ಕ್ರಿಕೆಟ್ ಲೋಕದಲ್ಲಿ ಎಂ.ಎಸ್ ಧೋನಿ ಕಮಾಲ್
IPL ನಲ್ಲೂ ಕೂಡ CSK ತಂಡದ ನಾಯಕನ ಜವಾಬ್ಧಾರಿ ಹೊತ್ತಿರುವ ಧೋನಿ, ತಂಡಕ್ಕೆ 5 ಬಾರಿ ಚಾಂಪಿಯನ್ ಪಟ್ಟ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2010,2011,2018,2021 ರಲ್ಲಿ CSK ಚಾಂಪಿಯನ್ ತಂಡವಾಗಿ ಕಾಣಿಸಿಕೊಂಡಿದೆ. ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಾಕಾಶ ನೀಡುತ್ತ ಬಂದಿರುವ ಧೋನಿ ಇಂದಿಗೂ CSK ತಂಡದ ಪ್ರಮುಖ ಆಟಗಾರ.
ಮಹೇಂದ್ರ ಸಿಂಗ್ ಧೋನಿ, ಭಾರತೀಯ ಕ್ರಿಕೆಟ್‌ಗೆ ಹೊಸ ಚೈತನ್ಯ ನೀಡಿದ ಆಟಗಾರ. 28 ವರ್ಷಗಳ ವಿಶ್ವಕಪ್ ಕನಸನ್ನು ನನಸು ಮಾಡಿದ ನಾಯಕ. ಎಂತಹುದೇ ಸನ್ನಿವೇಶ ಇದ್ದರೂ ಗೆಲುವಿನ ಭರವಸೆ ನೀಡುತ್ತಿದ್ದ ಆಪದ್ಭಾಂದವ, ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುವ ಈ ಅಪ್ಪಟ ಕ್ರಿಕೆಟ್ ಪ್ರೇಮಿ ಮಹೇಂದ್ರಸಿಂಗ್ ದೋನಿ. ODI, T20, ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡ ಚಾಂಪಿಯನ್ ಮಾಡಿದ ಹೆಗ್ಗಳಿಕೆ ಇವರ ನಾಯಕತ್ವದ ಅವಧಿಯಲ್ಲಿ ಕಂಡಿದ್ಧೇವೆ. ಅದರ ಜೊತೆ ಚಾಂಪಿಯನ್ಸ್ ಟ್ರೋಪಿ, ಪ್ರತಿಷ್ಠಿತ ಕಾಮನವೆಲ್ತ್ ಸರಣಿ, ಸೇರಿ ಭಾರತ ಎಲ್ಲ ಸರಣಿಯಲ್ಲೂ ಗೆಲುವಿನ ರುಚಿ ಕಂಡಿದ್ದು ಇವರ ಮುಂದಾಳತ್ವದಲ್ಲಿ, 1983ರ ನಂತರ ಏಕದಿನ ವಿಶ್ವಕಪ್ ಕನಸು ಕಂಡಿದ್ದ ಭಾರತದ 130 ಕೋಟಿ ಜನರ ಆಸೆ ಪೂರೈಸಿದ ಆಟಗಾರ ಧೋನಿ. ತಂಡದ ನಾಯಕನಾಗಿ, ಯುವಕರಿಗೆ ಸ್ಫೂರ್ತಿಯಾಗಿ, ಕ್ರೀಡಾಂಗಣದಲ್ಲಿ ಚಾಣಾಕ್ಯನಾಗಿದ್ದ ಈ ಆಟಗಾರ ಇಂದಿಗೂ ಎಂದೆಂದಿಗೂ ಭಾರತ ಕಂಡ ಶ್ರೇಷ್ಠ ಆಟಗಾರನಾಗಿ ಕಾಣಿಸಿಕೊಳ್ಳುತ್ತಾರೆ.
ಇದನ್ನೂ ಓದಿ: ದೇಶದ ಮೊದಲ ಯೋಗ ಸಾಕ್ಷರತಾ ರಾಜ್ಯವಾಗುವತ್ತ ಕರ್ನಾಟಕದ ಹೆಜ್ಜೆ
ಮಹೇಂದ್ರ ಸಿಂಗ್ ಧೋನಿ, ಎಂಥದ್ದೇ ಒತ್ತಡದ ಪರಿಸ್ಥಿತಿಗಳನ್ನು ಶಾಂತಿಯಿಂದ ನಿಭಾಯಿಸಿ ಸೋಲಬೇಕಿದ್ದ ಅದೆಷ್ಟೋ ಪಂದ್ಯಗಳನ್ನು ಗೆದ್ದುಕೊಟ್ಟು ಸಾರ್ವಕಾಲಿಕ ಶ್ರೇಷ್ಠ ಫಿನಿಷಯರ್. ಅಂದಹಾಗೆ ಧೋನಿ ಸಾಧನೆಯ ಅಂಕಿಅಂಶ ನೋಡುವದಾದ್ರೆ 90 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 4,876 ರನ್ ಗಳಿಸಿದ್ದಾರೆ. 224 ರನ್ ಅವರ ವಯಕ್ತಿಕ ಗರಿಷ್ಠ ಮೊತ್ತವಾಗಿದ್ದು 38.09 ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 59.11 ರ ಸ್ಟ್ರೈಕ್ ರೇಟ್ ಹೊಂದಿರುವ ಧೋನಿ 6 ಶತಕ ಹಾಗೂ 33 ಅರ್ಧಶತಕಗಳನ್ನು ಗಳಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ 256 ಕ್ಯಾಚ್ ಪಡೆದಿರುವ ಕೂಲ್ ಕ್ಯಾಪ್ಟನ್ 38 ಸ್ಟಂಪಿಂಗ್ ಮೂಲಕ ತಂಡಕ್ಕೆ ಆಸರೆಯಾಗಿದ್ರು.
