ನವದೆಹಲಿ: ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿ ಈಗ ಮಾಜಿ ನಾಯಕ ಧೋನಿ ಹಾಗೂ ಹಾಲಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಹೋಲಿಕೆ ಮಾಡುತ್ತಾ ಇಬ್ಬರು ವಿಭಿನ್ನ ವ್ಯಕ್ತಿತ್ವದವರು, ಆದರೆ ಇಬ್ಬರು ಚಾಂಪಿಯನ್ಸಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 



COMMERCIAL BREAK
SCROLL TO CONTINUE READING

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ನಿರ್ಣಾಯಕ ಪಾತ್ರ ವಹಿಸಿದ್ದ ವಿರಾಟ್ ಕೊಹ್ಲಿ ಹಾಗೂ ಎಂ.ಎಸ್.ಧೋನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. 'ಇಬ್ಬರು ಭಿನ್ನ ವ್ಯಕ್ತಿತ್ವದವರು, ಆದರೆ ಇಬ್ಬರು ಕೂಡ ಚಾಂಪಿಯನ್ಸ್ ಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.


ಹಲವಾರು ಸಂದರ್ಭದಲ್ಲಿ ಧೋನಿ ಆಟದಲ್ಲಿ ನಿಧಾನತೆ ಕಂಡು ಬಂದರು ಸಹಿತ ಕೊಹ್ಲಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಧೋನಿ ಕೂಡ ಕೊಹ್ಲಿಗೆ ಬಹುತೇಕ ಸಂದರ್ಭದಲ್ಲಿ ಫೀಲ್ಡ್ ನಲ್ಲಿ ಕಾರ್ಯತಂತ್ರದ ಬಗ್ಗೆ ಸಲಹೆ ನೀಡಿದ್ದಾರೆ. ಸದ್ಯ ರವಿಶಾಸ್ತ್ರಿಯವರ ಮಾರ್ಗದರ್ಶನದಲ್ಲಿ ಭಾರತ ತಂಡವು ವಿಶ್ವಕಪ್ ಉತ್ತಮ ಆರಂಭವನ್ನು ಕಂಡಿದೆ. ಅಷ್ಟೇ ಅಲ್ಲದೆ ಅಜೇಯ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ.


ಇತ್ತೀಚಿಗೆ ಭಾರತ ತಂಡವು ಏಕದಿನ ರ್ಯಾಂಕಿಂಗ್ ನಲ್ಲಿ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿದ ಸಾಧನೆ ಮಾಡಿದೆ. ಸದ್ಯ ಭಾರತವು ಈಗ 123 ಅಂಕಗಳನ್ನು ಹೊಂದಿದ್ದರೆ, ಇಂಗ್ಲೆಂಡ್  ತಂಡವು 122 ಅಂಕಗಳನ್ನು ಹೊಂದಿದ್ದು, ಅದು ಈಗ ಎರಡನೇ ಸ್ಥಾನಕ್ಕೆ ಕುಸಿದಿದೆ.