13 ವರ್ಷಗಳ ವೃತ್ತಿಬದುಕು ಅಂತ್ಯ: ಟೆಸ್ಟ್ ಸರಣಿ ಮಧ್ಯೆ ಎಲ್ಲಾ ಸ್ವರೂಪದ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ನಾಯಕ!
Lahiru Thirimanne Cricket News: ಶ್ರೀಲಂಕಾದ ವಿಶ್ವ ಚಾಂಪಿಯನ್ ಆಟಗಾರ ಲಹಿರು ತಿರಿಮನ್ನೆ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳಿಗೆ ಈ ಮಾಹಿತಿ ನೀಡಿದ್ದಾರೆ.
Lahiru Thirimanne Retirement: ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಯ ಎರಡನೇ ಪಂದ್ಯ ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇನ್ನೊಂದೆಡೆ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಹಾಗೂ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದೆ. ಇದೆಲ್ಲದರ ನಡುವೆ ಸ್ಟಾರ್ ಆಟಗಾರರೊಬ್ಬರು ತಮ್ಮ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್’ನ ಎಲ್ಲಾ ಫಾರ್ಮ್ಯಾಟ್‌ಗಳಿಗೆ ಈ ಆಟಗಾರ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ್ದಾರೆ. ಈ ಆಟಗಾರ ತನ್ನ ತಂಡದ ನಾಯಕನೂ ಹೌದು.
ಇದನ್ನೂ ಓದಿ: ಅಂಪೈರಿಂಗ್ ಬಗ್ಗೆ ಅಸಮಾಧಾನ! ಮೈದಾನದಲ್ಲೇ ಕಿಡಿಕಾರಿ ವಿಕೆಟ್’ಗೆ ಬ್ಯಾಟ್’ನಿಂದ ಹೊಡೆದ Team India ಕ್ಯಾಪ್ಟನ್
ಶ್ರೀಲಂಕಾದ ವಿಶ್ವ ಚಾಂಪಿಯನ್ ಆಟಗಾರ ಲಹಿರು ತಿರಿಮನ್ನೆ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳಿಗೆ ಈ ಮಾಹಿತಿ ನೀಡಿದ್ದಾರೆ. ತಿರಿಮನ್ನೆ 2014ರಲ್ಲಿ ಟಿ20 ವಿಶ್ವಕಪ್ ಗೆದ್ದ ಶ್ರೀಲಂಕಾ ತಂಡದ ಭಾಗವಾಗಿದ್ದರು. ಮಾರ್ಚ್ 2022 ರಲ್ಲಿ ಶ್ರೀಲಂಕಾ ಪರ ಕೊನೆಯ ಪಂದ್ಯವನ್ನು ಆಡಿದ್ದು, ಅದು ಟೆಸ್ಟ್ ಆಗಿತ್ತು. ಮತ್ತೊಂದೆಡೆ, ಲಹಿರು ತಿರಿಮನ್ನೆ 4 ವರ್ಷಗಳ ಹಿಂದೆ ಶ್ರೀಲಂಕಾ ಪರ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು.
ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡ ಲಹಿರು ತಿರಿಮನ್ನೆ, ”ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ದೊಡ್ಡ ಗೌರವ. 13 ವರ್ಷಗಳ ಪಯಣದಲ್ಲಿ ನನಗೆ ಬಹಳ ಮಧುರವಾದ ನೆನಪುಗಳು ಬಂದವು. ಈ ಪ್ರಯಾಣದಲ್ಲಿ ನಿಮ್ಮ ಶುಭ ಹಾರೈಕೆಗಳಿಗೆ ತುಂಬಾ ಧನ್ಯವಾದಗಳು. ಈಗ ಮುಂದಿನ ನಿಲ್ದಾಣದಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಕಳೆದ ಕೆಲವು ವರ್ಷಗಳಿಂದ ನನ್ನ ದೇಶವನ್ನು ಪ್ರತಿನಿಧಿಸುವುದು ದೊಡ್ಡ ಗೌರವ. ಈ ಆಟವು ನನಗೆ ಬಹಳಷ್ಟನ್ನು ನೀಡಿದೆ. ಆದರೆ ಬಹಳಷ್ಟು ಮಿಶ್ರ ಭಾವನೆಗಳೊಂದಿಗೆ, ನಾನು ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನನ್ನ ನಿವೃತ್ತಿಯನ್ನು ಘೋಷಿಸುತ್ತೇನೆ. ಒಬ್ಬ ಕ್ರೀಡಾಪಟುವಾಗಿ ನಾನು ನನ್ನ ಅತ್ಯುತ್ತಮವಾದುದನ್ನು ನೀಡಿದ್ದೇನೆ. ನಾನು ನನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡಿದ್ದೇನೆ, ನಾನು ಆಟವನ್ನು ಗೌರವಿಸುತ್ತೇನೆ. ನನ್ನ ಮಾತೃಭೂಮಿಗೆ ಪ್ರಾಮಾಣಿಕವಾಗಿ ಮತ್ತು ನೈತಿಕವಾಗಿ ನನ್ನ ಕರ್ತವ್ಯವನ್ನು ಮಾಡಿದ್ದೇನೆ. ನಿವೃತ್ತಿಯ ನಿರ್ಧಾರವನ್ನು ತೆಗೆದುಕೊಳ್ಳುವುದು ನನಗೆ ತುಂಬಾ ಕಷ್ಟಕರವಾಗಿತ್ತು. ಆದರೆ ಅನಿರೀಕ್ಷಿತ ಕಾರಣಗಳನ್ನು ನಾನು ಇಲ್ಲಿ ಹೇಳಲಾರೆ. ಈ ಕಾರಣದಿಂದ ನಾನು ಬಯಸಿ ಅಥವಾ ಬಯಸದೆಯೋ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು. 13 ವರ್ಷಗಳ ಪಯಣದಲ್ಲಿ ನನಗೆ ಸವಿ ನೆನಪುಗಳು ಸಿಕ್ಕವು. ಈ ಪ್ರಯಾಣದಲ್ಲಿ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಭಾವನಾತ್ಮಕ ಸಂದೇಶ ಕಳುಹಿಸಿದ್ದಾರೆ.
ಇದನ್ನೂ ಓದಿ: 6 ಎಸೆತಕ್ಕೆ 6 ವಿಕೆಟ್ ಉಡೀಸ್! 42ರ ಹರೆಯದ ಈ ಬೌಲರ್ ಬರೆದೇಬಿಟ್ಟ ವಿಶ್ವದಾಖಲೆ
ಲಹಿರು ತಿರಿಮನ್ನೆ ಶ್ರೀಲಂಕಾ ಪರ 44 ಟೆಸ್ಟ್, 127 ODI ಮತ್ತು 26 T20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 3 ಶತಕ ಮತ್ತು 10 ಅರ್ಧ ಶತಕಗಳ ಸಹಾಯದಿಂದ 2088 ರನ್ ಗಳಿಸಿದ್ದಾರೆ. ಏಕದಿನದಲ್ಲಿ 34.77ರ ಸರಾಸರಿಯಲ್ಲಿ 3164 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಟಿ 20 ನಲ್ಲಿ 16.17 ರ ಸರಾಸರಿಯಲ್ಲಿ 291 ರನ್ ಸೇರಿಸಿದ್ದಾರೆ. ತಿರಿಮನ್ನೆ 2014ರಲ್ಲಿ ಟಿ20 ವಿಶ್ವಕಪ್ ಗೆದ್ದ ಶ್ರೀಲಂಕಾ ತಂಡದ ಭಾಗವಾಗಿದ್ದರು. ಶ್ರೀಲಂಕಾ ಫೈನಲ್‌ನಲ್ಲಿ ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಿತು ಎಂಬುದು ಇಲ್ಲಿ ಹೇಳಲೇಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.