ಇನ್ನೂ ಏಕದಿನ ಪಂದ್ಯಗಳ ಬಗ್ಗೆ ನೋಡುವದಾದ್ರೆ ವಿಶ್ವಕಪ್, ಕಾಮನ್‌ವೆಲ್ತ್ ಸರಣಿ, ಚಾಂಪಿಯನ್ ಟ್ರೋಫಿಯಿಂದ ಕ್ರಿಕೆಟ್‌ನಲ್ಲಿ ಇರುವ ಎಲ್ಲ ಅವಕಾಶಗಳಲ್ಲಿ ಟೀಂ ಇಂಡಿಯಾಗೆ ಗೆಲುವಿನ ಕಿರೀಟ ತೊಡಿಸಿದ್ದು ಮಹೇಂದ್ರಸಿಂಗ್ ಧೋನಿ. ಒಟ್ಟು 350 ಏಕದಿನ ಪಂದ್ಯಗಳನ್ನು ಆಡಿರುವ ಅವರು 10,773 ರನ್ ಗಳಿಸಿದ್ದಾರೆ. 183* ರನ್ ಅವರ ವಯಕ್ತಿಕ ಗರಿಷ್ಠ ಮೊತ್ತವಾಗಿದ್ದು 50.57 ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 87.56 ರ ಸ್ಟ್ರೈಕ್ ರೇಟ್ ಹೊಂದಿರುವ ಧೋನಿ 10 ಶತಕ 73 ಅರ್ಧಶತಕಗಳನ್ನು ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ 321 ಕ್ಯಾಚ್ ಪಡೆದಿರುವ ಕೂಲ್ ಕ್ಯಾಪ್ಟನ್ 123 ಸ್ಟಂಪಿಂಗ್ ಮೂಲಕ ಏಕದಿನ ಪಂದ್ಯಗಳಲ್ಲಿ ಸರ್ವ ಶೇಷ್ಠ ನಾಯಕ ಎಂದು ಕರೆಸಿಕೊಂಡಿದ್ದಾರೆ.
ಇನ್ನೂ ಚುಟುಕು ಕ್ರಿಕಟ್‌ನಲ್ಲಿ ಮೊದಲ ವಿಶ್ವಕಪ್ ಟೀಂ ಇಂಡಿಯಾಗೆ ತಂದುಕೊಟ್ಟ ಧೋನಿ, ಯುವ ಪ್ರತಿಭೆಗಳಿಗೆ ತಂಡದಲ್ಲಿ ಸ್ಥಾನ ಸಿಗುವಂತೆ ಮಾಡಿದ ಆಟಗಾರ. 2007ರಲ್ಲಿ ನಡೆದ ಚುಟುಕು ಮಹಾಸಮರಕ್ಕೆ ಘಟಾನುಗಟಿಗಳಿಗೆ ವಿಶ್ರಾಂತಿ ನೀಡಿ ಮೈದಾನಕ್ಕಿಳಿದ ಧೋನಿ ವಿಶ್ವಕಪ್‌ಗೆ ಮುತ್ತಿಕ್ಕಿದ್ದರು. ಅದರಲ್ಲೂ ವೈರಿ ರಾಷ್ಟ್ರದ ಮೇಲೆ ಫೈನಲ್ ಪಂದ್ಯದಲ್ಲಿ ಅವರು ತೆಗೆದುಕೊಂಡ ನಿರ್ಧಾರ ಇಂದಿಗೂ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚರಿ ಮೂಡಿಸುತ್ತವೆ. ಒಟ್ಟು 98 ಟಿ 20 ಪಂದ್ಯಗಳನ್ನು ಆಡಿರುವ ಅವರು 1,617 ರನ್ ಗಳಿಸಿದ್ದಾರೆ. 56 ರನ್ ಅವರ ವಯಕ್ತಿಕ ಗರಿಷ್ಠ ಮೊತ್ತವಾಗಿದ್ದು 37.60 ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 126.13 ರ ಸ್ಟ್ರೈಕ್ ರೇಟ್ ಹೊಂದಿರುವ ಧೋನಿ 2 ಅರ್ಧಶತಕಗಳನ್ನು ಗಳಿಸಿದ್ದಾರೆ. ಟಿ 20 ಪಂದ್ಯಗಳಲ್ಲಿ 57 ಕ್ಯಾಚ್ ಪಡೆದಿರುವ ಕೂಲ್ ಕ್ಯಾಪ್ಟನ್ 34 ಸ್ಟಂಪಿಂಗ್ ಮೂಲಕ ಟಿ 20 ಪಂದ್ಯಗಳ ಸ್ಪೇಷಲಿಷ್ಟ್ ಆಟಗಾರ ಎಂದು ಕರೆಸಿಕೊಂಡಿದ್ದಾರೆ
ಇದನ್ನೂ ಓದಿ: ನಗ್ನ ವಿಡಿಯೋ ಕಾಲ್ ಬಲೆಗೆ ಬಿದ್ದು 2.69 ಕೋಟಿ ರೂ.ಕಳೆದುಕೊಂಡ ಉದ್ಯಮಿ..!
