Pakistan team new head coach: ಏಷ್ಯಾ ಕಪ್ 2023 ಅನ್ನು ಪಾಕಿಸ್ತಾನದ ಆತಿಥ್ಯದಲ್ಲಿ ಸೆಪ್ಟೆಂಬರ್ ನಲ್ಲಿ ನಡೆಸಲಾಗುತ್ತಿದೆ. ಈ ಟೂರ್ನಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡ ಮಹತ್ವದ ಘೋಷಣೆ ಮಾಡಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗ್ರಾಂಟ್ ಬ್ರಾಡ್ ಬರ್ನ್ ನೇಮಕಗೊಂಡಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ತಂಡದ ಕೋಚಿಂಗ್ ಪ್ಯಾನೆಲ್ ಅನ್ನು ಮುನ್ನಡೆಸಲಿದ್ದಾರೆ. ಬ್ರಾಡ್ ಬರ್ನ್ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಸಲಹೆಗಾರರಾಗಿ ಜೊತೆಗೆ ತಂಡದ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು
ಇದನ್ನೂ ಓದಿ: Surya Gochar: ಈ ರಾಶಿಯವರಿಗೆ ಇನ್ಮುಂದೆ ಸುಖದ ಸುಪ್ಪತ್ತಿಗೆ! ನೆಮ್ಮದಿ-ಸಂಪತ್ತಿನ ಸಿರಿಯನ್ನೇ ಧಾರೆ ಎರೆಯಲಿದ್ದಾನೆ ಸೂರ್ಯದೇವ
ಬ್ರಾಡ್ ಬರ್ನ್ ಗೆ ಪಾಕಿಸ್ತಾನ ತಂಡದ ಸಾಮರ್ಥ್ಯ ಮತ್ತು ಸವಾಲುಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ಮೊದಲು ಅವರು 2018 ರಿಂದ 2020 ರವರೆಗೆ ಪಾಕಿಸ್ತಾನ ತಂಡದ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು, ನಂತರ ಅವರ ಕೋಚಿಂಗ್ ಶೈಲಿಯನ್ನು ಇಂಪ್ರೂವ್ ಮಾಡಿಕೊಳ್ಳಲೆಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ತೆರಳಿದರು. ಪಾಕಿಸ್ತಾನಕ್ಕೂ ಮುನ್ನ ಅವರು, ಸ್ಕಾಟ್ಲೆಂಡ್ ಪುರುಷರ ತಂಡದ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು.
ಪಿಸಿಬಿ ನಿರ್ವಹಣಾ ಸಮಿತಿ ಅಧ್ಯಕ್ಷ ನಜಮ್ ಸೇಥಿ ಮಾತನಾಡಿದ್ದು, “ನಮ್ಮ ಪುರುಷರ ತಂಡದ ಮುಖ್ಯ ಕೋಚ್ ಆಗಿ ಗ್ರಾಂಟ್ ಬ್ರಾಡ್‌ಬರ್ನ್ ಅವರನ್ನು ನಾಮನಿರ್ದೇಶನ ಮಾಡಲು ನನಗೆ ಸಂತೋಷವಾಗುತ್ತಿದೆ. ಬ್ರಾಡ್ ಬರ್ನ್ ಸಾಕಷ್ಟು ತರಬೇತಿ ಅನುಭವದೊಂದಿಗೆ ತಂಡವನ್ನು ಸೇರಿಕೊಂಡಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮೂಲಕ ನಮ್ಮ ಪುರುಷರ ತಂಡದೊಂದಿಗೆ ಕೆಲಸ ಮಾಡಿದ ಅವರು ನಮ್ಮ ಸಂಸ್ಕೃತಿ ಮತ್ತು ಕ್ರಿಕೆಟ್ ತತ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಮತ್ತು ನಮ್ಮ ತಂಡವನ್ನು ಮುನ್ನಡೆಸಲು ಸೂಕ್ತ ಅಭ್ಯರ್ಥಿಯಾಗಿದ್ದಾರೆ” ಎಂದು ಹೇಳಿದ್ದಾರೆ.
ಪುರುಷರ ತಂಡದ ಮುಖ್ಯ ಕೋಚ್ ಆಗಿ ನೇಮಕ ಮತ್ತು ಕಾರ್ಯತಂತ್ರವನ್ನು ಬಹಿರಂಗಪಡಿಸಿದ ಗ್ರಾಂಟ್ ಬ್ರಾಡ್‌ಬರ್ನ್, 'ಪಾಕಿಸ್ತಾನದಂತಹ ಹೆಚ್ಚು ಪ್ರತಿಭಾವಂತ ಮತ್ತು ಕೌಶಲ್ಯಪೂರ್ಣ ತಂಡದೊಂದಿಗೆ ಮುಖ್ಯ ಕೋಚ್ ಆಗಿ ಕೆಲಸ ಮಾಡುವುದು ನನಗೆ ದೊಡ್ಡ ಗೌರವವಾಗಿದೆ. ನಾವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ. ಮಿಕ್ಕಿ ಆರ್ಥರ್ ಮತ್ತು ನಾನು ನಮ್ಮ ಆಟಗಾರರನ್ನು ಬೆಂಬಲಿಸಲು ಮತ್ತು ಅಭಿವೃದ್ಧಿಪಡಿಸಲು ಉತ್ಸುಕರಾಗಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Rahu-Ketu Gochar 2023: ಇನ್ಮುಂದೆ ಈ ರಾಶಿಗೆ ರಾಹು-ಕೇತು ಅಭಯ: ಹೋದಲ್ಲೆಲ್ಲಾ ದುಡ್ಡಿನ ಮಳೆ; ಹೆಜ್ಜೆ ಹೆಜ್ಜೆಗೂ ಯಶಸ್ಸು!
“ನಾವು ನಿರೀಕ್ಷೆಗಳ ಮಟ್ಟವನ್ನು ಹೆಚ್ಚಿಸಿದ್ದೇವೆ ಮತ್ತು ಎದುರಾಳಿ ಆಟಗಾರರಿಗೆ ಸವಾಲು ಹಾಕುವುದನ್ನು ಮುಂದುವರಿಸುತ್ತೇವೆ. ಪ್ರಕ್ರಿಯೆ ಪ್ರಾರಂಭವಾಗಿದೆ. ನಮ್ಮ ಆಟಗಾರರು ಈ ಸವಾಲುಗಳನ್ನು ಎದುರಿಸಲು ಸಿದ್ದರಾಗಿದ್ದಾರೆ” ಎಂದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