Virat Kohli: ವಿರಾಟ್ ಕೊಹ್ಲಿಯನ್ನ ಅಪ್ಪಿ, ಮುತ್ತಿಟ್ಟು ಕಣ್ಣೀರಿಟ್ಟ ವಿಂಡೀಸ್ ಸ್ಟಾರ್ ಆಟಗಾರನ ತಾಯಿ! ಭಾವನಾತ್ಮಕ ಕ್ಷಣ

Joshua Da silva mother: ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 206 ಎಸೆತಗಳಲ್ಲಿ 11 ಬೌಂಡರಿಗಳ ಸಹಾಯದಿಂದ 121 ರನ್ ಗಳಿಸಿದ್ದಾರೆ. ಇದು ಟೆಸ್ಟ್ ಮಾದರಿಯಲ್ಲಿ ಅವರ 29 ನೇ ಶತಕವಾಗಿದ್ದು, ಎಲ್ಲಾ ಸ್ವರೂಪಗಳಲ್ಲಿ ಇದು 76 ನೇ ಶತಕವಾಗಿದೆ.

Written by - Bhavishya Shetty | Last Updated : Jul 22, 2023, 01:33 PM IST
    • ವಿರಾಟ್ ಕೊಹ್ಲಿ 206 ಎಸೆತಗಳಲ್ಲಿ 11 ಬೌಂಡರಿಗಳ ಸಹಾಯದಿಂದ 121 ರನ್ ಗಳಿಸಿದ್ದಾರೆ
    • ಜೋಶುವಾ ಡಿ ಸಿಲ್ವಾ ಅವರ ತಾಯಿ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ
    • ಎರಡನೇ ದಿನದ ಆಟ ಮುಗಿದ ನಂತರ ಅವರು ಭಾರತೀಯ ಆಟಗಾರನನ್ನು ಭೇಟಿಯಾಗಿದ್ದಾರೆ
Virat Kohli: ವಿರಾಟ್ ಕೊಹ್ಲಿಯನ್ನ ಅಪ್ಪಿ, ಮುತ್ತಿಟ್ಟು ಕಣ್ಣೀರಿಟ್ಟ ವಿಂಡೀಸ್ ಸ್ಟಾರ್ ಆಟಗಾರನ ತಾಯಿ! ಭಾವನಾತ್ಮಕ ಕ್ಷಣ title=
Joshua Da silva mother hugs Virat Kohli

Joshua Da silva mother hugs Virat Kohli: ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು, ವಿರಾಟ್ ಕೊಹ್ಲಿ ತಮ್ಮ ತಂಡದ ಪರವಾಗಿ ಅದ್ಭುತ ಶತಕವನ್ನು ಬಾರಿಸಿದರು. ಈ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 206 ಎಸೆತಗಳಲ್ಲಿ 11 ಬೌಂಡರಿಗಳ ಸಹಾಯದಿಂದ 121 ರನ್ ಗಳಿಸಿದ್ದಾರೆ. ಇದು ಟೆಸ್ಟ್ ಮಾದರಿಯಲ್ಲಿ ಅವರ 29 ನೇ ಶತಕವಾಗಿದ್ದು, ಎಲ್ಲಾ ಸ್ವರೂಪಗಳಲ್ಲಿ ಇದು 76 ನೇ ಶತಕವಾಗಿದೆ. ಅಷ್ಟೇ ಅಲ್ಲದೆ ಇದು ವಿರಾಟ್ ಕೊಹ್ಲಿ ಅವರ 500 ನೇ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಶತಕ ಬಾರಿಸುವ ಮೂಲಕ ಸ್ಮರಣೀಯಗೊಳಿಸಿದ್ದಾರೆ.

ಇದನ್ನೂ ಓದಿ: ಹಾರ್ದಿಕ್, ಕೊಹ್ಲಿ ಅಲ್ಲ… ರೋಹಿತ್ ಬಳಿಕ ಈ ಆಟಗಾರನಿಗೆ Team Indiaದ ನಾಯಕತ್ವ!