ಎಮ್. ಎಸ್. ಧೋನಿ, 7 ಜುಲೈ 1981 ರಂದು ಬಿಹಾರದ ರಾಂಚಿಯಲ್ಲಿ ಪಾನ್ ಸಿಂಗ್ ಮತ್ತು ದೇವಕಿ ದೇವಿ ಮಗನಾಗಿ ಜನಿಸಿದರು. ಸಹೋದರಿ ಜಯಂತಿ ಮತ್ತು ಸಹೋದರ ನರೇಂದ್ರ ಜೊತೆಗಿನ ಸುದಂರ ಮಧ್ಯಮವರ್ಗದ ಕುಟುಂಬ ಧೋನಿ ಅವರದಾಗಿತ್ತು. ಜಾರ್ಖಂಡನ ರಾಂಚಿಯ ಶ್ಯಾಮ್ಲಿಯಲ್ಲಿರುವ DAV ಜವಾಹರ ವಿದ್ಯಾಮಂದಿರದಲ್ಲಿ ಧೋನಿ ಆರಂಭಿಕ ಅಂದ್ರೆ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ಆರಂಭದಲ್ಲಿ ಧೋನಿ ಬ್ಯಾಡ್ಮಿಂಟನ್ ಮತ್ತು ಫುಟ್‌ಬಾಲ್‌ನ್ನು ಉತ್ತಮವಾಗಿ ಆಡಿ, ಜಿಲ್ಲಾ ಮತ್ತು ಕ್ಲಬ್ ಮಟ್ಟದಲ್ಲಿ ಉತ್ತಮ ಆಟಗಾರ ಎಂಬ ಹೆಸರು ಮಾಡಿದ್ದರು. ಫುಟ್‌ಬಾಲ್ ಆಟದಲ್ಲಿ ತಂಡಕ್ಕೆ ಉತ್ತಮ ಗೋಲ್‌ಕೀಪರ್ ಆಗಿದ್ದರು. ಆದರೆ ಫುಟ್‌ಬಾಲ್ ತಂಡದ ತರಬೇತುದಾರರು ಧೋನಿ ಸಾಮರ್ಥ್ಯ ಅರಿತು ಸ್ಥಳೀಯ ಕ್ರಿಕೆಟ್ ಕ್ಲಬ್ ಪರ ಕ್ರಿಕೆಟ್ ಆಡುವುದಕ್ಕಾಗಿ ಕಳುಹಿಸಿದರು. ಧೋನಿ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಮಾಡದಿದ್ರೂ, ಉತ್ತಮವಾದ ವಿಕೆಟ್-ಕೀಪಿಂಗ್ ಕೌಶಲ್ಯದೊಂದಿಗೆ ಭರವಸೆ ಮೂಡಿಸಿದ್ದರು. ನಂತರ ಕಮಾಂಡೊ ಕ್ರಿಕೆಟ್ ಕ್ಲಬ್‌ನ ( 1995 - 1998) ಪೂರ್ಣಾವಧಿಯ ವಿಕೆಟ್ ಕೀಪರ್ ಜವಾಬ್ದಾರಿ ಧೋನಿ ಹೆಗಲಿಗೆ ಬಂತು. ಕ್ಲಬ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನದ ಆಧಾರದ ಮೇಲೆ 16 ವರ್ಷದೊಳಗಿನವರ ಚ್ಯಾಂಪಿಯನ್‌ಷಿಪ್ 1997/98ರ ವಿನೂ ಮಂಕಡ್ ಟ್ರೋಫಿಗೆ ಧೋನಿ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದರು. ಧೋನಿ ತನ್ನ 10ನೇ ತರಗತಿಯ ನಂತರ ಕ್ರಿಕೆಟ್‌ಗೆ ಹೆಚ್ಚು ಗಮನ ನೀಡಿದನು.
ಧೋನಿ 1998 - 99 ಬಿಹಾರ ಕ್ರಿಕೆಟ್ ಅಂಡರ್19 ತಂಡಕ್ಕೆ ಆಯ್ಕೆಯಾಗಿದ್ದರು. 5 ಪಂದ್ಯಗಳ ಫೈಕಿ 7 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿದ್ದ ಅವರು 176 ರನ್ ಗಳಿಸಿ ಉತ್ತಮ ಆಟ ಪ್ರದರ್ಶನ ನೀಡಿದ್ರು. ಆದ್ರೂ ಆರು ತಂಡಗಳು ಭಾಗವಹಿಸಿದ ಈ ಸರಣಿಯಲ್ಲಿ ಧೋನಿಯ ಬಿಹಾರ ತಂಡವು ನಾಲ್ಕನೇ ಸ್ಥಾನವನ್ನು ಗಳಿಸಲಷ್ಟೆ ಸಫಲವಾಯಿತು. ಇದರಿಂದಾಗಿ ತಂಡವು ಕ್ವಾಟರ್ ಫೈನಲ್ ಸುತ್ತನ್ನು ತಲುಪಲು ಸಾಧ್ಯವಾಗಲಿಲ್ಲ. ಬಿಹಾರ ಅಂಡರ್19 ಕ್ರಿಕೆಟ್ ತಂಡವು 1999-2000 ಕೂಚ್ ಬೆಹಾರ್ ಟ್ರೋಫಿಯಲ್ಲಿ ಧೋನಿ ಗಳಿಸಿದ 84 ರನ್‌ಗಳ ನೆರವಿನಿಂದ, ಬಿಹಾರ ತಂಡ 357 ರನ್‌ಗಳೊಂದಿಗೆ ಮುನ್ನಡೆ ಸಾಧಿಸಲು ಸಹಾಯವಾಯಿತು. ಭವಿಷ್ಯದ ರಾಷ್ಟ್ರೀಯ ತಂಡದ ಸಹ ಆಟಗಾರ ಯುವರಾಜ್ ಸಿಂಗ್‌ನ 358 ರನ್‌ಗಳ ಸಹಾಯದಿಂದ ಪಂಜಾಬ್ ಅಂಡರ್19 ತಂಡವು 839 ರನ್ ಗಳಿಸಿತು. ಇದರಿಂದಾಗಿ ಬಿಹಾರ ತಂಡದ ಪರಿಶ್ರಮ ಕಳೆಗುಂದಿತು. ಈ ಪಂದ್ಯದಲ್ಲಿ ಧೋನಿಯು 488 ರನ್‌ಗಳು (9 ಪಂದ್ಯಗಳು, 12 ಇನ್ನಿಂಗ್ಸ್), 5 ಅರ್ಧ ಶತಕಗಳು, 17 ಕ್ಯಾಚ್‌ಗಳು ಮತ್ತು 7 ಸ್ಟಂಪಿಂಗ್‌ಗಳ ದಾಖಲೆ ಮಾಡಿದ್ದರು. MS ಧೋನಿಯು CK ನಾಯುಡು ಟ್ರೋಫಿಗೆ ಪೂರ್ವ ವಲಯದ ಅಂಡರ್19 ತಂಡದಲ್ಲಿ ಸ್ಥಾನ ಪಡೆದು, ನಾಲ್ಕು ಪಂದ್ಯಗಳಲ್ಲಿ ಕೇವಲ 97 ರನ್ ಮಾಡಿದ್ದರು. ಇದರಿಂದಾಗಿ ಪೂರ್ವ ವಲಯವು ಎಲ್ಲಾ ನಾಲ್ಕು ಪಂದ್ಯಗಳನ್ನು ಸೋತು, ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.
