ಜಡೇಜಾ ರೀತಿಯೇ Team Indiaದ ಸರ್ವಶ್ರೇಷ್ಠ ಆಟಗಾರನೀತ! ಆದ್ರೆ ವೃತ್ತಿಜೀವನ ಅಂತ್ಯಗೊಳಿಸಿದ್ದು ಅಕ್ಷರ್ ಪಟೇಲ್!
Team India: ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಈ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್. ರವೀಂದ್ರ ಜಡೇಜಾ ಅವರಂತೆ, ಶಹಬಾಜ್ ನದೀಮ್ ಕೂಡ ಟೀಮ್ ಇಂಡಿಯಾಕ್ಕಾಗಿ ದೀರ್ಘಕಾಲ ಆಡಲು ಅರ್ಹರಾಗಿರುವ ಓರ್ವ ಆಟಗಾರ. ಆದರೆ ಆಯ್ಕೆದಾರರು ಅವರ ವೃತ್ತಿಜೀವನವನ್ನು ಕೊನೆಗೊಳಿಸುತ್ತಿದ್ದಾರೆ.
Team India: ರವೀಂದ್ರ ಜಡೇಜಾ ಅವರಂತೆ ಟೀಂ ಇಂಡಿಯಾಕ್ಕಾಗಿ ದೀರ್ಘಕಾಲ ಆಡಲು ಅರ್ಹರಾಗಿರುವ ಓರ್ವ ಭಾರತೀಯ ಕ್ರಿಕೆಟಿಗನಿದ್ದಾನೆ. ಆದರೆ ಆಯ್ಕೆದಾರರು ಆತನ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂದು ನಾವು ಮಾತನಾಡುತ್ತಿರುವುದು ಭಾರತದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ನಿಂದಾಗಿ ವೃತ್ತಿ ಜೀವನ ನಾಶವಾಗಿರುವ ಓರ್ವ ಕ್ರಿಕೆಟ್ ಆಟಗಾರನ ಬಗ್ಗೆ. ಟೀಂ ಇಂಡಿಯಾದ ಈ ಕ್ರಿಕೆಟಿಗನ ಟೆಸ್ಟ್ ವೃತ್ತಿಜೀವನ ಬಹುತೇಕ ನಾಶವಾಗಿದೆ ಎನ್ನಬಹುದು. ಸುಮಾರು 2 ವರ್ಷಗಳಿಂದ ಈ ಆಟಗಾರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಹಂಬಲದಲ್ಲಿದ್ದಾನೆ. ಭಾರತ ಕ್ರಿಕೆಟ್ ತಂಡದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಅವರು ಈ ಆಟಗಾರನ ವೃತ್ತಿಜೀವನವನ್ನು ಬಹುತೇಕ ಅಂತ್ಯಗೊಳಿಸಿದ್ದಾರೆ,
ಇದನ್ನೂ ಓದಿ: Asia Cup 2023: ಏಷ್ಯಾಕಪ್’ಗೂ ಮುನ್ನ ಮಹತ್ವದ ಘೋಷಣೆ: ಮುಖ್ಯ ಕೋಚ್ ಆಗಿ ಈ ಅನುಭವಿ ನೇಮಕ!
ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಈ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್. ರವೀಂದ್ರ ಜಡೇಜಾ ಅವರಂತೆ, ಶಹಬಾಜ್ ನದೀಮ್ ಕೂಡ ಟೀಮ್ ಇಂಡಿಯಾಕ್ಕಾಗಿ ದೀರ್ಘಕಾಲ ಆಡಲು ಅರ್ಹರಾಗಿರುವ ಓರ್ವ ಆಟಗಾರ. ಆದರೆ ಆಯ್ಕೆದಾರರು ಅವರ ವೃತ್ತಿಜೀವನವನ್ನು ಕೊನೆಗೊಳಿಸುತ್ತಿದ್ದಾರೆ.
