ಬೆಂಗಳೂರು: ಹುಬ್ಬಳ್ಳಿ ಧಾರವಾಡದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ (ಎನ್‌ಎಫ್‌ಎಸ್‌ಯು) ಸ್ಥಾಪನೆಗೆ ಭಾರತ ಸರ್ಕಾರದ ಗೃಹ ಸಚಿವಾಲಯವು ತಾತ್ವಿಕ ಅನುಮೋದನೆಯನ್ನು ನೀಡಿದೆ.
ಟ್ವಿಟರ್‌ನಲ್ಲಿ ಸುದ್ದಿ ಹಂಚಿಕೊಂಡಿರುವ ಕೇಂದ್ರ ಸಚಿವ ಮತ್ತು ಧಾರವಾಡ ಸಂಸದ ಪ್ರಲ್ಹಾದ ಜೋಶಿ, ಅವಳಿ ನಗರಗಳಿಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಮತ್ತೊಂದು ಸಂಸ್ಥೆಯನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಹೇಳಿದ್ದಾರೆ.ಎನ್‌ಎಫ್‌ಎಸ್‌ಯು ಅಪರಾಧ ತನಿಖಾ ಕ್ಷೇತ್ರದಲ್ಲಿ ನುರಿತ ಮಾನವಶಕ್ತಿಯನ್ನು ಸೃಷ್ಟಿಸುತ್ತದೆ ಮತ್ತು ತನಿಖೆ, ತಡೆಗಟ್ಟುವಿಕೆ ಮತ್ತು ಅಪರಾಧಗಳ ಪತ್ತೆಗೆ ಸಂಬಂಧಿಸಿದ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸಲು ನವೀನ ಪ್ರಯೋಗಗಳನ್ನು ನಡೆಸುತ್ತದೆ.
ಇದನ್ನೂ ಓದಿ: ದೇಶದ ಮೊದಲ ಯೋಗ ಸಾಕ್ಷರತಾ ರಾಜ್ಯವಾಗುವತ್ತ ಕರ್ನಾಟಕದ ಹೆಜ್ಜೆ
One more Good news to Hubballi-Dharwad, The National Forensic Sciences University (NFSU) will have its off campus in our city. The central govt has issued letter to govt of karnataka in setting up of off-campus in Hubballi. The work will start once the state govt submits DPR. pic.twitter.com/rJBokXzwla
— Pralhad Joshi (@JoshiPralhad) January 13, 2023
ಈಗ ಹುಬ್ಬಳ್ಳಿ ಧಾರವಾಡಕ್ಕೆ ಎನ್‌ಎಫ್‌ಎಸ್‌ಯು ಮಂಜೂರಾಗಿರುವುದರಿಂದ ಕರ್ನಾಟಕ ಸರ್ಕಾರ ವು ಒಟ್ಟು ಭೂಮಿ ಅಗತ್ಯವನ್ನು ಅಂತಿಮಗೊಳಿಸಲು ಮತ್ತು ಭೂಮಿ ವರ್ಗಾವಣೆ ಪ್ರೋಟೋಕಾಲ್ ಅನ್ನು ಶೀಘ್ರವಾಗಿ ಪ್ರಾರಂಭಿಸಲು ಆಹ್ವಾನಿಸಬೇಕಾಗಿದೆ.ರಾಷ್ಟ್ರೀಯ ನ್ಯಾಯ ವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಅಗತ್ಯವಿರುವ ಭೂಮಿಯನ್ನು ಅಂತಿಮಗೊಳಿಸಿದ ನಂತರ ಅದರ ವಿವರವಾದ ಯೋಜನಾ ವರದಿಯನ್ನು (DPR) ಸಿದ್ಧಪಡಿಸಿ ಅದನ್ನು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸುತ್ತದೆ.
ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯವು ಹುಬ್ಬಳ್ಳಿಯಲ್ಲಿ ಕ್ಯಾಂಪಸ್ ಅನ್ನು ಹೊಂದಿರುತ್ತದೆ. ಸದ್ಯಕ್ಕೆ, ಭಾರತದಾದ್ಯಂತ ಎನ್‌ಎಫ್‌ಎಸ್‌ಯು ನ 8 ಆಫ್-ಕ್ಯಾಂಪಸ್‌ಗಳಿವೆ.ಅವುಗಳಲ್ಲಿ ಗುಜರಾತ್, ದೆಹಲಿ, ಗೋವಾ, ತ್ರಿಪುರಾ, ಭೋಪಾಲ್, ಪುಣೆ, ಗುವಾಹಟಿ, ಮತ್ತು ಮಣಿಪುರನಲ್ಲಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.