Shubman Gill breaks silence: ಭಾರತೀಯ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರಿಗೆ ನಟಿ ರಶ್ಮಿಕಾ ಮಂದಣ್ಣ ಮೇಲೆ ಕ್ರಶ್ ಆಗಿದೆ ಎಂಬ ವದಂತಿಗಳು ಇತ್ತೀಚೆಗೆ ಭಾರೀ ವೈರಲ್ ಆಗಿತ್ತು. ಕೆಲವು ದಿನಗಳ ಹಿಂದೆ, ಮಾಧ್ಯಮ ಸಂವಾದದಲ್ಲಿ ಶುಭ್ಮನ್ ತನ್ನ ಕ್ರಶ್ ಹೆಸರನ್ನು ಬಹಿರಂಗಪಡಿಸಿದ್ದಾರೆ ಎಂಬ ಗಾಸಿಪ್ ಹರಿದಾಡಿತ್ತು. ಇದೀಗ ಈ ವಿಚಾರದಲ್ಲಿ ಕೆಂಡಾಮಂಡಲವಾದ ಗಿಲ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಅಂದು ಸಾಮಾನ್ಯ ಮಹಿಳೆ; ಇಂದು ಸ್ಟಾರ್ ಕ್ರಿಕೆಟಿಗನ ಪತ್ನಿ: ಈಕೆಯ ಅದೃಷ್ಟದಿಂದಲೇ ವಿಶ್ವಕಪ್ ಗೆದ್ದಿದ್ದರಂತೆ ಆ ನಾಯಕ!
ಇನ್’ಸ್ಟಂಟ್ ಬಾಲಿವುಡ್, ಇನ್‌ಸ್ಟಾಗ್ರಾಂ ಪೇಜ್ ನಟಿ ರಶ್ಮಿಕಾ ಮಂದಣ್ಣ ಮತ್ತು ಶುಭ್ಮನ್ ಗಿಲ್ ಅವರ ಫೋಟೋಗಳನ್ನು ಕೊಲಾಜ್ ಮಾಡಿ ಅಪ್‌ಲೋಡ್ ಮಾಡಿದೆ, ಪೋಸ್ಟ್‌ಗೆ "ಕ್ರಶ್ ಅಪ್‌ಡೇಟ್: ರಶ್ಮಿಕಾ ಮಂದಣ್ಣ" ಎಂದು ಶೀರ್ಷಿಕೆಯನ್ನೂ ಸಹ ನೀಡಿದೆ. ಈ ಬೆನ್ನಲ್ಲೇ 23 ವರ್ಷದ ಭಾರತೀಯ ಬ್ಯಾಟರ್ ಪ್ರತಿಕ್ರಿಯೆ ನೀಡಿದ್ದು, "ಯಾವ ಮಾಧ್ಯಮದ ಸಂವಾದ ಇದು, ನನಗೆ ಏನೂ ತಿಳಿದಿಲ್ಲ" ಎಂದು ಹೇಳಿದ್ದಾರೆ.
ಶುಭ್ಮನ್ ಗಿಲ್ ಅವರ ಈ ಉತ್ತರವು ಇಂತಹ ವದಂತಿಗಳಿಗೆ ತೆರೆ ಎಳೆದಿದ್ದು, ವಿಚಾರ ತಿಳಿಯದೆ ಸುದ್ದಿ ಪ್ರಸಾರ ಮಾಡದಂತೆ ಖಡಕ್ ಸೂಚನೆ ನೀಡಿದಂತಿದೆ. ಸದ್ಯಕ್ಕೆ ಈ ವದಂತಿಯ ಬಗ್ಗೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಗಮನಾರ್ಹ.
ಆ ಪೋಸ್ಟ್‌ನಲ್ಲಿ ಶುಭ್ಮನ್ ಗಿಲ್ ಅವರ ಪ್ರತಿಕ್ರಿಯೆಗೆ ಅಭಿಮಾನಿಗಳು ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಬ್ಬ ಅಭಿಮಾನಿ "ಅರೇ ಭಯ್ಯಾ ಕುಚ್ ಭಿ ಬೋಲ್ತೆ ಹೈ ಯೇ ಲೋಗ್, ಇಗ್ನೋರ್ ದೆಮ್ ಬ್ರದರ್ (ಅವರು ಅವರಿಗೆ ಬೇಕಾದುದನ್ನು ಪೋಸ್ಟ್ ಮಾಡುತ್ತಾರೆ, ಅದನ್ನು ನಿರ್ಲಕ್ಷಿಸಿ) ಎಂದು ಹೇಳಿದ್ದಾರೆ. ಇನ್ನೊಬ್ಬ ಅಭಿಮಾನಿ, "ನೀವು ಅವಳನ್ನು ಇಷ್ಟಪಡುತ್ತೀರಿ ಎಂದು ನಾವು ಕೂಡ ನಿರೀಕ್ಷಿಸುವುದಿಲ್ಲ" ಎಂದು ಹೇಳಿದ್ದಾರೆ.
ಮುಂಬೈ ಬ್ಯಾಟರ್’ಗೆ ಈ ಡೇಟಿಂಗ್ ವದಂತಿ ಹೊಸದೇನಲ್ಲ. ಏಕೆಂದರೆ ಅವರು ಈ ಹಿಂದೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರೊಂದಿಗೆ ರೆಸ್ಟೋರೆಂಟ್’ನಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗ ಭಾರೀ ಸುದ್ದಿಯಾಗಿತ್ತು. ನಂತರ ಶುಭ್ಮನ್ ಮತ್ತು ಸಾರಾ ಇಬ್ಬರೂ ತಾವು ತುಂಬಾ ಒಳ್ಳೆಯ ಸ್ನೇಹಿತರು ಎಂದು ಹೇಳುವ ಮೂಲಕ ಈ ವದಂತಿಗೆ ತೆರೆ ಎಳೆದಿದ್ದರು.
ಇದನ್ನೂ ಓದಿ: Shani Uday 2023: ಕುಂಭದಲ್ಲಿ ಶನಿ.. ತೆರೆಯಲಿದೆ ಈ ರಾಶಿಯವರ ಅದೃಷ್ಟ, ಬೇಡ ಬೇಡ ಅಂದ್ರೂ ಶನಿ ಕೊಡ್ತಾನೆ ಹಣ
ಇದಾದ ಬಳಿಕ ಖ್ಯಾತ ಭಾರತೀಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಶುಭ್ಮನ್ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೆಲವು ವರದಿಗಳು ಹೇಳುತ್ತಿವೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ತಿಳಿದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.