ಇನ್ನು ವಿರಾಟ್ ಕೊಹ್ಲಿಗೆ ಮಾತ್ರವಲ್ಲದೆ ವೆಸ್ಟ್ ಇಂಡೀಸ್ ಯುವ ಆಟಗಾರ ಜೋಶುವಾ ಡಿ ಸಿಲ್ವಾ ಅವರ ತಾಯಿಗೂ ದೊಡ್ಡ ದಿನವಾಗಿತ್ತು. ಏಕೆಂದರೆ ಜೋಶುವಾ ಡಿ ಸಿಲ್ವಾ ಅವರ ತಾಯಿ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿಯಾಗಿದ್ದು, ಎರಡನೇ ದಿನದ ಆಟ ಮುಗಿದ ನಂತರ ಅವರು ಭಾರತೀಯ ಆಟಗಾರನನ್ನು ಭೇಟಿಯಾಗಿದ್ದಾರೆ.

ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಸ್ಟಂಪ್ಸ್ ಮೈಕ್‌ನಲ್ಲಿ ಜೋಶುವಾ ಡಿ ಸಿಲ್ವಾ ಮಾತನಾಡಿದ್ದು, “ನನ್ನ ತಾಯಿ ನನಗೆ ಫೋನ್ ಮಾಡಿ, ವಿರಾಟ್ ಕೊಹ್ಲಿಯನ್ನು ನೋಡುವ ಉದ್ದೇಶದಿಂದಲೇ ನಾನು ಪಂದ್ಯ ವೀಕ್ಷಿಸಲು ಬರುತ್ತಿದ್ದೇನೆ. ಇದನ್ನು ಕೇಳಿ ನನಗೆ ಶಾಕ್ ಆಯ್ತು” ಎಂದು ವೆಸ್ಟ್ ಇಂಡೀಸ್ ಆಟಗಾರ ಸ್ವತಃ ಹೇಳಿದ್ದಾರೆ.

ಪತ್ರಕರ್ತ ವಿಮಲ್ ಕುಮಾರ್ ಅವರು ಜೋಶುವಾ ಡಿ ಸಿಲ್ವಾ ಅವರ ತಾಯಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ, “ವಿರಾಟ್ ಕೊಹ್ಲಿ ನಮ್ಮ ಕಾಲದ ಅತ್ಯುತ್ತಮ ಬ್ಯಾಟ್ಸ್‌ಮನ್‌’ಗಳಲ್ಲಿ ಒಬ್ಬರು ಮತ್ತು ಅವರನ್ನು ಭೇಟಿ ಮಾಡಲು ನನಗೆ ಅವಕಾಶ ಸಿಕ್ಕಿದ್ದು ನನಗೆ ಸಂತೋಷದ ಕ್ಷಣವಾಗಿದೆ” ಎಂದು ಹೇಳಿದ್ದಾರೆ.

ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 141 ರನ್‌ ಗಳಿಂದ ಗೆದ್ದುಕೊಂಡಿತು. ಇದೀಗ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಎಲ್ಲಾ ವಿಕೆಟ್ ಕಳೆದುಕೊಂಡು 438 ರನ್ ಗಳಿಸಿದೆ. ವಿರಾಟ್ ಕೊಹ್ಲಿ ಹೊರತಾಗಿ ನಾಯಕ ರೋಹಿತ್ ಶರ್ಮಾ 143 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 80 ರನ್ ಗಳಿಸಿದರೆ, ಯುವ ಬ್ಯಾಟ್ಸ್ ಮನ್ ಯಶಸ್ವಿ ಜೈಸ್ವಾಲ್ 74 ಎಸೆತಗಳಲ್ಲಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 57 ರನ್ ಗಳಿಸಿದರು.

ಇದನ್ನೂ ಓದಿ: 2 ವರ್ಷಗಳ ಬಳಿಕ Team Indiaಗೆ ಮರಳಿದರೂ ಮೈದಾನಕ್ಕಿಳಿಯಲು ಈ ಕ್ರಿಕೆಟಿಗನಿಗೆ ಸಿಗುತ್ತಿಲ್ಲ ಅವಕಾಶ!

ರವೀಂದ್ರ ಜಡೇಜಾ 152 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 61 ರನ್‌ಗಳ ಅಮೂಲ್ಯ ಇನ್ನಿಂಗ್ಸ್‌ಗಳನ್ನು ಆಡಿದರು. ಎರಡನೇ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ ತನ್ನ ಮೊದಲ ಇನಿಂಗ್ಸ್ ನಲ್ಲಿ 41 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News