IPL 2022: ಐಪಿಎಲ್ ಇತಿಹಾಸಲ್ಲಿಯೇ ಮುಂಬೈ ಮತ್ತು ಚೆನ್ನೈ ಹೀಗೆ ಸೋತಿರಲಿಲ್ಲ!
5 ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿರುವ ಮುಂಬೈ ಇಂಡಿಯನ್ಸ್ ಹಾಗೂ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸತತ ಸೋಲುಗಳಿಂದ ಕಂಗೆಟ್ಟಿವೆ.
ನವದೆಹಲಿ: ಐಪಿಎಲ್ ಟೂರ್ನಿಯ 14 ಆವೃತ್ತಿಗಳು ಮುಗಿದು 15ನೇ ಆವೃತ್ತಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. 2 ಹೊಸ ತಂಡಗಳ ಸೇರ್ಪಡೆಯೊಂದಿಗೆ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ದೊರೆಯುತ್ತಿದೆ. ಯಾರು ನಿರೀಕ್ಷಿಸದ ರೀತಿಯಲ್ಲಿ ಬಲಿಷ್ಠ ತಂಡಗಳು ಮಕಾಡೆ ಮಲಗುತ್ತಿದ್ದು, ಸತತ ಸೋಲುಗಳಿಂದ ಕಂಗೆಟ್ಟುಹೊಗಿವೆ.
5 ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿರುವ ಮುಂಬೈ ಇಂಡಿಯನ್ಸ್ ಹಾಗೂ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸತತ ಸೋಲುಗಳಿಂದ ಕಂಗೆಟ್ಟಿವೆ. ಐಪಿಎಲ್ ಇತಿಹಾಸಲ್ಲಿಯೇ ಈ ಎರಡೂ ತಂಡಗಳು ಹೀಗೆ ಸೋಲು ಕಂಡಿರಲಿಲ್ಲ. ಉಭಯ ತಂಡಗಳು ಬಲಿಷ್ಠವಾಗಿದ್ದರೂ ಪ್ರಸಕ್ತ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗುತ್ತಿಲ್ಲ. ಸತತ 4 ಸೋಲುಗಳನ್ನು ಕಾಣುವ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಭಾರೀ ನಿರಾಸೆ ಮೂಡಿಸಿವೆ.
ಇದನ್ನೂ ಓದಿ: ಬಸ್ ನಂಬರ್ 315 ರ ಹಿಂದಿನ ಸ್ಪೂರ್ತಿದಾಯಕ ಕಥೆ ಹೇಳಿದ ಸಚಿನ್..!
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ಸೇರಿದಂತೆ ಹಲವು ಬದಲಾಣೆಗಳೊಂದಿಗೆ ಕಣಕ್ಕಿಳಿದಿದೆ. ಎಂ.ಎಸ್.ಧೋನಿ ಬಳಿಕ ನಾಯಕನ ಪಟ್ಟ ಅಲಂಕರಿಸಿರುವ ರವೀಂದ್ರ ಜಡೇಜಾ ಇದೀಗ ಭ್ರಮನಿರಸನಗೊಂಡಿದ್ದಾರೆ. ತಂಡದಲ್ಲಿ ಉತ್ತಮ ಆಟಗಾರರಿದ್ದರೂ ಗೆಲುವು ಸಿಗುತ್ತಿಲ್ಲ. ಆಡಿದ 4 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿರುವ ಚೆನ್ನೈ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. 13ನೇ ಆವೃತ್ತಿಯಲ್ಲಿ ಲೀಗ್ ಹಂತದಲ್ಲಿಯೇ ಹೊರಬಿದ್ದಿದ್ದ ಚೆನ್ನೈ 14ನೇ ಆವೃತ್ತಿಯಲ್ಲಿ ಪುಟಿದೆದ್ದು ಬಂದು ಚಾಂಪಿಯನ್ ಆಗಿತ್ತು. ಅದರೆ ಈ ಬಾರಿ ಯಾಕೋ ಜಡೇಜಾ ಪಡೆಗೆ ಸೋಲು ಬೆನ್ನತ್ತಿದ ಬೇತಾಳನಂತೆ ಕಾಡುತ್ತಿದೆ. ಸ್ಟಾರ್ ಆಟಗಾರರಿದ್ದರೂ, ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಚೆನ್ನೈಗೆ ಗೆಲುವು ಸಿಗುತ್ತಿಲ್ಲ.
ಇನ್ನು ಐಪಿಎಲ್ ನಲ್ಲಿ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಕೂಡ ಸತತ 4 ಸೋಲು ಕಂಡಿದೆ. ಸಾಲು ಸಾಲು ಸೋಲುಗಳಿಂದ ರೋಹಿತ್ ಶರ್ಮಾ ಕಂಗೆಟ್ಟುಹೋಗಿದ್ದಾರೆ. ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಮುಂಬೈ ಗೆಲುವಿನ ಖಾತೆ ತೆರೆಯಲು ತಿಣುಕಾಡುತ್ತಿದೆ. ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ ಮುಂಬೈಗೆ ಗೆಲುವು ಮರಿಚಿಕೆಯಾಗಿದೆ.
ಇದನ್ನೂ ಓದಿ: RCB Vs MI : ಮುಂಬೈ ತಂಡಕ್ಕೆ ಶತ್ರುವಾಗಲಿದ್ದಾನೆ RCB ಈ ಆಟಗಾರ : ಹೈ ಅಲರ್ಟ್ ಅಲ್ಲಿ ರೋಹಿತ್ ಆರ್ಮಿ
ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಅತ್ಯುತ್ತಮ ಪ್ರದರ್ಶನ ನೀಡಿ ಐಪಿಎಲ್ ಇತಿಹಾಸದಲ್ಲಿಯೇ ವಿಶಿಷ್ಠ ದಾಖಲೆ ನಿರ್ಮಿಸಿದೆ. ಬಲಿಷ್ಠ ತಂಡಕ್ಕೆ ಸಾಲು ಸಾಲು ಸೋಲುಗಳು ಬೆನ್ನತ್ತಿವೆ. ಗೆಲುವಿನ ಖಾತೆ ತೆರೆಯಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗುತ್ತಿಲ್ಲ. ಯಾರೂ ನಿರೀಕ್ಷಿಸಿದ ರೀತಿಯಲ್ಲಿ ಮುಂಬೈ ಸೋಲು ಕಾಣುತ್ತಿದೆ. ಇದರಿಂದ ಕೋಟ್ಯಂತರ ಅಭಿಮಾನಿಗಳಿಗೂ ಆಘಾತವಾಗಿದೆ.
ಐಪಿಎಲ್ ನಲ್ಲಿ ಚಾಂಪಿಯನ್ ಆಗಿ ಮೆರೆದಾಡಿದ 2 ಬಲಿಷ್ಠ ತಂಡಗಳು ಹೀಗೆ ಸೋಲು ಕಾಣುತ್ತಿರುವುದು ಕ್ರಿಕೆಟ್ ಪ್ರೇಮಿಗಳು, ಕ್ರಿಕೆಟ್ ತಜ್ಞರು ಹಾಗೂ ಹಿರಿಯ ಆಟಗಾರರಿಗೆ ಅಚ್ಚರಿ ಮೂಡಿಸಿದೆ. ಹೀಗೆ ಮುಂದುವರೆದರೆ ಇವೆರಡೂ ತಂಡಗಳು ಲೀಗ್‍ನಲ್ಲಿಯೇ ಹೊರಬೀಳುತ್ತವೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.