Rahul Dravid Casting Vote Video: ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಶುಕ್ರವಾರ, ಏಪ್ರಿಲ್ 26 ರಂದು ಬೆಂಗಳೂರಿನಲ್ಲಿ ತನ್ನ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಪ್ರಸ್ತುತ ಭಾರತದಲ್ಲಿ  ಹಲವು ಹಂತಗಳಲ್ಲಿ ಲೋಕಸಭಾ ಚುನಾವಣೆಗಳು ನಡೆಯುತ್ತಿದ್ದು, ದ್ರಾವಿಡ್ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ತಮ್ಮ ಮತ ಚಲಾಯಿಸಲು ಸಮಯವನ್ನು ಮೀಸಲಿರಿಸಿ ಮತ ಚಲಾಯಿಸಿದ್ದಾರೆ. ಇದೇ ವೇಳೆ ಚುನಾವಣೆ ಮತ್ತು ಮತದಾನ ಪ್ರಕ್ರಿಯೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ದ್ರಾವಿಡ್ ತಮ್ಮ ಅಮೂಲ್ಯ ಅಭಿಪ್ರಾಯ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಶುಕ್ರವಾರ 13 ರಾಜ್ಯಗಳ 88 ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಸೀಟುಗಳು ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮತದಾರರಾಗಿರುವ ಬೆಂಗಳೂರು ಕ್ಷೇತ್ರವನ್ನೂ ಒಳಗೊಂಡಿವೆ. ಬೆಂಗಳೂರು ಉತ್ತರದ ಡಾಲರ್ ಕಾಲೋನಿಯಲ್ಲಿರುವ ಮತಗಟ್ಟೆಯಲ್ಲಿ ದ್ರಾವಿಡ್ ತಮ್ಮ ಹಕ್ಕು ಚಲಾಯಿಸಿದ್ದಾರೆ.


ಜನಸಾಮಾನ್ಯರಂತೆ ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದ ದ್ರಾವಿಡ್.
ರಾಹುಲ್ ದ್ರಾವಿಡ್ ಸ್ವತ  ತಮ್ಮ ಕಾರನ್ನು ಮತಗಟ್ಟೆಯವರೆಗೆ ಚಲಾಯಿಸಿಕೊಂಡು ಬಂದು ಈಗಾಗಲೇ ಮತ ಚಲಾಯಿಸಲು ಕಾಯುತ್ತಿದ್ದ ಜನರ ಸರತಿ ಸಾಲಿನಲ್ಲಿ ನಿಂತುಕೊಂಡರು. ಅವರ ಸರಳತೆಯನ್ನು ಕಂಡು ಎಲ್ಲರೂ ಮತ್ತೊಮ್ಮೆ ಅವರ ಅಭಿಮಾನಿಗಳಾಗುವುದು ಗ್ಯಾರಂಟಿ. 2019 ರ ಲೋಕಸಭೆ ಚುನಾವಣೆಗೆ ಕರ್ನಾಟಕ ಚುನಾವಣಾ ಆಯೋಗವು ರಾಹುಲ್ ದ್ರಾವಿಡ್ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿತ್ತು. ಮತದಾರರನ್ನು ಓಲೈಸಲು ದ್ರಾವಿಡ್ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿತ್ತು, ಆದರೆ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು.


ಇದನ್ನೂ ಓದಿ-IPL 2024 KKR vs PBKS: Narain-Salt ಸುನಾಮಿಗೆ ಪಂಜಾಬ್ ತತ್ತರ, ಒಂದೇ ದಿನದಲ್ಲಿ ಹಲವು ದಾಖಲೆಗಳ ನಿರ್ಮಾಣ!


ಮತದಾನ ಮಾಡಿದ ಬಳಿಕ ದೇಶಾದ್ಯಂತ ಉಳಿದ ಮತದಾರರು ಕೂಡ ಮತದಾನ ಮಾಡುವಂತೆ ಮನವಿ ರಾಹುಲ್ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮತ ಚಲಾಯಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕ್ರಿಕೆಟ್ ದಂತಕಥೆ, “ಪ್ರತಿಯೊಬ್ಬರೂ ಮತದಾನಕ್ಕೆ ಬರಬೇಕು. ಇದು ಪ್ರಜಾಪ್ರಭುತ್ವದಿಂದ ನಮಗೆ ಸಿಕ್ಕಿರುವ ಅವಕಾಶವಾಗಿದೆ ಎಂದಿದ್ದಾರೆ.


ಇದನ್ನೂ ಓದಿ-Good News: IPL 2024 ರಲ್ಲಿ ಆಡುತ್ತಿರುವ ಈ ಟೀಮ್ ಇಂಡಿಯಾ ಆಟಗಾರನಿಗೆ ಗುಡ್ ನ್ಯೂಸ್ ನೀಡಿದ ಪತ್ನಿ


ದ್ರಾವಿಡ್ ಹೊರತಾಗಿ, ಭಾರತದ ಮಾಜಿ ಟೆಸ್ಟ್ ನಾಯಕ ಮತ್ತು ಶ್ರೇಷ್ಠ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಕೂಡ ಮತ ಚಲಾಯಿಸಿದ್ದಾರೆ. ಈ ಇಬ್ಬರು ದಿಗ್ಗಜರು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಶುಕ್ರವಾರ ಇಲ್ಲಿ 14 ಲೋಕಸಭಾ ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಇಬ್ಬರೂ ಆಟಗಾರರು ಪ್ರಸ್ತುತ ರಜೆಯನ್ನು ಆನಂದಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಬ್ಬರೂ ಆಟಗಾರರು ಪ್ರಜಾಪ್ರಭುತ್ವದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುವ ಮೂಲಕ ಇತರ ಮತದಾರರನ್ನು ಪ್ರೇರೇಪಿಸುವ ಕೆಲಸ ಮಾಡಿದ್ದಾರೆ.


ವೈರಲ್ ವಿಡಿಯೋ ಇಲ್ಲಿದೆ ನೋಡಿ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.