ಬಸ್ ನಂಬರ್ 315 ರ ಹಿಂದಿನ ಸ್ಪೂರ್ತಿದಾಯಕ ಕಥೆ ಹೇಳಿದ ಸಚಿನ್..!

ದಂತಕಥೆ ಸಡನ್ ಆಗಿ ಸೃಷ್ಟಿಯಾವುದಿಲ್ಲ, ಅದಕ್ಕೆ ತನ್ನದೇ ಆದ ವಿಶಿಷ್ಟ ಪ್ರಯಾಣವಿರುತ್ತದೆ.ಹೌದು, ಸಾಧನೆಯ ಮೇರು ಪರ್ವತವನ್ನು ಏರಿದಾಗ ಆರಂಭಿಕ ಪ್ರಯಾಣದ ಅನುಭವಗಳನ್ನು ಮೆಲಕು ಹಾಕಿದಾಗ ಒಂದು ರೀತಿಯ ರೋಚಕ ಅನುಭವನ್ನು ನೀಡುತ್ತವೆ.

Written by - Manjunath N | Last Updated : Apr 8, 2022, 07:39 PM IST
  • ದಿನವೀಡಿ ಕ್ರಿಕೆಟ್ ಪ್ರಾಕ್ಟೀಸ್ ನಂತರ ಮತ್ತೆ ಈ ಬಸ್ ಮೂಲಕ ಮನೆಗೆ ತೆರಳುತ್ತಿದ್ದರು, ಕೆಲವೊಮ್ಮೆ ಈ ಬಸ್ ಮಿಸ್ ಆದರೂ ಕೂಡ ಅದೊಂದು ರೀತಿ ಮಜಾ ಎನಿಸುತ್ತಿತ್ತು ಎಂದು ಈ ಬಸ್ ನಲ್ಲಿ ಕುಳಿತು ತಮ್ಮ ನೆನಪಿನ ಬುತ್ತಿಗೆ ಜಾರಿದ್ದಾರೆ.
ಬಸ್ ನಂಬರ್ 315 ರ ಹಿಂದಿನ ಸ್ಪೂರ್ತಿದಾಯಕ ಕಥೆ ಹೇಳಿದ ಸಚಿನ್..!   title=

ಮುಂಬೈ: ದಂತಕಥೆಗಳು ತಕ್ಷಣ ಸೃಷ್ಟಿಯಾಗುವುದಿಲ್ಲ, ಅದಕ್ಕೆ ತನ್ನದೇ ಆದ ವಿಶಿಷ್ಟ ಪ್ರಯಾಣವಿರುತ್ತದೆ. ಹೌದು, ಯಾವುದೇ ವ್ಯಕ್ತಿ ಸಾಧನೆಯ ಮೇರು ಪರ್ವತವನ್ನು ಏರಿದ ನಂತರ ತಮ್ಮ ಆರಂಭಿಕ ಪ್ರಯಾಣದ ಅನುಭವಗಳನ್ನು ಮೆಲಕು ಹಾಕಿದಾಗ ಅದೊಂದು ರೀತಿಯ ರೋಚಕ ಅನುಭವನ್ನು ನೀಡುತ್ತವೆ.

ಈಗ ಅಂತಹದ್ದೇ ಅನುಭವವನ್ನು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಆ ಅನುಭವ ಏನು ಗೊತ್ತೇ? ನಮಗೆಲ್ಲರಿಗೂ ತಿಳಿದಿರುವಂತೆ ಸಚಿನ್ ತೆಂಡೂಲ್ಕರ್ ಕೇವಲ 16 ನೇ ವಯಸ್ಸಿನಲ್ಲಿಯೇ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು.ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ವಿನೋದ್ ಕಾಂಬ್ಳಿ ಜೊತೆ ಆಡಿದ ಶಾಲಾ ದಿನಗಳು ಮುಂದೆ ಅವರನ್ನು ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಲು ಸಹಕಾರಿಯಾಯಿತು ಎಂದು ಹೇಳಬಹುದು.

ಇದನ್ನು ಓದಿ: ಬಾಂಡ್ ರವಿ' ಸಾಥ್ ಕೊಟ್ಟ ಪೊಗರು ಪೋರ-ಯಂಗ್ ಟೈಗರ್... ಪ್ರಮೋದ್ ಬೆನ್ನು ತಟ್ಟಿದ ಧ್ರುವ-ವಿನೋದ್

ಈಗ ಇಂತಹ ನೆನಪಿನ ಬುತ್ತಿಯನ್ನು ವಿವರಿಸುವ ವಿಡಿಯೋವೊಂದನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.ಇದರಲ್ಲಿ ಅವರು ಶಿವಾಜಿ ಪಾರ್ಕ್ ಗೆ ತೆರಳುವ ಬಸ್ ನಂಬರ್ 315 ರ ಮೂಲಕ ತಮ್ಮ ಅನುಭವನ್ನು ಹೇಳಿಕೊಂಡಿದ್ದಾರೆ.ಬಾಂದ್ರಾದಿಂದ ಶಿವಾಜಿ ಪಾರ್ಕ್ ಗೆ ತೆರಳುವ ಈ ಬಸ್ ನ್ನು ಬಹಳ ದಿನಗಳ ನಂತರ ನೋಡಿರುವುದಾಗಿ ಹೇಳಿರುವ ಸಚಿನ್ ತೆಂಡೂಲ್ಕರ್,ದಿನವೀಡಿ ಕ್ರಿಕೆಟ್ ಪ್ರಾಕ್ಟೀಸ್ ನಂತರ ಮತ್ತೆ ಈ ಬಸ್ ಮೂಲಕ ಮನೆಗೆ ತೆರಳುತ್ತಿದ್ದರು, ಕೆಲವೊಮ್ಮೆ ಈ ಬಸ್ ಮಿಸ್ ಆದರೂ ಕೂಡ ಅದೊಂದು ರೀತಿ ಮಜಾ ಎನಿಸುತ್ತಿತ್ತು ಎಂದು ಅವರು ಈ ಬಸ್ ನಲ್ಲಿ ಕುಳಿತು ತಮ್ಮ ನೆನಪಿನ ಬುತ್ತಿಗೆ ಜಾರಿದ್ದಾರೆ.

ಇದನ್ನೂ ಓದಿ: Career: ಅಮೃತ್ ಮುನ್ನಡೆ ಯೋಜನೆಯಡಿ ಉಚಿತ ಕೋರ್ಸ್ : ಅರ್ಜಿ ಆಹ್ವಾನ

ಸಚಿನ್ ಹಂಚಿಕೊಂಡಿರುವ ಈ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಹಲವರು ಈ ಬಸ್ ಜೊತೆಗಿನ ತಮ್ಮ ನಂಟನ್ನು ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯಿಸಿದ್ದರೆ, ಕೆಲವರು ಸಚಿನ್ ಅವರ ಈ ಆರಂಭಿಕ ಪ್ರಯಾಣದ ಬಗ್ಗೆ ಮತ್ತು ಅವರು ಕ್ರಿಕೆಟ್ ಜಗತ್ತಿನಲ್ಲಿ ಹೆಸರು ಮಾಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಂತಕಥೆಗಳ ಪ್ರಯಾಣವೆಂದರೆ ನಾವು ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ, ಅದರ ಹಿಂದೆ ಸಾಕಷ್ಟು ಶ್ರಮ, ಶ್ರದ್ದೆ ಇರುತ್ತದೆ ಆಗಲೇ ಅವರು ಶ್ರೇಷ್ಠ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News