ವಯಾಕಾಮ್18ಗೆ ಎಂಎಸ್ ಧೋನಿ ಬ್ರಾಂಡ್ ಅಂಬಾಸಿಡರ್..!
ಭಾರತದ ಅತ್ಯಂತ ಯಶಸ್ವಿ ಕ್ರಿಕೆಟ್ ನಾಯಕ ಹಾಗೂ ನಾಲ್ಕು ಬಾರಿಯ ಐಪಿಎಲ್ ವಿಜೇತ ನಾಯಕ ಎಂಎಸ್ ಧೋನಿ ಅವರನ್ನು ತಮ್ಮ ಬ್ರಾಂಡ್ ಅಂಬಾಸಿಡರ್ ಆಗಿ `ವಯಾಕಾಮ್18` ಘೋಷಿಸಿದೆ. ಡಿಜಿಟಲ್ ಮೂಲಕ ಕ್ರೀಡೆಯ ನೇರಪ್ರಸಾರ ವೀಕ್ಷಣೆಯನ್ನು ವರ್ಧಿಸುವ ನೆಟ್ವರ್ಕ್ನ ಧ್ಯೇಯವನ್ನು ಧೋನಿ ಪ್ರಚಾರ ರಾಯಭಾರಿಯಾಗಿ ಹೆಚ್ಚಿನ ಜನರಿಗೆ ತಲುಪಿಸಲಿದ್ದಾರೆ.
ಮುಂಬೈ : ಭಾರತದ ಅತ್ಯಂತ ಯಶಸ್ವಿ ಕ್ರಿಕೆಟ್ ನಾಯಕ ಹಾಗೂ ನಾಲ್ಕು ಬಾರಿಯ ಐಪಿಎಲ್ ವಿಜೇತ ನಾಯಕ ಎಂಎಸ್ ಧೋನಿ ಅವರನ್ನು ತಮ್ಮ ಬ್ರಾಂಡ್ ಅಂಬಾಸಿಡರ್ ಆಗಿ 'ವಯಾಕಾಮ್18' ಘೋಷಿಸಿದೆ. ಡಿಜಿಟಲ್ ಮೂಲಕ ಕ್ರೀಡೆಯ ನೇರಪ್ರಸಾರ ವೀಕ್ಷಣೆಯನ್ನು ವರ್ಧಿಸುವ ನೆಟ್ವರ್ಕ್ನ ಧ್ಯೇಯವನ್ನು ಧೋನಿ ಪ್ರಚಾರ ರಾಯಭಾರಿಯಾಗಿ ಹೆಚ್ಚಿನ ಜನರಿಗೆ ತಲುಪಿಸಲಿದ್ದಾರೆ.
ವಿಶ್ವ ಕ್ರಿಕೆಟ್ನ ಅತ್ಯಂತ ಗೌರವಾನ್ವಿತ ಆಟಗಾರರಲ್ಲಿ ಒಬ್ಬರಾಗಿರುವ ಧೋನಿ, ಅಭಿಮಾನಿಗಳು ತಮ್ಮ ನೆಚ್ಚಿನ ಕ್ರೀಡೆಯನ್ನು ವೀಕ್ಷಿಸಲು ಡಿಜಿಟಲ್ ಮಾಧ್ಯಮಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವಂತೆ ಮಾಡಲು ವಯಾಕಾಮ್18 ಜತೆ ಕಾರ್ಯನಿರ್ವಹಿಸಲಿದ್ದಾರೆ. ಚೆನ್ನೈ ಸೂಪರ್ಕಿಂಗ್ಸ್ನ ಐಕಾನ್ ಆಟಗಾರ, ಜಿಯೋ ಸಿನಿಮಾ, ಸ್ಪೋರ್ಟ್ಸ್18 ಮತ್ತು ತಮ್ಮ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ನೆಟ್ವರ್ಕ್ನ ಹಲವಾರು ಉಪಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. 'ಥಲಾ' ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಲ್ಪಡುವ ಅವರು, ಜಿಯೋ ಸಿನಿಮಾದ ಮುಂಬರುವ ಟಾಟಾ ಐಪಿಎಲ್ ಅಭಿಯಾನದಲ್ಲೂ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಉಪನಾಯಕತ್ವ ಕಿತ್ತುಕೊಂಡ ಬೆನ್ನೆಲ್ಲೇ ಹೀಗೆ ಪ್ರತಿಕ್ರಿಯೆ ನೀಡಿದ ಕೆಎಲ್ ರಾಹುಲ್: ಕ್ರೀಡಾಲೋಕದಲ್ಲೇ ತಲ್ಲಣ ಸೃಷ್ಟಿ!