ಭಾರತದ 33 ವರ್ಷದ ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್ ಅವರು ಟೀಮ್ ಇಂಡಿಯಾ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ 5-9 ಫೆಬ್ರವರಿ 2021 ರಂದು ಚೆನ್ನೈನಲ್ಲಿ ಆಡಿದ್ದರು. ಅಂದಿನಿಂದ ಶಹಬಾಜ್ ನದೀಮ್ ಭಾರತ ಟೆಸ್ಟ್ ತಂಡದಿಂದ ಹೊರಗುಳಿಯುತ್ತಿದ್ದಾರೆ. ಶಹಬಾಜ್ ನದೀಮ್ ಭಾರತ ಪರ ಇದುವರೆಗೆ ಒಟ್ಟು ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 8 ವಿಕೆಟ್ ಪಡೆದಿದ್ದಾರೆ.
ಟೀಂ ಇಂಡಿಯಾಗೆ ಅಕ್ಷರ್ ಪಟೇಲ್ ಎಂಟ್ರಿಯಾದ ನಂತರ ಶಹಬಾಜ್ ನದೀಮ್ ಅವರ ಟೆಸ್ಟ್ ವೃತ್ತಿಜೀವನ ಬಹುತೇಕ ಮುಗಿದಿದೆ. ಅಕ್ಷರ್ ಪಟೇಲ್ ಇಂಗ್ಲೆಂಡ್ ವಿರುದ್ಧ 13-17 ಫೆಬ್ರವರಿ 2021 ರಂದು ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಾದಾರ್ಪಣೆ ಮಾಡಿದರು, ಅಂದಿನಿಂದ ಅವರು ಟೀಮ್ ಇಂಡಿಯಾದ ಪ್ರಮುಖ ಸದಸ್ಯರಾಗಿದ್ದಾರೆ. ಅಕ್ಷರ್ ಪಟೇಲ್ ಇದುವರೆಗೆ ಆಡಿರುವ 12 ಟೆಸ್ಟ್ ಪಂದ್ಯಗಳಲ್ಲಿ 50 ವಿಕೆಟ್ ಪಡೆದಿದ್ದಾರೆ. ಆದರೆ, ಪ್ರಥಮ ದರ್ಜೆಯಲ್ಲಿ ಶಹಬಾಜ್ ನದೀಮ್ ಅವರ ದಾಖಲೆ ಉತ್ತಮವಾಗಿದೆ. ಶಹಬಾಜ್ ನದೀಮ್ 126 ಪಂದ್ಯಗಳಲ್ಲಿ 28.71 ಸರಾಸರಿಯಲ್ಲಿ 489 ವಿಕೆಟ್ ಪಡೆದಿದ್ದಾರೆ.
ಶಹಬಾಜ್ ನದೀಮ್ ಅವರು 19 ಅಕ್ಟೋಬರ್ 2019 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ರಾಂಚಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಅಂತರಾಷ್ಟ್ರೀಯ ಪಾದಾರ್ಪಣೆ ಮಾಡಿದರು. ರಾಂಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶಹಬಾಜ್ ನದೀಮ್ 4 ವಿಕೆಟ್ ಪಡೆದರು.
ಇದನ್ನೂ ಓದಿ: Cricket: ಕ್ರಿಕೆಟ್ ಫ್ಯಾನ್ಸ್’ಗೆ ಆಘಾತಕಾರಿ ಸುದ್ದಿ! ಗಾಯದ ಕಾರಣ ಈ ಆಟಗಾರ ತಂಡದಿಂದ ಔಟ್
ಶಹಬಾಜ್ ನದೀಮ್ ಇದುವರೆಗೆ 72 ಐಪಿಎಲ್ ಪಂದ್ಯಗಳಲ್ಲಿ 48 ವಿಕೆಟ್ ಪಡೆದಿದ್ದಾರೆ. ತನ್ನ ಕೊನೆಯ ಐಪಿಎಲ್ ಪಂದ್ಯವನ್ನು 2021 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಐಪಿಎಲ್ 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದರು, ಆದರೆ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