Team India Captaincy: ಸಚಿನ್ ಬಳಿ ಬಂದಿದ್ದ ನಾಯಕತ್ವ, ಧೋನಿ ಕೈಹಿಡಿದದ್ದು ಹೇಗೆ? ಇದಕ್ಕೆ ಸಂಪೂರ್ಣ ಕಾರಣ ಇವರೇ

Sachin Tendulkar: ಇಂದು ಬಿಸಿಸಿಐ ಮಾಜಿ ಅಧ್ಯಕ್ಷ ಶರದ್ ಪವಾರ್ ಅವರ 82ನೇ ಹುಟ್ಟುಹಬ್ಬ. ಶರದ್ ಪವಾರ್ 2005 ರಿಂದ 2008 ರವರೆಗೆ ಬಿಸಿಸಿಐ ಅಧ್ಯಕ್ಷರಾಗಿದ್ದರು. ಸ್ವತಃ ಶರದ್ ಪವಾರ್ ಒಮ್ಮೆ ಮಹತ್ವದ ವಿಚಾರವನ್ನು ಬಹಿರಂಗಪಡಿಸಿದ್ದರು. 2007 ರಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ ಅಂದಿನ ನಾಯಕ ರಾಹುಲ್ ದ್ರಾವಿಡ್, ಪವಾರ್ ಬಳಿಗೆ ಬಂದು ನಾಯಕತ್ವ ತೊರೆಯುವ ನಿರ್ಧಾರವನ್ನು ತಿಳಿಸಿದರು.

Written by - Bhavishya Shetty | Last Updated : Dec 12, 2022, 06:22 PM IST
    • ಸಚಿನ್ ತೆಂಡೂಲ್ಕರ್ ಅವರನ್ನು ಭಾರತೀಯ ತಂಡದ ನಾಯಕನನ್ನಾಗಿ ಮಾಡಲು ಬಯಸಿದ್ದರು
    • ಮಾಸ್ಟರ್ ಬ್ಲಾಸ್ಟರ್ ಅವರ ಪ್ರಸ್ತಾಪವನ್ನು ತಿರಸ್ಕರಿಸಿದರು
    • ಮಹೇಂದ್ರ ಸಿಂಗ್ ಧೋನಿಯನ್ನು ಟೀಂ ಇಂಡಿಯಾದ ನೂತನ ನಾಯಕನನ್ನಾಗಿ ಮಾಡಲಾಯಿತು
Team India Captaincy: ಸಚಿನ್ ಬಳಿ ಬಂದಿದ್ದ ನಾಯಕತ್ವ, ಧೋನಿ ಕೈಹಿಡಿದದ್ದು ಹೇಗೆ? ಇದಕ್ಕೆ ಸಂಪೂರ್ಣ ಕಾರಣ ಇವರೇ title=
Sachin Tendulkar

Sachin Tendulkar: 2007 ರಲ್ಲಿ ತನ್ನ ನಾಯಕತ್ವದ ಅವಧಿಯಲ್ಲಿ ಟೀಮ್ ಇಂಡಿಯಾದ ವೈಫಲ್ಯದಿಂದಾಗಿ, ರಾಹುಲ್ ದ್ರಾವಿಡ್ ನಾಯಕತ್ವವನ್ನು ತ್ಯಜಿಸಲು ನಿರ್ಧರಿಸಿದರು. ನಂತರ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರನ್ನು ಭಾರತೀಯ ತಂಡದ ನಾಯಕನನ್ನಾಗಿ ಮಾಡಲು ಬಯಸಿದ್ದರು. ಆದರೆ ಇದು ಸಾಧ್ಯವಾಗಲಿಲ್ಲ. ಮಾಜಿ BCCI ಅಧ್ಯಕ್ಷ ಶರದ್ ಪವಾರ್ 2007 ರಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಟೀಮ್ ಇಂಡಿಯಾದ ನಾಯಕನನ್ನಾಗಿ ಮಾಡಲು ಬಯಸಿದ್ದರು. ಆದರೆ ಮಾಸ್ಟರ್ ಬ್ಲಾಸ್ಟರ್ ಅವರ ಪ್ರಸ್ತಾಪವನ್ನು ತಿರಸ್ಕರಿಸಿದರು.

ಇದನ್ನೂ ಓದಿ:  Rashid Latif statement: ಕೊಹ್ಲಿ ಬಗ್ಗೆ ಪಾಕ್ ಕ್ರಿಕೆಟಿಗ ನೀಡಿದ ಈ ಹೇಳಿಕೆಗೆ ರೊಚ್ಚಿಗೆದ್ದ ಭಾರತೀಯ ಫ್ಯಾನ್ಸ್!! ಅಂತಹದ್ದೇನಂದ್ರು?

