Gajkesari Rajyog 2024: ಹದಿನೈದು ದಿನಗಳ ಬಳಿಕ 'ಗಜಕೇಸರಿ ರಾಜಯೋಗ' ಈ ರಾಶಿಗಳ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!

Guru Chandra Yuti 2024: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಶೀಘ್ರದಲ್ಲೇ ಗುರು ಹಾಗೂ ಚಂದ್ರರ ಮೈತ್ರಿಯ ಕಾರಣ ಗಜಕೇಸರಿ ರಾಜಯೋಗ ರಚನೆಯಾಗುತ್ತಿದೆ. ಇದರಿಂದ ಕೆಲ ರಾಶಿಯ ಜನರಿಗೆ ಅದೃಷ್ಟದ ಅಪಾರ ಬೆಂಬಲ ಸಿಗಲಿದ್ದು, ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. (Spiritual News In Kannada)
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ ದೇವಗುರು ಬೃಹಸ್ಪತಿ ಮೇಷ ರಾಶಿಯಲ್ಲಿ ವಿರಾಜಮಾನನಾಗಿದ್ದು, ಶೀಘ್ರದಲ್ಲಿಯೇ ಚಂದ್ರ ಕೂಡ ಮೇಷ ರಾಶಿಗೆ ಪ್ರವೇಶಿಸುತ್ತಿದ್ದು, ಇದರಿಂದ ಮೇಷ ರಾಶಿಯಲ್ಲಿ ಈ ಇಬ್ಬರ ಮೈತ್ರಿಯಿಂದ ಗಜಕೇಸರಿ ರಾಜಯೋಗ ರಚನೆಯಾಗುತ್ತಿದೆ. ಈ ಯೋಗವನ್ನು ಅತ್ಯಂತ ಶುಭ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜನರಿಗೆ ಈ ಯೋಗ ಅಪಾರ ಸಿರಿಸಂಪತ್ತು ಕರುಣಿಸಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)

 

ಇದನ್ನೂ ಓದಿ-ಪ್ರಧಾನಿ ಮೋದಿ, ರಾಹುಲ್, ಕೆಜ್ರೀವಾಲ್ ಪಾಲಿಗೆ ಹೊಸ ವರ್ಷ ಹೇಗಿರಲಿದೆ? ಯಾರ ಭಾಗ್ಯ ಹೊಳೆಯಲಿದೆ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Guru Chandra Yuti 2024: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಶೀಘ್ರದಲ್ಲೇ ಗುರು ಹಾಗೂ ಚಂದ್ರರ ಮೈತ್ರಿಯ ಕಾರಣ ಗಜಕೇಸರಿ ರಾಜಯೋಗ ರಚನೆಯಾಗುತ್ತಿದೆ. ಇದರಿಂದ ಕೆಲ ರಾಶಿಯ ಜನರಿಗೆ ಅದೃಷ್ಟದ ಅಪಾರ ಬೆಂಬಲ ಸಿಗಲಿದ್ದು, ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. (Spiritual News In Kannada)

2 /5

ಧನು ರಾಶಿ ಈ ಯೋಗ ನಿಮ್ಮ ಗೋಚರ ಜಾತಕದ ಪಂಚಮಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಮಕ್ಕಳಿಗೆ ಸಂಬಂಧಿಸಿದ ಶುಭ ಸಮಾಚಾರ ನಿಮಗೆ ಪ್ರಾಪ್ತಿಯಾಗಲಿದೆ. ಅರ್ಥಾತ್ ಮಕ್ಕಳ ವಿವಾಹ ಅಥವಾ ನೌಕರಿಗೆ ಸಂಬಂಧಿಸಿದ ಸಂತಸದ ಸುದ್ದಿ ನಿಮಗೆ ಸಿಗಲಿದೆ. ಲವ್ ಲೈಫ್ ರೊಮ್ಯಾಂಟಿಕ್ ಆಗಿರಲಿದೆ. ಆದಾಯ ಮತ್ತು ಕಾರ್ಯಕ್ಷೇತ್ರದಲ್ಲಿ ವೃದ್ಧಿಯಾಗಲಿದೆ. ಮನಸ್ಸು ಸಂತಸದಿಂದ ಕೂಡಿಯರಲಿದೆ. ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಘನತೆ-ಗೌರವ ಸ್ಥಾನಮಾನ ಹೆಚ್ಚಾಗಲಿದೆ.  

3 /5

ಮೀನ ರಾಶಿ: ಈ ಯೋಗ ನಿಮ್ಮ ಗೋಚರಜಾತಕದ ಧನ ಅಥವಾ ವಾಣಿಯ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಾಶಿಕ ಧಣಪ್ರಾಪ್ತಿಯಾಗಲಿದೆ. ಸಿಲುಕಿಹಾಕಿಕೊಂಡ ನಿಮ್ಮ ಹಣ ನಿಮ್ಮತ್ತ ಮರಳಲಿದೆ. ವ್ಯಾಪಾರ ವರ್ಗದ ಜನರಿಗೆ ವ್ಯಾಪಾರದಲ್ಲಿ ಭಾರಿ ಲಾಭ ಉಂಟಾಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಸ್ಥಾನಮಾನ ಪ್ರತಿಷ್ಠೆ ಹೆಚ್ಚಾಗಲಿದೆ. ಜನರು ನಿಮ್ಮ ಮಾತಿನಿಂದ ಪ್ರಭಾವಿತರಾಗಲಿದ್ದಾರೆ. ಆದರೆ, ಶನಿಯ ಸಾಡೇಸಾತಿ ನಿಮ್ಮ ಮೇಲೆ ನಡೆಯುತ್ತಿರುವ ಕಾರಣ ನಿರ್ಧಾರಗಳನ್ನು ಸಾಕಷ್ಟು ಯೋಚನೆ ಮಾಡಿದ ನಂತರವೇ ಕೈಗೊಳ್ಳಿ, 

4 /5

ಮಿಥುನ ರಾಶಿ: ಈ ಯೋಗ ನಿಮ್ಮ ಗೋಚರ ಜಾತಕದ ಲಾಭ ಹಾಗೂ ಆದಾಯದ ಸ್ಥಾನದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳವಾಗಲಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಬಿಸ್ನೆಸ್ ಮಾಡುವ ಜನರಿಗೆ ಲಾಭ ಸಿಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಸಿಗುವ ಸಾಧ್ಯತೆ ಇದೆ. ಹೂಡಿಕೆಯಿಂದ ಲಾಭ ಸಿಗಲಿದೆ. ಮಕ್ಕಳ ಕೈಯಿಂದ ಲಾಭ ಮತ್ತು ಸುಖ ಪ್ರಾಪ್ತಿಯಾಗಲಿದೆ. ಪಿತ್ರಾರ್ಜಿತ ಸಂಪತ್ತಿನ ಸುಖ ಕೂಡ ನಿಮಗೆ ಪ್ರಾಪ್ತಿಯಾಗಲಿದೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)