ಚೊಚ್ಚಲ ದ್ವಿಶತಕ ಗಳಿಸಿದ ಮಾಯಂಕ್ ಅಗರವಾಲ್, ಬೃಹತ್ ಮೊತ್ತದತ್ತ ಟೀಮ್ ಇಂಡಿಯಾ
ವಿಶಾಖ್ ಪಟ್ಟಣದದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ದತ್ತ 5 ವಿಕೆಟ್ ನಷ್ಟಕ್ಕೆ 446 ರನ್ ಗಳಿಸಿದೆ.
ನವದೆಹಲಿ: ವಿಶಾಖ್ ಪಟ್ಟಣದದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ದತ್ತ 5 ವಿಕೆಟ್ ನಷ್ಟಕ್ಕೆ 446 ರನ್ ಗಳಿಸಿದೆ.
ಆರಂಭಿಕ ಆಟಗಾರರಾಗಿ ಕ್ರೀಸ್ ಗೆ ಬಂದ ರೋಹಿತ್ ಶರ್ಮಾ ಮತ್ತು ಮಾಯಾಂಕ ಅಗರವಾಲ್ ಅವರು ಮೊದಲ ವಿಕೆಟ್ ಗೆ 317 ರನ್ ಗಳ ದಾಖಲೆ ಜೊತೆಯಾಟವಾಡಿದರು. ರೋಹಿತ್ ಶರ್ಮಾ 176 ರನ್ ಗಳಿಗೆ ವಿಕೆಟ್ ಒಪ್ಪಿಸಿದರೆ, ಸ್ವದೇಶದಲ್ಲಿ ಮೊದಲ ಟೆಸ್ಟ್ ಪಂದ್ಯವಾಡುತ್ತಿರುವ ಮಾಯಂಕ್ ಅಗರವಾಲ್ ಮೊದಲ ದ್ವಿಶತಕ ಸಾಧನೆ ಮಾಡಿದರು.
2018 ರಲ್ಲಿ ಮೊದಲ ಬಾರಿಗೆ ಟೆಸ್ಟ್ ಪಾದಾರ್ಪಣೆ ಮಾಡಿದ ಮಾಯಂಕ್ ಅಗರ್ವಾಲ್, ಇದುವರೆಗೆ ನಾಲ್ಕು ಅರ್ಧಶತಕವನ್ನು ಗಳಿಸಿದ್ದಾರೆ. ಈಗ ವಿಶಾಖ್ ಪಟ್ಟಣದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ದ್ವಿಶತಕಗಳಿಸುವ ಮೂಲಕ ತಂಡದ ವಿಶ್ವಾಸ ಮೂಡಿಸಿದ್ದಾರೆ. ಮಾಯಂಕ್ ಅಗರವಾಲ್ 371 ಎಸೆತಗಳಲ್ಲಿ 23 ಬೌಂಡರಿ ಹಾಗೂ 6 ಸಿಕ್ಸರ್ ಗಳೊಂದಿಗೆ 215 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.