Virat Kohli post for Cristiano Ronaldo: ಸದ್ಯ ಎಲ್ಲೆಡೆ ಫಿಫಾ ವಿಶ್ವಕಪ್ ಹವಾ ಶುರುವಾಗಿದೆ. ಕತಾರ್ ನಲ್ಲಿ ನಡೆಯುತ್ತಿರುವ ಈ ವರ್ಣರಂಜಿತ ಪಂದ್ಯಾವಳಿಗೆ ಇನ್ನೇನು ಕೆಲವು ದಿನಗಳಲ್ಲಿ ತೆರೆ ಬೀಳಲಿದೆ. ಇನ್ನು ಕ್ವಾರ್ಟರ್ ಫೈನಲ್ ನಲ್ಲಿ ಸೋಲುಂಡ ಪೋರ್ಚುಗಲ್ ಎಲ್ಲರನ್ನೂ ನಿರಾಶೆಯನ್ನು ಒಳಪಡಿಸಿತ್ತು. ಆದರೆ ಇದೇ ಸಂದರ್ಭದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಕಣ್ಣೀರಿನ ವಿದಾಯ ಎಲ್ಲರ ಹೃದಯ ಮುಟ್ಟುವಂತಿತ್ತು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಈ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯವರಿಗೂ ಬೇಸರ ಮೂಡಿಸಿದ್ದು, ರೊನಾಲ್ಡೋಗೆ ಸ್ಪೂರ್ತಿದಾಯಕ ಸಂದೇಶವನ್ನು ರವಾನಿಸಿದ್ದಾರೆ.
ಪೋರ್ಚುಗಲ್ ಅನ್ನು 1-0 ಗೋಲುಗಳ ಅಂತರದಿಂದ ಮೊರೊಕ್ಕೊ ತಂಡ ಸೋಲಿಸಿತ್ತು. ಈ ಬಳಿಕ ಕತಾರ್‌ನಲ್ಲಿ ತಮ್ಮ ಸೋಲಿನ ಬಗ್ಗೆ ರೊನಾಲ್ಡೊ Instagram ನಲ್ಲಿ ಭಾವನಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, “ಯಾವುದೇ ಟ್ರೋಫಿ ಅಥವಾ ಯಾವುದೇ ಶೀರ್ಷಿಕೆಯಾಗಲಿ ನೀವು ಈ ಕ್ರೀಡೆಯಲ್ಲಿ ಮತ್ತು ಪ್ರಪಂಚದಾದ್ಯಂತ ಕ್ರೀಡಾಭಿಮಾನಿಗಳಿಗೆ ಏನನ್ನು ನೀಡಿದ್ದೀರಿ ಎಂಬುದನ್ನು ಅಳೆಯಲು ಸಾಧ್ಯವಿಲ್ಲ” ಎಂದು ಕೊಹ್ಲಿ ಬರೆದಿದ್ದಾರೆ.
(1/2) No trophy or any title can take anything away from what you’ve done in this sport and for sports fans around the world. No title can explain the impact you’ve had on people and what I and so many around the world feel when we watch you play. That’s a gift from god. pic.twitter.com/inKW0rkkpq
— Virat Kohli (@imVkohli) December 12, 2022
2022 ರ ವಿಶ್ವಕಪ್ ಆವೃತ್ತಿಯಲ್ಲಿ 37 ವರ್ಷ ವಯಸ್ಸಿನ ರೊನಾಲ್ಡೊ ತನ್ನ ದೇಶಕ್ಕಾಗಿ ಉನ್ನತ ಪ್ರಶಸ್ತಿಯನ್ನು ಗೆದ್ದಿದ್ದರೆ ಅದು ಚೆನ್ನಾಗಿರುತ್ತಿತ್ತು. ಆದರೆ ಇವೆಲ್ಲದಕ್ಕೂ ಮೀರಿ ರೊನಾಲ್ಡೊ ತನ್ನ ಆಟದ ಮೂಲಕ ನೀಡುರುವ ಪರಂಪರೆ ಮತ್ತು ಬೀರಿರುವ ಪ್ರಭಾವ ಜನರ ಮೇಲೆ ಹೇಗಿದೆ ಎಂಬುದು ನಮಗೆಲ್ಲಾ ತಿಳಿದಿದೆ.
