KL Rahul Statement on Virat Kohli: ವಿರಾಟ್ ಬಗ್ಗೆ ಪ್ರಶ್ನೆ ಕೇಳಿದಕ್ಕೆ ಹೀಗಂದ್ರು ರಾಹುಲ್!! ಉತ್ತರ ಕೇಳಿ ಎಲ್ಲರೂ ಶಾಕ್ ಆಗಿದ್ದೇಕೆ?
KL Rahul Statement on Virat Kohli: ಸೆಪ್ಟೆಂಬರ್‌ನಿಂದ ಕೊಹ್ಲಿ ವೈಟ್-ಬಾಲ್ ಪಂದ್ಯಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಟಿ20ಯಲ್ಲಿ ಶತಕ ಬಾರಿಸಿದ್ದರು. ಅಷ್ಟೇ ಅಲ್ಲದೆ, ಆಸ್ಟ್ರೇಲಿಯದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಕೆಲವು ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.
KL Rahul Statement on Virat Kohli: ಡಿಸೆಂಬರ್ 14ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಟೀಕಾಕಾರರಿಗೆ ಭಾರತದ ಹಂಗಾಮಿ ಟೆಸ್ಟ್ ನಾಯಕ ಕೆ ಎಲ್ ರಾಹುಲ್ ತಕ್ಕ ಉತ್ತರ ನೀಡಿದ್ದಾರೆ. ವರ್ಚಸ್ವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಯಾವಾಗಲೂ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ತಂಡಕ್ಕಾಗಿ ರನ್ ಗಳಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಕೆಎಲ್ ರಾಹುಲ್ ನಂಬಿದ್ದಾರೆ.
ಸೆಪ್ಟೆಂಬರ್‌ನಿಂದ ಕೊಹ್ಲಿ ವೈಟ್-ಬಾಲ್ ಪಂದ್ಯಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಟಿ20ಯಲ್ಲಿ ಶತಕ ಬಾರಿಸಿದ್ದರು. ಅಷ್ಟೇ ಅಲ್ಲದೆ, ಆಸ್ಟ್ರೇಲಿಯದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಕೆಲವು ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.
ಇದನ್ನೂ ಓದಿ: World Test Championship: ಪಾಕಿಸ್ತಾನದ ಸೋಲಿನಿಂದ ಟೀಂ ಇಂಡಿಯಾಗೆ ಲಾಭ: 10 ವರ್ಷಗಳ ಬಳಿಕ ಕೈಸೇರುತ್ತಾ ಐಸಿಸಿ ಟ್ರೋಫಿ!
ವಿರಾಟ್ ಕೊಹ್ಲಿ ಶನಿವಾರ ಬಾಂಗ್ಲಾದೇಶ ವಿರುದ್ಧ ತಮ್ಮ 44 ನೇ ಏಕದಿನ ಶತಕವನ್ನು ಬಾರಿಸಿದ್ದರು. ಸುಮಾರು ಆರು ತಿಂಗಳ ನಂತರ ಭಾರತ ಈಗ ಟೆಸ್ಟ್ ಪಂದ್ಯವನ್ನು ಆಡಲು ಸಿದ್ಧವಾಗಿದೆ. ವೈಟ್ ಬಾಲ್ ಪಂದ್ಯಗಳಿಂದ ರೆಡ್ ಬಾಲ್ ಕ್ರಿಕೆಟ್ ವರೆಗೆ ಕೊಹ್ಲಿ ಉತ್ತಮ ಫಾರ್ಮ್ ಅನ್ನು ಕಾಯ್ದುಕೊಂಡಿದ್ದು, ಎಲ್ಲರ ದೃಷ್ಟಿ ಕೊಹ್ಲಿಯತ್ತ ನೆಟ್ಟಿದೆ.
ಇನ್ನು ಕೊಹ್ಲಿ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್, 'ಈ ತಿಂಗಳುಗಳಲ್ಲಿ ನಾವು ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಿಲ್ಲ. ಆದರೆ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ ನಮಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಇತ್ತೀಚೆಗೆ, ಅವರು ಇಲ್ಲಿ ಬಾಂಗ್ಲಾದೇಶದ ವಿರುದ್ಧ ಶತಕವನ್ನು ಗಳಿಸಿದ್ದರು. ನಿಸ್ಸಂಶಯವಾಗಿ ಅವರು ಟೆಸ್ಟ್ ಪಂದ್ಯಗಳಲ್ಲಿ ಮತ್ತಷ್ಟು ವಿಶ್ವಾಸ ಗಳಿಸುತ್ತಾರೆ” ಎಂದು ಹೇಳಿದರು.
