Cricket: ಕ್ರಿಕೆಟ್ ಫ್ಯಾನ್ಸ್’ಗೆ ಆಘಾತಕಾರಿ ಸುದ್ದಿ! ಗಾಯದ ಕಾರಣ ಈ ಆಟಗಾರ ತಂಡದಿಂದ ಔಟ್

BAN vs IRE Match: ಬಾಂಗ್ಲಾದೇಶದ ಡ್ಯಾಶಿಂಗ್ ಆಲ್‌ ರೌಂಡರ್ ಶಕೀಬ್ ಅಲ್ ಹಸನ್ ಬೆರಳಿನ ಗಾಯದಿಂದಾಗಿ ಭಾನುವಾರ ಐರ್ಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಶಕೀಬ್ ಅಲ್ ಹಸನ್ ಆರು ವಾರಗಳ ಕಾಲ ಕ್ರಿಕೆಟ್ ನಿಂದ ದೂರ ಉಳಿಯಲಿದ್ದಾರೆ.

Written by - Bhavishya Shetty | Last Updated : May 14, 2023, 02:47 PM IST
    • ಡ್ಯಾಶಿಂಗ್ ಆಲ್ ರೌಂಡರ್ ಒಬ್ಬರು ಕ್ಯಾಚ್ ಹಿಡಿಯಲು ಯತ್ನಿಸಿ ಗಂಭೀರವಾಗಿ ಗಾಯಗೊಂಡಿದ್ದಾರೆ
    • ಏಷ್ಯಾಕಪ್ 2023 ಕ್ಕೂ ಮುನ್ನ ಈ ಆಟಗಾರ ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ
    • ಐರ್ಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ.
Cricket: ಕ್ರಿಕೆಟ್ ಫ್ಯಾನ್ಸ್’ಗೆ ಆಘಾತಕಾರಿ ಸುದ್ದಿ! ಗಾಯದ ಕಾರಣ ಈ ಆಟಗಾರ ತಂಡದಿಂದ ಔಟ್ title=
Asia Cup 2023

BAN vs IRE Match: ಇಂಡಿಯನ್ ಪ್ರೀಮಿಯರ್ ಲೀಗ್ 2023 ನಡುವೆ, ಕ್ರಿಕೆಟ್ ಅಭಿಮಾನಿಗಳಿಗೆ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಡ್ಯಾಶಿಂಗ್ ಆಲ್ ರೌಂಡರ್ ಒಬ್ಬರು ಕ್ಯಾಚ್ ಹಿಡಿಯಲು ಯತ್ನಿಸಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯದಿಂದಾಗಿ ಈ ಆಟಗಾರ ಮುಂದಿನ ಕೆಲವು ವಾರಗಳ ಕಾಲ ಮೈದಾನದಲ್ಲಿ ಆಡುವುದಿಲ್ಲ ಎಂಬ ವಿಷಯ ತಿಳಿದುಬಂದಿದೆ. ಏಷ್ಯಾಕಪ್ 2023 ಕ್ಕೂ ಮುನ್ನ ಈ ಆಟಗಾರ ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಆದರೆ, ಈ ಆಟಗಾರ ಅದಕ್ಕೂ ಮುನ್ನ ಮೈದಾನಕ್ಕೆ ಮರಳಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕುಡಿತದ ಚಟ, ಪಂದ್ಯದಲ್ಲಿ ಹೊಡೆದಾಟ; ಆದ್ರೂ ಈತ ಕ್ರಿಕೆಟ್ ಲೋಕದ ದಿಗ್ಗಜ! ಕಡೆಗೆ ಕಾರು ಅಫಘಾತದಲ್ಲಿ ಕೊನೆಯುಸಿರೆಳೆದ…

ಬಾಂಗ್ಲಾದೇಶದ ಡ್ಯಾಶಿಂಗ್ ಆಲ್‌ ರೌಂಡರ್ ಶಕೀಬ್ ಅಲ್ ಹಸನ್ ಬೆರಳಿನ ಗಾಯದಿಂದಾಗಿ ಭಾನುವಾರ ಐರ್ಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಶಕೀಬ್ ಅಲ್ ಹಸನ್ ಆರು ವಾರಗಳ ಕಾಲ ಕ್ರಿಕೆಟ್ ನಿಂದ ದೂರ ಉಳಿಯಲಿದ್ದಾರೆ. ಶುಕ್ರವಾರ ಐರ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಶಕೀಬ್ ಬಲಗೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಐರ್ಲೆಂಡ್ ನ ಇನ್ನಿಂಗ್ಸ್ ನಲ್ಲಿ ಮೆಹದಿ ಹಸನ್ ಮಿರಾಜ್ ಎಸೆತದಲ್ಲಿ ಜಾರ್ಜ್ ಡಾಕ್ರೆಲ್ ಹಿಡಿದ ಕ್ಯಾಚ್ ಅನ್ನು ಶಕೀಬ್ ಕೈಬಿಟ್ಟ ಘಟನೆ ನಡೆದಿದೆ.

