಾತೆಯಿಂದ ರಿಮೂವ್ ಆಯಿತು ಬ್ಲೂ ಟಿಕ್..! ಟ್ವಿಟ್ಟರ್ ನಡೆಗೆ ಕೆರಳಿದ ಅಭಿಮಾನಿಗಳು

1990ರ ವಿದ್ಯಾರ್ಥಿ ದಿಸೆಯಲ್ಲಿ ಶ್ರೀಜೇಶ್ ಸ್ಪ್ರಿಂಟಿಂಗ್ ಮತ್ತು ವಾಲಿಬಾಲ್ ಸೇರಿದಂತೆ ಜಿಲ್ಲಾಮಟ್ಟದ ಕ್ರೀಡಾಕೂಟಗಳಲ್ಲಿ ಮಿಂಚಿದ್ದರು. 7ನೇ ತರಗತಿಯ ಬಳಿಕ ಅವರು ತಿರುವನಂತಪುರಂನ ಜಿವಿ ರಾಜಾ ಸ್ಕೂಲ್‌ಗೆ ಸೇರಿದರು. ತನ್ನ ಹೊಸ ಶಾಲೆಯಲ್ಲಿ ಶ್ರೀಜೇಶ್ ಕ್ರೀಡಗಳ ಮೇಲೆ ವಿಶೇಷ ಗಮನ ನೀಡಿದ್ದರಿಂದ ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಹಾಕಿ(Indian Hockey Team)ಗೋಲ್‌ಕೀಪರ್ ಆಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹಾಕಿಗೆ ಅಗತ್ಯವಾಗಿ ಕಿಟ್‌ನ ಅಗತ್ಯವಿತ್ತು. ಆದರೆ ಹಾಕಿ ಕಿಟ್ ಖರೀದಲು ಶ್ರೀಜೇಶ್ ತಂದೆ ರವೀಂದ್ರನ್ ಬಳಿ ಸಾಕಷ್ಟು ಹಣವಿರಲಿಲ್ಲ.

ತಮ್ಮ ಪುತ್ರನ ಹಾಕಿ ಆಸಕ್ತಿಗೆ ಅವರ ತಂದೆ ಎಂದಿಗೂ ನಿರಾಸೆ ಮಾಡಲಿಲ್ಲ. ಅತ್ಯಂತ ಸಂತೋಷದಿಂದಲೇ ತಮ್ಮ ಹಸುವನ್ನು ಮಾರಿ ಅದರಿಂದ ಬಂದ ಹಣದಲ್ಲಿ ಹಾಕಿ ಕಿಟ್ ಖರೀದಿಸಿ ಶ್ರೀಜೇಶ್ ಗೆ ನೀಡಿದ್ದರು. ‘ನಮ್ಮದು ಒಂದು ಸಾಧಾರಣ ಕುಟುಂಬವಾಗಿತ್ತು. ಒಂದು ಹಾಕಿ ಕಿಟ್‌ಗೆ 10 ಸಾವಿರ ರೂ. ಹೊಂದಿಸಲು ನಮಗೆ ಸಾಧ್ಯವಾಗಲಿಲ್ಲ. ಹೀಗಾಗಿ ನಮ್ಮ 5 ಹಸು(Cow)ಗಳಲ್ಲಿ ಒಂದನ್ನು 7 ಸಾವಿರ ರೂ.ಗೆ ಮಾರಾಟ ಮಾಡಿದೆ. ಇನ್ನುಳಿದ ಹಣವನ್ನು ಹೊಂದಿಸಿ ಹಾಕಿ ಕಿಟ್ ಖರೀದಿಸಿ ಪುತ್ರನಿಗೆ ನೀಡಿದೆ ಅಂತಾ ರವೀಂದ್ರನ್ ಹೇಳಿದರು.   

ಇದನ್ನೂ ಓದಿ: Tokyo Olympics: ಕೈ ಜಾರಿದ ಕಂಚಿನ ಪದಕ, ಭಾರತೀಯ ಮಹಿಳಾ ಹಾಕಿ ತಂಡದ ಕನಸು ಭಗ್ನ

ಮಕ್ಕಳ ಭವಿಷ್ಯ ರೂಪಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. 2002-03ರ ವೇಳೆ ಕಿರಿಯ ರಾಷ್ಟ್ರೀಯ ಶಿಬಿರಕ್ಕಾಗಿ ದೆಹಲಿಗೆ ಶ್ರೀಜೇಶ್ ನನ್ನು ಕರೆದುಕೊಂಡು ಹೋಗಿದ್ದು ನನಗೆ ಇನ್ನೂ ನೆನಪಿದೆ. ತಮ್ಮ ಪುತ್ರ ನಮ್ಮ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ. ಟೋಕಿಯೊ ಒಲಂಪಿಕ್ಸ್(Tokyo Olympics 2020)ನಲ್ಲಿ ಅತ್ಯುತ್ತಮ ಕ್ಷೇತ್ರರಕ್ಷಣೆ ಮಾಡಿ ದೇಶಕ್ಕೆ ಪದಕ ತಂದುಕೊಟ್ಟಿದ್ದಾನೆ. ದೇಶದ ಜನರು ಆತನಿಗೆ ಶುಭಾಶಯಗಳನ್ನು ತಿಳಿಸುತ್ತಿರುವುದು ಖುಷಿ ತಂದಿದೆ. ದೇವರ ಅನುಗ್ರಹದಿಂದ ಶ್ರೀಜೇಶ್ ದೇಶಕ್ಕಾಗಿ ಇನ್ನಷ್ಟು ಸಾಧನೆ ಮಾಡಲಿ ಎಂದು ರವೀಂದ್ರನ್ ಖುಷಿ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News