ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಪಾಕ್ ಆಟಗಾರ ಮೊಹಮ್ಮದ್ ಅಮೀರ್
ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೀರ್ ಅವರು ಈಗ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೆ ಏಕದಿನ ಕ್ರಿಕೆಟ್ ನಲ್ಲಿ ತಾವು ಮುಂದುವರೆಯುವುದಾಗಿ ಹೇಳಿಕೊಂಡಿದ್ದಾರೆ.
ನವದೆಹಲಿ: ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೀರ್ ಅವರು ಈಗ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೆ ಏಕದಿನ ಕ್ರಿಕೆಟ್ ನಲ್ಲಿ ತಾವು ಮುಂದುವರೆಯುವುದಾಗಿ ಹೇಳಿಕೊಂಡಿದ್ದಾರೆ.
ಈಗ ಈ ಕುರಿತಾಗಿ ಹೇಳಿಕೆ ನೀಡಿರುವ ಅವರು 'ಕ್ರಿಕೆಟ್ ಆಟದ ಪರಾಕಾಷ್ಠೆ ಮತ್ತು ಸಾಂಪ್ರದಾಯಿಕ ಸ್ವರೂಪದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುತ್ತಿರುವುದು ಗೌರವವಾಗಿದೆ.ಆದಾಗ್ಯೂ , ನಾನು ದೀರ್ಘ ಆವೃತ್ತಿಯಿಂದ ದೂರ ಬರಲು ನಿರ್ಧರಿಸಿದ್ದೇನೆ. ಇದರಿಂದಾಗಿ ನಾನು ಬಿಳಿ ಚೆಂಡಿನ ಆಟದ ಮೇಲೆ ಹೆಚ್ಚಿನ ಗಮನಹರಿಸಬಹುದು. ಪಾಕಿಸ್ತಾನಕ್ಕಾಗಿ ಆಡುವುದು ನನ್ನ ಅಂತಿಮ ಆಸೆ ಮತ್ತು ಉದ್ದೇಶವಾಗಿ ಉಳಿದಿದೆ ಮತ್ತು ಮುಂದಿನ ವರ್ಷದ ಐಸಿಸಿ ಟಿ 20 ವಿಶ್ವಕಪ್ ಸೇರಿದಂತೆ ತಂಡದ ಮುಂಬರುವ ಸವಾಲುಗಳಲ್ಲಿ ಕೊಡುಗೆ ನೀಡಲು ಉತ್ತಮ ದೈಹಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ನಾನು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ "ಇದು ಸುಲಭದ ನಿರ್ಧಾರವಲ್ಲ ಮತ್ತು ನಾನು ಈ ಬಗ್ಗೆ ಸ್ವಲ್ಪ ಸಮಯದಿಂದ ಯೋಚಿಸುತ್ತಿದ್ದೇನೆ. ಆದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಪಾಕಿಸ್ತಾನ ತಂಡವು ಯುವ ವೇಗದ ಬೌಲರ್‌ಗಳನ್ನು ಹೊಂದಿದ ತಂಡ ಎನ್ನುವ ಹೆಗ್ಗಳಿಕೆ ಹೊಂದಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ನನ್ನ ನಿರ್ಧಾರವನ್ನು ಕೈಗೊಳ್ಳುವುದು ಸೂಕ್ತವಾಗಿದೆ, ಇದರಿಂದಾಗಿ ಆಯ್ಕೆದಾರರು ಅದಕ್ಕೆ ತಕ್ಕಂತೆ ಯೋಜಿಸಬಹುದು.ನನ್ನ ತಂಡದ ಸಹ ಆಟಗಾರರಿಗೆ ಮತ್ತು ಕೆಂಪು ಚೆಂಡು ಕ್ರಿಕೆಟ್‌ನಲ್ಲಿ ಎದುರಾಳಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರ ಜೊತೆ ಅಥವಾ ವಿರುದ್ಧ ಆಡಲು ಒಂದೊಂದು ರೀತಿಯ ಅವಕಾಶ ಇದ್ದ ಹಾಗೆ. ಇನ್ನು ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಪ್ರಯಾಣ ಇನ್ನು ಮುಂದುವರೆಯಲಿದೆ. ನನ್ನ ಎದೆಯ ಮೇಲೆ ಚಿನ್ನದ ನಕ್ಷತ್ರದ ಅವಕಾಶ ಒದಗಿಸಿದ ಪಿಸಿಬಿಗೆ ನಾನು ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ" ಎಂದು ಅವರು ಹೇಳಿದ್ದಾರೆ.
ಜುಲೈ 2009 ರಲ್ಲಿ ಗ್ಯಾಲೆಯಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಮೊದಲ ಬಾರಿಗೆ ಪಾದಾರ್ಪಣೆ ಮಾಡಿದರು, ಇದುವರೆಗೆ ಅವರು 36 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಸರಾಸರಿ 30.47 ಸರಾಸರಿಯಲ್ಲಿ 119 ವಿಕೆಟ್ ಪಡೆದಿರುವ ಅವರು ಏಪ್ರಿಲ್ 2017 ರಲ್ಲಿ ಕಿಂಗ್ಸ್ಟನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 44/6 ವಿಕೆಟ್ ಪಡೆದಿರುವುದು ಅವರ ಜೀವಮಾನ ಸಾಧನೆಯಾಗಿದೆ.