'ನೀವು ನಿಮ್ಮ ನೆಚ್ಚಿನ ಕ್ರೀಡೆಗಳನ್ನು ನಿಮ್ಮ ಸ್ವಂತ ಮನೆಯ ವಾತಾವರಣದಲ್ಲಿ ಹೆಚ್ಚಾಗಿ ಆನಂದಿಸಲು ಬಯಸುತ್ತೀರಿ. ಆದರೆ, ನೀವು ಪ್ರಯಾಣದಲ್ಲಿರುವಾಗ, ವೈಯಕ್ತೀಕರಣದೊಂದಿಗೆ ಡಿಜಿಟಲ್ ವೇದಿಕೆಯಲ್ಲಿ ಮಾತ್ರ ಅದನ್ನು ನೀವು ಕಾಣಲು ಸಾಧ್ಯ. ಜಿಯೋ ಸಿನಿಮಾ ಅಭಿಮಾನಿಗಳು ಎಂದಿಗೂ ಯೋಚಿಸದ ರೀತಿಯಲ್ಲಿ ತೊಡಗಿಸಿಕೊಳ್ಳಲು ಹೊಸ ಮಟ್ಟದ ಅವಕಾಶವನ್ನು ಕಲ್ಪಿಸುತ್ತಿದೆ. ಈ ಮಾದರಿಯ ಬದಲಾವಣೆಯ ಭಾಗವಾಗಲು ನಾನು ಅತ್ಯಂತ ಕಾತರಗೊಂಡಿದ್ದೇನೆ' ಎಂದು ಎಂಎಸ್ ಧೋನಿ ಹೇಳಿದ್ದಾರೆ.
'ಎಂಎಸ್ ಧೋನಿ ಅವರ ನಾಯಕತ್ವ ಮತ್ತು ಗೇಮ್-ಚೇಜಿಂಗ್ ಸಾಮರ್ಥ್ಯ ಈಗಾಗಲೆ ಎಲ್ಲರಿಗೂ ತಿಳಿದಿದೆ. ಆದರೆ ಅವರ ವಿನಮ್ರ ಮತ್ತು ಸರಳ ವ್ಯಕ್ತಿತ್ವವು ಡಿಜಿಟಲ್ ಮಾಧ್ಯಮದೊಂದಿಗೆ ಹೋಲಿಕೆ ಹೊಂದಿವೆ. ಅವರು ಅಧಿಕೃತತೆ ಮತ್ತು ಪಾರದರ್ಶಕತೆಯನ್ನು ಗೌರವಿಸುತ್ತಾರೆ. ಧೋನಿ ಸಾಟಿಯಿಲ್ಲದ ಮಾನದಂಡಗಳನ್ನು ಹೊಂದಿದ್ದಾರೆ ಮತ್ತು ವೇಗವಾವಿ ವಿಕಸನಗೊಂಡಿದ್ದಾರೆ. ಇದು ಡಿಜಿಟಲ್ನಲ್ಲಿ ಕ್ರೀಡಾ ವೀಕ್ಷಣೆಯನ್ನು ಪ್ರತಿಪಾದಿಸುವ ನಮ್ಮ ದೃಷ್ಟಿಯೊಂದಿಗೂ ಹೋಲಿಕೆ ಹೊಂದಿದೆ' ಎಂದು ವಯಾಕಾಮ್18-ಸ್ಪೋರ್ಟ್ಸ್ ಸಿಇಒ ಅನಿಲ್ ಜಯರಾಜ್ ಹೇಳಿದ್ದಾರೆ.
ಇದನ್ನೂ ಓದಿ: Team India : ಟೀಂ ಇಂಡಿಯಾದಿಂದ ಈ ಆಟಗಾರ ಹಠಾತ್ ಔಟ್..!