2003/04 ರಲ್ಲಿ ಏಕದಿನಗಳ ಪ್ರದರ್ಶನವನ್ನು ಪರಿಗಣಿಸಿ, ಜಿಂಬಾಬ್ವೆ ಮತ್ತು ಕಿನ್ಯಾದೇಶಗಳ ಪ್ರವಾಸಕ್ಕಾಗಿ ಭಾರತ ಎ ತಂಡಕ್ಕಾಗಿ ಆಯ್ಕೆಮಾಡಲಾಯಿತು. ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಜಿಂಬಾಬ್ವೆ XI ವಿರುದ್ಧದ ಪಂದ್ಯದಲ್ಲಿ ಧೋನಿ 7 ಕ್ಯಾಚ್‌ಗಳು ಮತ್ತು 4 ಸ್ಟಂಪಿಂಗ್‌ಗಳನ್ನು ಮಾಡುವುದರೊಂದಿಗೆ ತನ್ನ ಅತ್ಯತ್ತಮವಾದ ವಿಕೆಟ್-ಕೀಪಿಂಗ್‌ನ್ನು ಪ್ರದರ್ಶಿಸಿದರು. ಕಿನ್ಯಾ, ಭಾರತ 'ಎ' ಮತ್ತು ಪಾಕಿಸ್ತಾನ 'ಎ' ತಂಡಗಳು ಒಳಗೊಂಡಿರುವ ತ್ರಿಕೋನ ಸರಣಿಯಲ್ಲಿ ಧೋನಿ ತನ್ನ ಅರ್ಧ-ಶತಕದೊಂದಿಗೆ ಭಾರತ 'ಎ'ಕ್ಕೆ ಪಾಕಿಸ್ತಾನ 'ಎ' ವಿರುದ್ಧ 223 ರನ್‌ಗಳ ಗುರಿ ತಲುಪಲು ನೆರವಾದರು. ಪಾಕಿಸ್ತಾನ 'ಎ' ಎದುರು 120 ಮತ್ತು 119* ರನ್‌ಗಳನ್ನು ಬಾರಿಸುವುದರೊಂದಿಗೆ ಎರಡು ಶತಕಗಳನ್ನು ದಾಖಲಿಸಿದರು. ಧೋನಿ 7 ಪಂದ್ಯಗಳಲ್ಲಿ 362 ರನ್‌ಗಳನ್ನು (6 ಇನ್ನಿಂಗ್ಸ್, ಸರಾಸರಿ:72.40) ದಾಖಲಿಸಿ, ಉತ್ತಮ ಪ್ರದರ್ಶನದ ಮೂಲಕ ಆಗಿನ ನಾಯಕ - ಸೌರವ ಗಂಗೂಲಿ ಗಮನ ಸೆಳೆಯಲು ಯಶಸ್ವಿಯಾಗಿದ್ದರು. ಆದರೆ ಭಾರತ 'ಎ' ತಂಡ ತರಬೇತುದಾರ ಸಂದೀಪ್ ಪಾಟೀಲ್ ಭಾರತ ತಂಡಕ್ಕೆ ವಿಕೆಟ್-ಕೀಪರ್/ಬ್ಯಾಟ್ಸ್‌ಮನ್ ಆಗಿ ಕಾರ್ತಿಕ್‌ನನ್ನು ಶಿಫಾರಸು ಮಾಡಿದರು. ಉತ್ತಮ ಪ್ರದರ್ಶನದ ಹೊರತಾಗಿಯೂ ಭಾರತ ತಂಡಕ್ಕೆ ಧೋನಿ ಅಂದು ಆಯ್ಕೆ ಆಗಿರಲಿಲ್ಲ.