ಇಂದು ಬಿಸಿಸಿಐ ಮಾಜಿ ಅಧ್ಯಕ್ಷ ಶರದ್ ಪವಾರ್ ಅವರ 82ನೇ ಹುಟ್ಟುಹಬ್ಬ. ಶರದ್ ಪವಾರ್ 2005 ರಿಂದ 2008 ರವರೆಗೆ ಬಿಸಿಸಿಐ ಅಧ್ಯಕ್ಷರಾಗಿದ್ದರು. ಸ್ವತಃ ಶರದ್ ಪವಾರ್ ಒಮ್ಮೆ ಮಹತ್ವದ ವಿಚಾರವನ್ನು ಬಹಿರಂಗಪಡಿಸಿದ್ದರು. 2007 ರಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ ಅಂದಿನ ನಾಯಕ ರಾಹುಲ್ ದ್ರಾವಿಡ್, ಪವಾರ್ ಬಳಿಗೆ ಬಂದು ನಾಯಕತ್ವ ತೊರೆಯುವ ನಿರ್ಧಾರವನ್ನು ತಿಳಿಸಿದರು. ರಾಹುಲ್ ದ್ರಾವಿಡ್ ನಾಯಕತ್ವ ತ್ಯಜಿಸುವ ನಿರ್ಧಾರದ ನಂತರ ನಾನು ಟೀಂ ಇಂಡಿಯಾದ ನಾಯಕತ್ವವನ್ನು ಸಚಿನ್ ತೆಂಡೂಲ್ಕರ್ ಅವರಿಗೆ ಹಸ್ತಾಂತರಿಸಲು ಬಯಸಿದೆ. ಆದರೆ ಅವರು ಸಾರಾಸಗಟಾಗಿ ನಿರಾಕರಿಸಿದರು ಎಂದು ಶರದ್ ಪವಾರ್ ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು 1996 ರಿಂದ 2000 ರವರೆಗೆ ಟೀಮ್ ಇಂಡಿಯಾದ ನಾಯಕತ್ವವನ್ನು. ಆದರೆ ನಾಯಕತ್ವ ಬ್ಯಾಟಿಂಗ್ ಮೇಲೆ ಪ್ರಭಾವ ಬೀರಿದ ನಂತರ ವಿದಾಯ ಹೇಳಿದರು. ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಟೀಂ ಇಂಡಿಯಾ 73 ಏಕದಿನ ಪಂದ್ಯಗಳಲ್ಲಿ ಕೇವಲ 23 ಪಂದ್ಯಗಳನ್ನು ಗೆದ್ದಿದೆ. ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಟೀಂ ಇಂಡಿಯಾ 25 ಟೆಸ್ಟ್ ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದಿದೆ. 2007ರಲ್ಲಿ ಮತ್ತೆ ಟೀಂ ಇಂಡಿಯಾದ ನಾಯಕತ್ವ ವಹಿಸುವಂತೆ ಶರದ್ ಪವಾರ್ ಅವರನ್ನು ಸಚಿನ್ ತೆಂಡೂಲ್ಕರ್ ಕೇಳಿದಾಗ, ಅದೇ ಕಾರಣಕ್ಕಾಗಿ ಅವರು ನಿರಾಕರಿಸಿದರು.

ಇದನ್ನೂ ಓದಿ: Team India Playing XI: ಟೆಸ್ಟ್ ಪಂದ್ಯದಿಂದ ರೋಹಿತ್ ಔಟ್! ಟೀಂ ಇಂಡಿಯಾದಲ್ಲಿ ಹಠಾತ್ ಬದಲಾವಣೆ: ಈ ಆಟಗಾರರಿಗೆ ಸ್ಥಾನ

ಸಚಿನ್ ತೆಂಡೂಲ್ಕರ್ ಸ್ವತಃ ನಾಯಕತ್ವವನ್ನು ನಿರಾಕರಿಸಿದರು ಎಂದು ಶರದ್ ಪವಾರ್ ಬಹಿರಂಗಪಡಿಸಿದರು, ಆದರೆ ಅವರು ಮಹೇಂದ್ರ ಸಿಂಗ್ ಧೋನಿಯನ್ನು ಹೊಸ ನಾಯಕನನ್ನಾಗಿ ಮಾಡುವ ಅತ್ಯುತ್ತಮ ಕಲ್ಪನೆಯನ್ನು ನೀಡಿದರು. “ಸಚಿನ್ ತೆಂಡೂಲ್ಕರ್ ಆಗ ನನಗೆ ಟೀಮ್ ಇಂಡಿಯಾದಲ್ಲಿ ನಾಯಕನಾಗಬಲ್ಲ ಒಬ್ಬ ಆಟಗಾರನಿದ್ದಾನೆ.ಅದು ಮಹೇಂದ್ರ ಸಿಂಗ್ ಧೋನಿ” ಎಂದು ಹೇಳಿದ್ದರು. ಇದಾದ ಬಳಿಕ ಮಹೇಂದ್ರ ಸಿಂಗ್ ಧೋನಿಯನ್ನು ಟೀಂ ಇಂಡಿಯಾದ ನೂತನ ನಾಯಕನನ್ನಾಗಿ ಮಾಡಲು ನಿರ್ಧರಿಸಿದ್ದೆವು ಎಂದು ಪವಾರ್ ಹೇಳಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News