ಗಾಯಗೊಂಡ ನಂತರವೂ ಬ್ಯಾಟಿಂಗ್!

ಶಕೀಬ್ ಅಲ್ ಹಸನ್ ಗಾಯಗೊಂಡ ನಂತರವೂ ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿ ಐದು ಬೌಂಡರಿಗಳೊಂದಿಗೆ 26 ರನ್ ಗಳಿಸಿದರು. ಶಕೀಬ್ ನಜ್ಮುಲ್ ಹೊಸೈನ್ ಶಾಂಟೊ ಅವರೊಂದಿಗೆ ಮೂರನೇ ವಿಕೆಟ್‌ ಗೆ 61 ರನ್ ಸೇರಿಸಿದರು, ಅವರ ಚೊಚ್ಚಲ ODI ಶತಕವು ಬಾಂಗ್ಲಾದೇಶಕ್ಕೆ ಮೂರು ವಿಕೆಟ್‌ ಗಳ ಜಯವನ್ನು ತಂದುಕೊಟ್ಟಿತು. 36ರ ಹರೆಯದ ಶಕಿಬ್ ಮುಂದಿನ ತಿಂಗಳು ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶದ ಏಕೈಕ ಟೆಸ್ಟ್‌ ಗೆ ಫಿಟ್‌ನೆಸ್ ಸಾಬೀತುಪಡಿಸಬೇಕಾಗಿದೆ. ಟೀಮ್ ಫಿಸಿಯೋ ಬೈಜೆದುಲ್ ಇಸ್ಲಾಂ ಖಾನ್ ಶಕೀಬ್‌ ಗೆ ಆರು ವಾರಗಳ ಕಾಲ ಆಟದಿಂದ ಹೊರಗುಳಿಯುವಂತೆ ಹೇಳಿದ್ದಾರೆ.

ಶನಿವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ಯತ್ನದಲ್ಲಿ ಶಕೀಬ್ ಅವರ ಬಲ ತೋರು ಬೆರಳಿಗೆ ಗಾಯವಾಗಿದೆ ಎಂದು ಬೈಜೆದುಲ್ ಹೇಳಿಕೆಯನ್ನು ಐಸಿಸಿ ಉಲ್ಲೇಖಿಸಿದೆ. ಎಕ್ಸ್-ರೇ ತೋರುಬೆರಳಿನಲ್ಲಿ ಮುರಿತವನ್ನು ದೃಢಪಡಿಸಿದೆ. ಈ ರೀತಿಯ ಗಾಯಗಳು ಗುಣವಾಗಲು ಸಾಮಾನ್ಯವಾಗಿ ಆರು ವಾರಗಳನ್ನು ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: IPL 2023ರ ಲೈವ್ ಪಂದ್ಯದಲ್ಲಿಯೇ ಕ್ರಿಕೆಟಿಗನ ಮೇಲೆ ಹಲ್ಲೆ ನಡೆಸಿದ ಅಭಿಮಾನಿಗಳು!

ಐರ್ಲೆಂಡ್ ವಿರುದ್ಧದ ಕೊನೆಯ ಪಂದ್ಯಕ್ಕೆ ಅವರು ಲಭ್ಯವಿಲ್ಲ. ಬಾಂಗ್ಲಾದೇಶ ಪ್ರಸ್ತುತ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಸರಣಿಯಲ್ಲಿ ಐರ್ಲೆಂಡ್ ವಿರುದ್ಧ 1-0 ಮುನ್ನಡೆ ಸಾಧಿಸಿದೆ. ಅಂತಿಮ ಪಂದ್ಯದಲ್ಲಿ ದೊಡ್ಡ ಗೆಲುವು ಸಾಧಿಸಿದರೆ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಬಹುದು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News