ಪೊಲೀಸ್ ಅಧಿಕಾರಿಯಾದ MS Dhoni: ಸಮವಸ್ತ್ರದ ಫೋಟೋ ಕಂಡು ಫ್ಯಾನ್ಸ್ ಶಾಕ್!
MS Dhoni As A Police Officer: ಎಂಎಸ್ ಧೋನಿ ಆರ್ಮಿ ಲೆಫ್ಟಿನೆಂಟ್ ಕರ್ನಲ್ ಗೌರವ ಶ್ರೇಣಿಯಲ್ಲಿದ್ದಾರೆ. ಅವರು ಹಲವು ಬಾರಿ ಸೇನಾ ಸಮವಸ್ತ್ರವನ್ನು ಧರಿಸಿರುವುದು ಕಂಡುಬಂದಿದೆ. ಆದರೆ ಈ ಬಾರಿ ಜಾಹೀರಾತಿಗಾಗಿ ಎಂಎಸ್ ಧೋನಿ ಈ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದಾರೆ. ಎಂಎಸ್ ಧೋನಿ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
MS Dhoni As A Police Officer: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ 15 ಆಗಸ್ಟ್ 2020 ರಂದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಸದ್ಯ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಐಪಿಎಲ್ 2023ಗಾಗಿ ತಯಾರಿ ಆರಂಭಿಸಿದ್ದಾರೆ. ಇದೆಲ್ಲದರ ನಡುವೆ ಅವರ ಫೋಟೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದಯ, ಈ ಫೋಟೋದಲ್ಲಿ ಧೋನಿ ಪೊಲೀಸ್ ಅಧಿಕಾರಿಯ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ ಪೊಲೀಸ್ ಅಧಿಕಾರಿಯ ಸಮವಸ್ತ್ರವನ್ನು ಏಕೆ ಧರಿಸಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
ಎಂಎಸ್ ಧೋನಿ ಆರ್ಮಿ ಲೆಫ್ಟಿನೆಂಟ್ ಕರ್ನಲ್ ಗೌರವ ಶ್ರೇಣಿಯಲ್ಲಿದ್ದಾರೆ. ಅವರು ಹಲವು ಬಾರಿ ಸೇನಾ ಸಮವಸ್ತ್ರವನ್ನು ಧರಿಸಿರುವುದು ಕಂಡುಬಂದಿದೆ. ಆದರೆ ಈ ಬಾರಿ ಜಾಹೀರಾತಿಗಾಗಿ ಎಂಎಸ್ ಧೋನಿ ಈ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದಾರೆ. ಎಂಎಸ್ ಧೋನಿ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಧೋನಿ ನಿರ್ಮಾಣದಲ್ಲಿ ತಯಾರಾದ ಮೊದಲ ಸಿನಿಮಾ: ಎಂಎಸ್ ಧೋನಿ ಸಿನಿಮಾ ಲೋಕದಲ್ಲೂ ತಮ್ಮ ಕೈಚಳಕ ತೋರಿಸಲು ರೆಡಿಯಾಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರ ನಿರ್ಮಾಣ ಸಂಸ್ಥೆ ಧೋನಿ ಎಂಟರ್‌ಟೈನ್‌ಮೆಂಟ್ ಮೊದಲ ತಮಿಳು ಚಿತ್ರವನ್ನು ನಿರ್ಮಿಸಲಿದೆ. ಅದರ ಹೆಸರು 'ಲೆಟ್ಸ್ ಗೆಟ್ ಮ್ಯಾರೀಡ್'. ಈ ಚಿತ್ರದಲ್ಲಿ ನಾದಿಯಾ, ಹರೀಶ್ ಕಲ್ಯಾಣ್ ಮತ್ತು ನಟಿ ಇವಾನಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯೋಗಿ ಬಾಬು ಕೂಡ ಈ ಸಿನಿಮಾದ ಭಾಗವಾಗಿದ್ದಾರೆ. ಈ ಚಿತ್ರದ ನಿರ್ಮಾಪಕರು ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಸಿಂಗ್.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ. ಇನ್ನು ಐಪಿಎಲ್ 2023 ರಲ್ಲಿ ಕೂಡ ಚೆನ್ನೈ ಪರ ಆಡಲಿದ್ದಾರೆ. ಐಪಿಎಲ್ 2022ರ ಮೊದಲು, ಧೋನಿ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕತ್ವವನ್ನು ತೊರೆದಿದ್ದರು. ನಂತರ ರವೀಂದ್ರ ಜಡೇಜಾ ಆ ಸ್ಥಾನವನ್ನು ಪಡೆದಿದ್ದರು. ಆದರೆ ನಾಯಕತ್ವ ವೈಫಲ್ಯದಿಂದ ಧೋನಿ ಮತ್ತೆ ಸಿಎಸ್‌ಕೆ ತಂಡದ ನಾಯಕರಾದರು.
ಇದನ್ನೂ ಓದಿ: Joginder Sharma Retirement: ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ಬೌಲರ್!
ಇನ್ನು ಧೋನಿ ಬಗ್ಗೆ ಮಾತನಾಡುವುದಾದರೆ, ಅವರು ತಮ್ಮ ನಾಯಕತ್ವದಲ್ಲಿ ಭಾರತ ತಂಡಕ್ಕೆ ಎಲ್ಲಾ ಮೂರು ಐಸಿಸಿ ಪ್ರಶಸ್ತಿಗಳನ್ನು ಗೆದ್ದುಕೊಟ್ಟಿದ್ದಾರೆ. ಇಂತಹ ದಾಖಲೆ ಬರೆದ ಏಕೈಕ ನಾಯಕರಾಗಿದ್ದಾರೆ. ಧೋನಿ ಡಿಸೆಂಬರ್ 23, 2004 ರಲ್ಲಿ ಬಾಂಗ್ಲಾದೇಶದ ವಿರುದ್ಧ ತಮ್ಮ ODI ಚೊಚ್ಚಲ ಪಂದ್ಯವನ್ನು ಆಡಿದರು. ಇದರ ನಂತರ, ಸೆಪ್ಟೆಂಬರ್ 2007 ರಲ್ಲಿ ಮೊದಲ ಬಾರಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ಧೋನಿ ಹಸ್ತಾಂತರಿಸಲಾಯಿತು. 2007 ರ ಟಿ20 ವಿಶ್ವಕಪ್, 2011ರ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತಕ್ಕೆ ಗೆದ್ದುಕೊಟ್ಟಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.