ದೇಶಿ ಕ್ರಿಕೆಟ್‌ನಲ್ಲಿ ಹೊಡಿ ಬಡಿ ಆಟದ ಮುಖಾಂತರ ಟೀಂ ಇಂಡಿಯಾ ಆಯ್ಕೆಗಾರರ ಗಮನ ಸೆಳೆದಿದ್ದ ದೋನಿ ಮುಂದೆ ಅಂತರಾಷ್ಟ್ರೀಯ ಕ್ರಿಕಟ್‌ಗೆ ಆಯ್ಕೆಯಾಗಿದ್ರು. 2004ರ ಬಾಂಗ್ಲಾದೇಶದ ಮೊದಲ ಪಂದ್ಯದ ಮೊದಲ ಎಸೆತದಲ್ಲೇ ರನ್ ಔಟ್ ಆದ ಧೋನಿ, ವೃತ್ತಿಜೀವನಕ್ಕೆ ಉತ್ತಮ ಆರಂಭವನ್ನು ನೀಡಲಿಲ್ಲ. ಅದೇ ಸರಣಿಯಲ್ಲಿ ಮತ್ತೆರಡು ಅವಕಾಶಗಳು ದೊರೆತರೂ ಕೂಡ ಬಿಗ್‌ಸ್ಕೋರ್ ಗಳಿಸುವದರಲ್ಲಿ MSD ವಿಫಲರಾಗಿದ್ರು. ಪಾರ್ತೀವ್ ಪಾಟೀಲ್, ದಿನೇಶ್ ಕಾರ್ತಿಕ್, ರಾಹುಲ್ ದ್ರಾವಿಡ್‌ರಂತರ ವಿಕೆಟ್ ಕೀಪರ್‌ಗಳ ನಡುವೆಯೇ ಮೂರು ಪಂದ್ಯಗಳ ವೈಪಲ್ಯ ಧೋನಿಯ ಕ್ರಿಕಟ್ ಜೀವನವೇ ಅಂತ್ಯವಾಯ್ತು ಅನ್ನೋ ಹಾಗೆ ಮಾಡಿತ್ತು. ಆದ್ರೆ ಬಾಂಗ್ಲಾದೇಶದ ಸರಣಿ ಮುಕ್ತಾಯದ ನಂತರ ಮತ್ತೆ ಪಾಕಿಸ್ತಾನ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ರು ಧೋನಿ. ವಿಶಾಖಪಟ್ಟಣಂದಲ್ಲಿ ನಡೆದ ಪಾಕಿಸ್ತಾನದ ಜೊತೆಗಿನ ಎರಡನೇ ಏಕದಿನ ಪಂದದಲ್ಲಿ ಕೇವಲ 123 ಎಸೆತಗಳಿಗೆ 148 ರನ್ ಬಾರಿಸಿದ ಧೋನಿ ಟೀಂ ಇಂಡಿಯಾ ಗೆಲುವಿಗೆ ಭದ್ರಬುನಾದಿ ಹಾಕಿದ್ರು. ಈ ಹಿಂದೆ ಏಕದಿನ ಪಂದ್ಯಗಳಲ್ಲಿ ವಿಕೇಟ್ ಕೀಪರ್ ಮಾಡದ ಸಾಧನೆಯನ್ನು ಮಾಡಿದ್ರು. ಆ ಪಂದ್ಯ ಧೋನಿಯ ಜೋವನವನ್ನೇ ಬದಲಾಯಿತು. ಪಾಕ್ ಬೌಲರ್‌ಗಳನ್ನು ಮನಬಂದಂತೆ ಥಳಿಸಿದ್ದ ಧೋನಿ ಅಂದೇ ಭಾರತೀಯ ಕ್ರಿಕೆಟ್ ಲೋಕಕ್ಕೆ ಹೊಸ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡರು.
ಇನ್ನೂ ಅಕ್ಟೋಬರ್ 2005 ಶ್ರೀಲಂಕಾ ವಿರುದ್ಧದ ODI ಸರಣಿಯಲ್ಲಿ ಮೊದಲ ಎರಡು ಪಂದ್ಯದಲ್ಲಿ ಧೋನಿಗೆ ಕೆಲವು ಬ್ಯಾಟಿಂಗ್ ಅವಕಾಶಗಳನ್ನು ನೀಡಲಾಯಿತು. ಸಾವೈ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ (ಜೈಪುರ) ನಡೆದ ಮೂರನೇ ODI ಪಂದ್ಯದಲ್ಲಿ 3ನೇ ಕ್ರಮಾಂಕಕ್ಕೆ ಬಡ್ತಿ ನೀಡಲಾಯಿತು. ಶ್ರೀಲಂಕಾದ ಕುಮಾರ ಸಂಗಾಕ್ಕಾರ ಶತಕದೊಂದಿಗೆ ಭಾರತಕ್ಕೆ 299 ರನ್‌ಗಳ ಗುರಿಯನ್ನು ನಿಗದಿಪಡಿಸಿತು. ಆರಂಭದಲ್ಲಿಯೇ ಭಾರತ ತಂಡವು ತೆಂಡುಲ್ಕರ್ ವಿಕೆಟ್ ಕಳೆದುಕೊಂಡಿತು. ಈ ವೇಳೆ ಕಣಕ್ಕಿಳಿದ MSD 145 ಎಸೆತಗಳಲ್ಲಿ 183 ರನ್ ಗಳಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಇದು ದೋನಿ ವಯಕ್ತಿಕ ಅತಿ ಹೆಚ್ಚು ರನ್ ಕೂಡ ಹೌದು. ಈ ಸರಣಿಯಲ್ಲಿ 346 ರನ್ ಗಳಿಸಿದ್ದ ಧೋನಿ ಸರಣಿ ಶೇಷ್ಠ ಪ್ರಶಸ್ತಿ ಕೂಡ ಪಡೆಸುಕೊಂಡಿದ್ರು. ಇಲ್ಲಿಂದ ಕ್ರಿಕಟ್ ಅಂಗಳದಲ್ಲಿ ಧೋನಿ ಬ್ಯಾಟಿಂಗ್ ಅಬ್ಬರ ಜೋರಾಗಿತ್ತು. ಸರಣಿಯಿಂದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ರು
2007 ರ ಚುಟುಕು ಕ್ರಿಕೆಟ್‌ಗೆ ನಾಯಕರಾದ ಧೋನಿ ಯುವ ಪಡೆಯನ್ನು ಸರಣಿಗೆ ಸಿದ್ದ ಮಾಡಿದ್ರು. ಅನೇಕರು ಧೋನಿ ನಿರ್ಧಾರದ ವಿರುದ್ಧ ಗುಟುರು ಹಾಕಿದ್ದು ಉಂಟು. ಆದ್ರೆ ಸವಾಲುಗಳನ್ನು ಮೆಟ್ಟಿ ಯುವ ಪಡೆ ಜೊತೆಗೆ ಮೊದಲ ವಿಶ್ವಕಪ್ ಟೂರ್ನಿಯಲ್ಲಿ ಭಾಗಿಯಾದ ಧೋನಿ ಬಳಗ ವಿಶ್ವಕಪ್ ಗೆದ್ದು ಹೊಸ ಇತಿಹಾಸ ಸೃಷ್ಟಿ ಮಾಡಿತ್ತು. ದಕ್ಷೀಣ ಆಫ್ರಿಕಾದಲ್ಲಿ ನಡೆದ ಈ ವಿಶ್ವಕಪ್‌ನಲ್ಲಿ ಲೀಗ್ ಹಾಗೂ ಸಮೀಸ್‌ನಲ್ಲಿ ಅಮೋಘ ಆಟ ಪ್ರದರ್ಶಿಸಿದ್ದ ಟೀಂ ಇಂಡಿಯಾ ಪೈನಲ್‌ಗೆ ಎಂಟ್ರಿ ಕೊಟ್ಟಿತ್ತು. ಇನ್ನೂ ಲೀಗ್ ಹಂತದಲ್ಲಿ ಸೂಪರ್ ಓವರ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಸೋತು ನಂತರ ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಪಾಕಿಸ್ತಾನ ತಂಡ ಕೂಡ ಯುವ ಪ್ರತಿಭೆಗಳ ಜೊತೆ ಪೈನಲ್ ಪ್ರವೇಶ ಮಾಡಿತ್ತು. ಈ ಪಂದ್ಯದಲ್ಲಿ ಗೌತಮ್ ಗಂಭೀರ ಹಾಗೂ ರೊಹಿತ್ ಶರ್ಮಾ ಆಟದ ನೆರವಿನಿಂದ ಭಾರತ 20 ಓವರ್ ಗಳಲ್ಲಿ 157 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಬೇಗಬೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮಿಸ್ಬಾ ಉಲ್ ಹಕ್ ಅವರ ಅದ್ಭುತ ಬ್ಯಾಟಿಂಗ್ ಪಾಕ್ ಕ್ರಿಕೆಟ್ ಅಭಿಮಾನಿಗಳಲ್ಲಿ ವಿಶ್ವಕಪ್ ಕನಸು ಕಾಣುವಂತೆ ಮಾಡಿತ್ತು. ಆದ್ರೆ ಕೊನೆಯ ಓವರ್‌ನಲ್ಲಿ 13ರನ್ ಬೇಕಿದ್ದಾಗ ಧೋನಿ ಮಾಡಿದ ಆ ಪ್ಲಾನ್ ವರ್ಕೌಟ್ ಆಗಿತ್ತು. ಜೋಗಿಂದರ್ ಶರ್ಮಾ ಎಸೆದ ಚಂಡು ಶ್ರೀಶಾಂತ್ ಕೈ ಸೇರಿದ್ದು ಈಗಲೂ ಎಲ್ಲರ ಕಣ್ಮುಂದೆ ಇದೆ. ಇದು ನಾಯಕನಾಗಿ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದ ಧೋನಿಯ ದೊಡ್ಡ ಸಾಧನೆಯಾಗಿತ್ತು.
ನಂತರ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಿಗೂ ನಾಯಕನಾಗಿ ಟೀಂ ಇಂಡಿಯಾ ತಂಡವನ್ನು ಮುನ್ನಡೆಸಿದ ಮಹೇಂದ್ರ ಸಿಂಗ್ ಧೋನಿ, ಭಾರತ ತಂಡ ಕಂಡ ಅತ್ತ್ಯೂತ್ತಮ ನಾಯಕ ಅಂದ್ರೆ ತಪ್ಪಗಲಾರದು... ಕಪೀಲ್ ದೇವ... ಸೌರವ್ ಗಂಗೂಲಿ... ನಂತರ ಭಾರತ ತಂಡ ಧೋನಿ ನಾಯಕತ್ವದಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದೆ. ಇನ್ನೂ ಸ್ವದೇಶದಲ್ಲಿ ಹುಲಿ... ವಿದೇಶದಲ್ಲಿ ಇಲಿ ಎನ್ನುತ್ತಿದ್ದ ಬಾಯಿ ಬಡುಕರಿಗೆ ಮುಟ್ಟಿ ನೋಡಿಕೊಳ್ಳುವಂತೆ ಕೊಟ್ಟ ಧೋನಿ, ವಿದೇಶಗಳಲ್ಲೂ ಟೀಂ ಇಂಡಿಯಾ ಸರಣಿ ಗೆದ್ದು ನಂಬರ್ ಒನ್ ತಂಡವನ್ನಾಗಿ ಮಾಡಿದ್ದಾರೆ ಅದರಲ್ಲೂ ಅಸ್ಟ್ರೇಲಿಯಾ ವಿರುದ್ಧದ 2008ರ ಸಿಬಿ ಸರಣಿಯಲ್ಲಿ ಭಾರತ ಅಭೂತಪೂರ್ವ ಗೆಲವು ಸಾಧಿಸಿ ಟೀಂ ಇಂಡಿಯಾ ಅಭಿಮಾನಿಗಳು ಗರ್ವ ಪಡುವಂತೆ ಮಾಡಿದ್ರು. ಈ ಸರಣಿಯಲ್ಲಿ ಸಚಿನ್ ಉತ್ತಮ ಆಟ ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಇನ್ನೂ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಬಾಂಗ್ಲಾದೇಶ, ಪಾಕಿಸ್ತಾನ, ಇಂಗ್ಲೆಂಡ್‌ನಂತಹ ನೆಲದಲ್ಲೂ ಕೂಡ ಸರಣಿ ಗೆದ್ದು ಭಾರತ ICC ರ್ಯಾಂಕಿಂಗ್‌ನಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದು ಧೋನಿ . 2009ರ ಕಾಂಪ್ಯಾಕ್ ಕಪ್,2-10ರ ಏಷ್ಯಾ ಕಪ್, 2011ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್, 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2013ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ತ್ರಿಕೋನ ಸರಣಿ, 2016ರ ಏಷ್ಯಾಕಪ್ ಟೂರ್ನಿ ಹೀಗೆ ಅನೇಕ ಟೂರ್ನಿಗಳನ್ನು ಗೆಲ್ಲಿಸಿಕೊಟ್ಟ ಕೀರ್ತಿ ಧೋನಿ ನಾಯಕತ್ವಕ್ಕೆ ಸಲ್ಲುತ್ತದೆ
2011 ರ ವರ್ಲ್‌ಕಪ್ ಯಾರಿಂದ ಮರೆಯೋಕೆ ಸಾಧ್ಯ ಹೇಳಿ...