'ಹೊಂದಿಕೊಳ್ಳುವ ಮತ್ತು ಆವಿಷ್ಕಾರಿ ಸಾಮರ್ಥ್ಯದ ಮೂಲಕ ಧೋನಿ ಅವರ ಆಟವನ್ನು ಮುಂದುವರಿಸಿದ್ದಾರೆ. ಇದು ಕೂಡ ವಯಾಕಾಮ್18ರ ದಾಖಲೆ ಸೃಷ್ಟಿಸುವ ಮೊದಲ ಡಿಜಿಟಲ್ ಕೊಡುಗೆಗಳೊಂದಿಗೆ ಪರಿಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಧೋನಿ ಅವರು ಪ್ಯಾನ್ ಇಂಡಿಯಾ ವ್ಯಕ್ತಿತ್ವವು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿ ಮತ್ತು ಕ್ರೀಡಾ ವೀಕ್ಷಕರನ್ನು ತಲುಪುವ ನೆಟ್ವರ್ಕ್ನ ಮಹತ್ವಾಕಾಂಕ್ಷೆಯನ್ನು ಬಲಪಡಿಸುತ್ತದೆ' ಎಂದು ಎಂಎಸ್ ಧೋನಿ ಅವರ ಮ್ಯಾನೇಜರ್ (ಮಿಡಾಸ್ ಡೀಲ್ಸ್) ಸ್ವಾಮಿನಾಥನ್ ಶಂಕರ್ ಹೇಳಿದ್ದಾರೆ.
ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ಕಿಂಗ್ಸ್ ತಂಡವನ್ನು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎದುರಿಸುವುದರೊಂದಿಗೆ 2023ರ ಆವೃತ್ತಿಯ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 31ರಂದು ಆರಂಭಗೊಳ್ಳಲಿದೆ. ಈ ವರ್ಷ ಎಲ್ಲ ಪಂದ್ಯಗಳು ಯಾವುದೇ ಶುಲ್ಕವಿಲ್ಲದೆ ಜಿಯೋ ಸಿನಿಮಾದಲ್ಲಿ ನೇರಪ್ರಸಾರ ಕಾಣಲಿವೆ. ಇದರೊಂದಿಗೆ, ಜಿಯೋ ಸಿನಿಮಾ 4ಕೆ ಫೀಡ್ಅನ್ನೂ ಪೂರೈಸಲಿದೆ.
ಇದನ್ನೂ ಓದಿ: MS Dhoni: ಮೈದಾನದಲ್ಲಿಯೇ ರಕ್ತ ಉಗುಳಿದ ಎಂಎಸ್ ಧೋನಿ! ಏನಾಯ್ತು ಕ್ಯಾಪ್ಟನ್ ಕೂಲ್’ಗೆ?
ಇದರಲ್ಲಿ ಬಹುಭಾಷೆ ಮತ್ತು ಬಹು ಕ್ಯಾಮರಾಗಳ ಆಯ್ಕೆಯೂ ಇರಲಿದೆ. ಜತೆಗೆ ಅಂಕಿ-ಅಂಶಗಳ ಮಾಹಿತಿಯೂ ಲಭಿಸಲಿದೆ. ಇದರೊಂದಿಗೆ 700 ದಶಲಕ್ಷಕ್ಕೂ ಅಧಿಕ ಇಂಟರ್ನೆಟ್ ಬಳಕೆದಾರರಿಗೆ 2023ರ ಟಾಟಾ ಐಪಿಎಲ್ ತಲುಪಲಿದೆ. ಜಿಯೋ ಸಿನಿಮಾ ಈಗ ಜಿಯೋ, ಏರ್ಟೆಲ್, ವಿ ಮತ್ತು ಬಿಎಸ್ಎನ್ಎಲ್ ಸಬ್ಸ್ಕ್ರೈಬರ್ಗಳಿಗೆ ಲಭ್ಯವಿದೆ. ಇದರಲ್ಲಿ ಐದು ಭಾಷೆಗಳಾದ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ನ ಎಲ್ಲ ಪಂದ್ಯಗಳ ನೇರಪ್ರಸಾರವನ್ನೂ ವೀಕ್ಷಿಸಬಹುದಾಗಿದೆ.
ಜಿಯೋ ಸಿನಿಮಾ ಆ್ಯಪ್ (ಐಒಎಸ್ ಮತ್ತು ಆಂಡ್ರಾಯ್ಡ್) ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ. ತಾಜಾ ಸುದ್ದಿಗಳು, ಸ್ಕೋರ್, ವಿಡಿಯೋಗಳಿಗಾಗಿ ಅಭಿಮಾನಿಗಳು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಯುಟ್ಯೂಬ್ನಲ್ಲಿ ಸ್ಪೋರ್ಟ್ಸ್18 ಮತ್ತು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಮತ್ತು ಯುಟ್ಯೂಬ್ನಲ್ಲಿ ಜಿಯೋ ಸಿನಿಮಾವನ್ನು ಫಾಲೋ ಮಾಡಬಹುದು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.