“ಅವರೊಬ್ಬ ಅನುಭವಿ ಆಟಗಾರ. ಏನು ಮಾಡಬೇಕೆಂದು ಅವರಿಗೆ ತಿಳಿದಿದೆ. ಅವರ ಮನಸ್ಥಿತಿ ಮತ್ತು ವರ್ತನೆ ಯಾವಾಗಲೂ ಒಂದೇ ಆಗಿರುತ್ತದೆ. ಅವರು ಆಟದ ಬಗ್ಗೆ ಹೊಂದಿರುವ ಉತ್ಸಾಹವೇ ತಂಡಕ್ಕೆ ನೀಡುವ ಬದ್ಧತೆ. ಆದ್ದರಿಂದ, ನೀವು ನಿಜವಾಗಿಯೂ ಅವರನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಅವರೊಬ್ಬ ಶ್ರೇಷ್ಠ ಆಟಗಾರ. ಅವರು ಯಾವಾಗಲೂ ರನ್ ಗಳಿಸುವ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಮತ್ತೆ ಅದನ್ನು ಸಾಬೀತುಪಡಿಸುತ್ತಾರೆ ಎಂದು ನನಗೆ ಖಾತ್ರಿಯಿದೆ” ಎಂದರು.
ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಡಿಸೆಂಬರ್ 14 ರಿಂದ 18 ರವರೆಗೆ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ನಿಯಮಿತ ನಾಯಕ ರೋಹಿತ್ ಶರ್ಮಾ ಬದಲಾಗಿ ರಾಹುಲ್ ನಾಯಕತ್ವ ವಹಿಸಿಕೊಂಡಿದ್ದಾರೆ.
ಇನ್ನು ರೋಹಿತ್ ಶರ್ಮಾ ಬಗ್ಗೆ ಮಾತನಾಡಿರುವ ಅವರು, 'ರೋಹಿತ್ ಶರ್ಮಾ ನಮಗೆ ಪ್ರಮುಖ ಆಟಗಾರ. ಅವರು ಅತ್ಯಂತ ಅನುಭವಿ ಆಟಗಾರ ಮತ್ತು ನಮ್ಮ ತಂಡದ ನಾಯಕ. ನಾಯಕ ಗಾಯಗೊಂಡಿದ್ದರಿಂದ, ನಾವು ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ. ಎರಡನೇ ಟೆಸ್ಟ್‌ಗೂ ಮುನ್ನ ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ” ಎಂದರು.
ಇದನ್ನೂ ಓದಿ: Team India Captaincy: ಸಚಿನ್ ಬಳಿ ಬಂದಿದ್ದ ನಾಯಕತ್ವ, ಧೋನಿ ಕೈಹಿಡಿದದ್ದು ಹೇಗೆ? ಇದಕ್ಕೆ ಸಂಪೂರ್ಣ ಕಾರಣ ಇವರೇ
ಚೇತೇಶ್ವರ್ ಪೂಜಾರ ಅವರನ್ನು ಬಾಂಗ್ಲಾದೇಶದ ವಿರುದ್ಧದ ಟೆಸ್ಟ್‌ಗೆ ಉಪನಾಯಕರನ್ನಾಗಿ ಮಾಡಲಾಗಿದೆ. ಆದರೆ ಈ ಬೆಳವಣಿಗೆ ಸ್ವಲ್ಪ ಆಶ್ಚರ್ಯವನ್ನುಂಟು ಮಾಡಿತ್ತು. ಏಕೆಂದರೆ ಮಾಜಿ ಆಯ್ಕೆ ಸಮಿತಿಯು ರಿಷಬ್ ಪಂತ್ ಮತ್ತು ರಾಹುಲ್ ಅವರನ್ನು ಭಾರತ ತಂಡದ ಭವಿಷ್ಯದ ನಾಯಕರನ್ನಾಗಿ ರೂಪಿಸಲಾಗುತ್ತಿದೆ ಎಂದು ಹೇಳಿತ್ತು. ಈ ಕುರಿತು ಪ್ರಶ್ನಿಸಿದಾಗ, ಉಪನಾಯಕನ ಬದಲಾವಣೆಯ ಬಗ್ಗೆ ರಾಹುಲ್ ಹೆಚ್ಚು ಮಾತನಾಡಲಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.