1983 ರ ನಂತರ 28 ವರ್ಷಗಳ ವಿಶ್ವಕಪ್ ವನವಾಸ 2011ರಲ್ಲಿ ಕೊನೆಗೊಂಡಿತ್ತು. ವಿಶ್ವಕಪ್ ಸಾರಥ್ಯ ವಹಿಸಿಕೊಂಡ ಟೀಂ ಇಂಡಿಯಾ ಕಪ್ ಗೆಲ್ಲುವ ಪೇವರೆಟ್ ತಂಡ ಎನಿಸಿಕೊಂಡಿತ್ತು. ದಕ್ಷಿಣ ಆಫ್ರಿಕಾ ಜೊತೆಗಿನ ಸೋಲು ಬಿಟ್ರೆ ಈ ಟೂರ್ನಿಯಲ್ಲಿ ಟೀ ಇಂಡಿಯಾ ಪ್ರದರ್ಶನ ಉನ್ನತ ಮಟ್ಟದಲ್ಲಿತ್ತು. ಯುವರಾಜ್ ಅಬ್ಬರ, ಸಚಿನ್ ಅನುಭವ, ಗಂಭೀರ ಆರ್ಭಟ, ಜಹೀರ್, ಮುನಾಫ್ ಪಟೇಲ್ ಬೌಲಿಂಗ್, ಹರಭಜನ್ ದೂಸ್ರಾ ಎಲ್ಲದರ ಜೊತೆಗೆ ದೋನಿ ಪ್ಲಾನ್ ವರ್ಕೌಟ್ ಆಗಿತ್ತು. ಅದರಲ್ಲೂ ಕೊನೆಯ ಅಂದ್ರೆ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ಟಾಸ್ ಗೆದ್ದ ಭಾರತ ಮೊದಲು ಪೀಲ್ಡಿಂಗ್ ಆಯ್ದುಕೊಂಡಿತ್ತು. ಸಿಂಹಳೀಯರ ಆರ್ಭಟ ಈ ಪಂದ್ಯದಲ್ಲೂ ಜೋರಾಗಿತ್ತು. 50 ಓವರ್‌ಗಳಲ್ಲಿ 274 ರನ್ ಕಲೆ ಹಾಕಿದ್ದ ಶ್ರೀಲಂಕಾ ಟೀಂ ಇಂಡಿಯಾಗೆ ಸವಾಲಿನ ಮೊತ್ತ ಚೇಸಿಂಗ್‌ಗಾಗಿ ನೀಡಿತ್ತು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಟೀ ಇಂಡಿಯಾಗೆ ಸೆಹವಾಗ್, ಸಚಿನ್ ವಿಕೆಟ್ ಆರಂಭಿಕ ಆಘಾತ ನೀಡಿತ್ತು. ಈ ವೇಳೆ ಗಂಭೀರ ಹಾಗೂ ಕೊಹ್ಲಿ ಇನಿಂಗ್ಸ್‌ಕಟ್ಟಲು ಸಹಕಾರಿಯಾದ್ರು. ಈ ವೇಳೆ ಕೊಹ್ಲಿ ವಿಕೆಟ್ ಟೀ ಇಂಡಿಯಾ ಪಾಳಯದಲ್ಲಿ ಆತಂಕ ಮೂಡುವಂತೆ ಮಾಡಿತ್ತು. ಈ ವೇಳೆ ಬಡ್ತಿ ಪಡೆದು ಬಂದ ನಾಯಕ ಧೋನಿ ಕೇವಲ 79 ಎಸೆತಗಲಲ್ಲಿ 91 ರನ್ ಗಳಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಈ ಪಂದ್ಯದಲ್ಲಿ ಗಂಭೀರ ಹಾಗೂ ಧೋನಿ ಗೆಲುವಿನ ರೂವಾರಿಗಳಾಗಿದ್ರು. ಸರಣಿಯೂದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಯುವರಾಜ್‌ಸಿಂಗ್ ಸರಣಿ ಶೇಷ್ಠ ಆಟಗಾರ ಎನಿಸಿದ್ರು. ಇದೆಲ್ಲದಕ್ಕಿಂತ ಹೆಚ್ಚಾಗಿ ಈ ವಿಶ್ವಕಪ್‌ನ್ನೂ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್‌ಗೆ ಅರ್ಪಿಸಲಾಗಿತ್ತು. ವಿಶ್ವಕಪ್ ಗೆದ್ದು ಮೇಲೆ ಟೀಂ ಇಂಡಿಯಾ ಆಟಗಾರರು ಸಚಿನ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ತೀರುಗಿದ್ದು ನೆರದ ಅಭಿಮಾನಿಗಳಲ್ಲಿ ಹರ್ಷ ಮೂಡಿಸುವಂತೆ ಮಾಡಿತ್ತು
