W,W,W,W,W, W…15 ರನ್, 6 ವಿಕೆಟ್ ಉಡೀಸ್! ಸಿರಾಜ್ ಮ್ಯಾಜಿಕ್’ಗೆ 125 ವರ್ಷ ಹಳೆಯ ಈ ದಾಖಲೆ ಬ್ರೇಕ್
India vs South Africa 2nd Test Day 1 Highlights: ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಅತ್ಯಂತ ಕಡಿಮೆ ಟೆಸ್ಟ್ ಮೊತ್ತಕ್ಕೆ ಶರಣಾಗಬೇಕಾಯಿತು. ಈ ಮೂಲಕ ಕಳೆದ 125 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತವರಿನಲ್ಲಿ ದಕ್ಷಿಣ ಆಫ್ರಿಕಾದ ಅತ್ಯಂತ ಕಡಿಮೆ ಸ್ಕೋರ್ ಕಲೆ ಹಾಕಿದಂತಾಗಿದೆ. ಇನ್ನೊಂದೆಡೆ ಟೆಸ್ಟ್ ಪಂದ್ಯದ ಮೊದಲ ಸೆಷನ್’ನಲ್ಲಿ ಆರು ವಿಕೆಟ್’ಗಳನ್ನು ಪಡೆದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಸಿರಾಜ್ ಭಾಜನರಾಗಿದ್ದಾರೆ.
India vs South Africa 2nd Test Day 1 Highlights: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಸಂಚಲನ ಮೂಡಿಸಿದ್ದಾರೆ. ಆತಿಥೇಯ ತಂಡದ ಬ್ಯಾಟ್ಸ್’ಮನ್’ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ ಮಿಯಾ, ಅರ್ಧದಷ್ಟು ತಂಡವನ್ನು ಕೇವಲ 34 ರನ್’ಗಳಿಗೆ ಔಟ್ ಆಗುವಂತೆ ಮಾಡಿದರು. ಇನ್ನು ಇಡೀ ತಂಡ 23.2 ಓವರ್’ಗಳಲ್ಲಿ ಕೇವಲ 55 ರನ್’ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಕೇಪ್ ಟೌನ್’ನಲ್ಲಿ ಭಾರತ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಗೆಲ್ಲುವತ್ತ ಹೆಜ್ಜೆ ಹಾಕಿದೆ.
ಇದನ್ನೂ ಓದಿ:ಹದಿನೈದು ದಿನಗಳ ಬಳಿಕ 'ಗಜಕೇಸರಿ ರಾಜಯೋಗ' ಈ ರಾಶಿಗಳ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!
ಕೇಪ್ ಟೌನ್’ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ, ಈ ನಿರ್ಧಾರವು ಅವರ ತಂಡಕ್ಕೆ ಸಂಕಷ್ಟ ತಂದೊಡ್ಡಿತು. ಆತಿಥೇಯರು ಕೇವಲ 46 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡರು. ಸಿರಾಜ್ 8 ವಿಕೆಟ್’ಗಳಲ್ಲಿ 6 ವಿಕೆಟ್ ಪಡೆದರೆ, ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮುಖೇಶ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.
ದಾಖಲೆಯತ್ತ ಸಿರಾಜ್ ಹೆಜ್ಜೆ:
ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಅತ್ಯಂತ ಕಡಿಮೆ ಟೆಸ್ಟ್ ಮೊತ್ತಕ್ಕೆ ಶರಣಾಗಬೇಕಾಯಿತು. ಈ ಮೂಲಕ ಕಳೆದ 125 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತವರಿನಲ್ಲಿ ದಕ್ಷಿಣ ಆಫ್ರಿಕಾದ ಅತ್ಯಂತ ಕಡಿಮೆ ಸ್ಕೋರ್ ಕಲೆ ಹಾಕಿದಂತಾಗಿದೆ. ಇನ್ನೊಂದೆಡೆ ಟೆಸ್ಟ್ ಪಂದ್ಯದ ಮೊದಲ ಸೆಷನ್’ನಲ್ಲಿ ಆರು ವಿಕೆಟ್’ಗಳನ್ನು ಪಡೆದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಸಿರಾಜ್ ಭಾಜನರಾಗಿದ್ದಾರೆ.
ಅಲ್ಲದೆ, ಸಿರಾಜ್ ಆರು ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ಭಾರತದ ಎರಡನೇ ವೇಗದ ಬೌಲರ್ ಎಂದೆನಿಸಿಕೊಂಡಿದ್ದಾರೆ.
7/61 - ಶಾರ್ದೂಲ್ ಠಾಕೂರ್ (2022)
6/15 - ಮೊಹಮ್ಮದ್ ಸಿರಾಜ್ (2024)
6/21 – ಜಾವಗಲ್ ಶ್ರೀನಾಥ್ (1996)
6/76 – ಜಾವಗಲ್ ಶ್ರೀನಾಥ್ (2001)
6/104 – ವೆಂಕಟೇಶ್ ಪ್ರಸಾದ್ (1996)
ಇದನ್ನೂ ಓದಿ: ಈ ಒಂದು ವಿಶೇಷ ಕಾರಣದಿಂದಲೇ ವಿರಾಟ್ RCB ಬಿಟ್ಟು ಬೇರೆ ತಂಡ ಸೇರುತ್ತಿಲ್ಲ..! ಸ್ವತಃ ಕೊಹ್ಲಿ ಹೇಳಿದ ರಹಸ್ಯವಿದು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.