(2/2) A real blessing to a man who plays his heart out every single time and is the epitome of hard work and dedication and a true inspiration for any sportsperson. You are for me the greatest of all time. 🐐👑 @Cristiano
— Virat Kohli (@imVkohli) December 12, 2022
"ನೀವು ಜನರ ಮೇಲೆ ಬೀರಿದ ಪ್ರಭಾವವನ್ನು ಯಾವುದೇ ಶೀರ್ಷಿಕೆ ವಿವರಿಸಲು ಸಾಧ್ಯವಿಲ್ಲ. ನಿಮ್ಮ ಆಟವನ್ನು ಕಂಡಾಗ ನಾನು ಮತ್ತು ಪ್ರಪಂಚ ಅನುಭವಿಸುವ ವಿಶೇಷ ಭಾವನೆ ಏನು ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ಅದು ದೇವರ ಕೊಡುಗೆ. ಪ್ರತಿ ಬಾರಿಯೂ ಒಬ್ಬ ವ್ಯಕ್ತಿಯು ಹೃದಯಪೂರ್ವಕವಾಗಿ ಆಟವಾಡಿದರೆ ಅದುವೇ ನಿಜವಾದ ಆಶೀರ್ವಾದ. ಇದು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಪ್ರತಿರೂಪ. ಎಲ್ಲಾ ಕ್ರೀಡಾಪಟುವಿಗೆ ನೀವು ನಿಜವಾದ ಸ್ಫೂರ್ತಿ. ನೀವು ನನಗೆ ಸಾರ್ವಕಾಲಿಕ ಶ್ರೇಷ್ಠರು” ಎಂದು ಮನಮುಟ್ಟುವಂತಹ ಸಂದೇಶವನ್ನು ಕೊಹ್ಲಿ ಕಳುಹಿಸಿದ್ದಾರೆ.
ಇದನ್ನೂ ಓದಿ: Virushka Wedding Anniversary: ವಿರುಷ್ಕಾ ದಾಂಪತ್ಯಕ್ಕೆ 5 ವರ್ಷ ಪೂರ್ಣ: ಮುದ್ದು ಪತಿಯ ಪೆದ್ದು ಫೋಟೋ ಶೇರ್ ಮಾಡಿದ ಅನುಷ್ಕಾ
ಸ್ವಿಟ್ಜರ್ಲೆಂಡ್ ವಿರುದ್ಧದ ಪೋರ್ಚುಗಲ್‌ನ ರೌಂಡ್ ಆಫ್ 16 ಪಂದ್ಯದಲ್ಲಿ ಮತ್ತು ಮೊರಾಕೊ ವಿರುದ್ಧದ ಕ್ವಾರ್ಟರ್‌ಫೈನಲ್‌ನಲ್ಲಿ ರೊನಾಲ್ಡೊ ಆರಂಭಿಕ XI ನಲ್ಲಿ ಇರಲಿಲ್ಲ. ಈ ಬದಲಾವಣೆ ಪ್ರಪಂಚಕ್ಕೇ ಆಶ್ವರ್ಯವನ್ನು ತಂದೊಡ್ಡಿತ್ತು. ಕತಾರ್‌ನಲ್ಲಿ ನಡೆದ ಕೊನೆಯ ಎಂಟು ಮುಖಾಮುಖಿಯು ರೊನಾಲ್ಡೊ ಅವರ 196 ನೇ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಇದು ಪುರುಷರ ಅಂತರರಾಷ್ಟ್ರೀಯ ಪಂದ್ಯಗಳ ದಾಖಲೆಯನ್ನು ಸರಿಗಟ್ಟಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.