IPL ನಲ್ಲೂ ಕೂಡ CSK ತಂಡದ ನಾಯಕನ ಜವಾಬ್ಧಾರಿ ಹೊತ್ತಿರುವ ಧೋನಿ, ತಂಡಕ್ಕೆ 5 ಬಾರಿ ಚಾಂಪಿಯನ್ ಪಟ್ಟ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2010,2011,2018,2021 ರಲ್ಲಿ CSK ಚಾಂಪಿಯನ್ ತಂಡವಾಗಿ ಕಾಣಿಸಿಕೊಂಡಿದೆ. ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಾಕಾಶ ನೀಡುತ್ತ ಬಂದಿರುವ ಧೋನಿ ಇಂದಿಗೂ CSK ತಂಡದ ಪ್ರಮುಖ ಆಟಗಾರ... 2021ರ ಸೀಜನ್‌ಗೆ ನಾಯಕತ್ವಕ್ಕೆ ಗುಡ್‌ಬೈ ಹೇಳಿದ್ದ ಧೋನಿ ತಂಡದ ಕಳಪೆ ಪ್ರದರ್ಶನದಿಂದ ಬೇಸತ್ತು ಮತ್ತೆ ನಾಯಕನ ಜವಾಬ್ಧಾರಿ ತೆಗೆದುಕೊಂಡರು ಆದ್ರೆ 2021ರ ಸೀಜನ್‌ನಲ್ಲಿ CSK ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು.
ಧೋನಿ ನಾಯಕತ್ವ ಭಾರತ ತಂಡ ಹೊಸ ಆಯಾಮ ನೀಡಿರೋದ್ರಲ್ಲಿ ಅನುಮಾನವಿಲ್ಲ. ಅವರ ಕ್ರಿಕೆಟ್ ಜೀವನ ಗುರುತಿಸಿ ನೂರಾರು ಪ್ರಶಸ್ತಿಗಳು ಅವರಿಗೆ ಒಲಿದಿವೆ. ಅದರಲ್ಲಿ ಪ್ರಮುಖವೆನ್ನುವಂತೆ ನಾವು ನೋಡುವದಾದ್ರೆ, 2007 ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, 2008 ಮತ್ತು 2009 ರಲ್ಲಿ ICC ಏಕದಿನ ಪಂದ್ಯಗಳ ಪೈಕಿ ವರ್ಷದ ಆಟಗಾರ ಪ್ರಶಸ್ತಿ, 2009 ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ, 2018 ರಲ್ಲಿ ಪದ್ಮಭೂಷನ್ ಪ್ರಶಸ್ತಿ ಮುಡಿಗೇಡಿಸಿಕೊಂಡಿದ್ದಾರೆ. ಇದರ ಜೊತೆಗೆ ಭಾರತೀಯ ಸೇನೆಯಲ್ಲಿ ಲೆಪ್ಟಿನೆಂಟ್ ಕರ್ನಲ್ ಆಗಿಯೂ ಧೋನಿ ನೇಮಕ ಮಾಡಲಾಗಿತ್ತು, ಕಫೀಲ್ ಧೇವ ನಂತರ ಭಾರತೀಯ ಸೈನ್ಯದಲ್ಲಿ ಈ ಹುದ್ದೆ ಅಲಂಕರಿಸಿಕೊಂಡ ಟೀಂ ಇಂಡಿಯಾ ಆಟಗಾರ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ..
2010 ರಲ್ಲಿ ಧೋನಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸಾಕ್ಷಿ-ಧೋನಿ ಪ್ರೀತಿಯ ಸಾಕ್ಷಿಯಾಗಿ ಮುದ್ದಾದ ಮಗಳು ಝಿವಾ ಇದ್ದಾಳೆ. ಸಾಕ್ಷಿ, ಧೋನಿ ಜೀವನದಲ್ಲಿ ಪತ್ನಿಯಾಗಿ ಪ್ರವೇಶಿಸಿದಾಗಿನಿಂದ ಅವರ ವೃತ್ತಿಜೀವನ ಉತ್ತುಂಗಕ್ಕೇರಿತು. ಮದುವೆಯಾದ ಮುಂದಿನ ವರ್ಷವೇ ಅಂದರೆ 2011ರಲ್ಲಿ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆದ್ದು ಸಂಭ್ರಮಿಸಿತು. ಇಂದಿಗೂ ಕೂಡ ಇವರಿಬ್ಬರ ಜೋಡಿ ಯುವ ಪ್ರೇಮಿಗಳಿಗೆ ಮಾಧರಿಯಾಗಿದೆ. ಕೋಟಿ ಕನಸುಗಳಿಗೆ ಧೋನಿ ಇಂದಿಗೂ ದಾರಿದೀಪ... ವಯಕ್ತಿಕ ಜೀವನದ ಜೊತೆಗೆ ಕ್ರೀಡಾ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಿರುವ ಈ ಆಟಗಾರ ಇಂದಿಗೂ ಎಂದೆಂದಿಗೂ ಯುವ ಪೀಳಿಗೆಗೆ ಆದರ್ಶ ವ್ಯಕ್ತಿ ಅನ್ನೋದರಲ್ಲಿ ತಪ್ಪಿಲ್ಲ.... https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.