Mumbai Indians VS Royal Challengers Bangalore: ಮಹಿಳಾ ಪ್ರೀಮಿಯರ್ ಲೀಗ್‌ 2023ರ ಮೊದಲ ಸೀಸನ್ ಅಬ್ಬರದಿಂದ ಆರಂಭವಾಗಿದೆ. ಈ ಲೀಗ್‌’ನ ನಾಲ್ಕನೇ ಪಂದ್ಯ ಭಾರತದ ಇಬ್ಬರು ದೊಡ್ಡ ಮಹಿಳಾ ಕ್ರಿಕೆಟಿಗರ ತಂಡಗಳ ನಡುವೆ ನಡೆದಿದೆ. ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಅವರ ಮುಂಬೈ ಇಂಡಿಯನ್ಸ್ ಮತ್ತು ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿದ್ದು, ಮುಂಬೈ ಗೆಲುವು ಸಾಧಿಸಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  “AB de Villiers ಶ್ರೇಷ್ಠ ಆಟಗಾರನಲ್ಲ, ಚಿನ್ನಸ್ವಾಮಿಯಲ್ಲಿ ಯಾರು ಬೇಕಾದ್ರೂ ರನ್ ಗಳಿಸಬಹುದು…!” ‘ಗಂಭೀರ’ ಹೇಳಿಕೆ


ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.4 ಓವರ್‌ಗಳಲ್ಲಿ 155 ರನ್‌ಗಳಿಗೆ ಆಲೌಟ್ ಆಯಿತು. ಮುಂಬೈನ ಹೀಲಿ ಮ್ಯಾಥ್ಯೂಸ್ ಗರಿಷ್ಠ 3 ವಿಕೆಟ್ ಪಡೆದರು. ಆರ್ ಸಿ ಬಿ ಪರ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಚಾ ಘೋಷ್ ಗರಿಷ್ಠ 28 ರನ್ ಗಳಿಸಿದರು. ಆದರೆ ಇದಕ್ಕಾಗಿ ಅವರು 26 ಎಸೆತಗಳನ್ನು ಪಡೆದುಕೊಂಡರು. 156 ರನ್‌ಗಳ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 14.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ ಸಾಧಿಸಿತು. ಹೀಲಿ ಮ್ಯಾಥ್ಯೂಸ್ ಮುಂಬೈ ಇಂಡಿಯನ್ಸ್ ಪರ ಅಜೇಯ 77 ರನ್ ಗಳಿಸಿದರು.


ಮುಂಬೈ ಇಂಡಿಯನ್ಸ್‌ಗೆ ಸತತ ಎರಡನೇ ಗೆಲುವು:


ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಈ ಲೀಗ್ ಅನ್ನು ಗೆಲುವಿನೊಂದಿಗೆ ಪ್ರಾರಂಭಿಸಿದೆ. ಈ ಸಂದರ್ಭದಲ್ಲಿ ತಂಡವು ಪಂದ್ಯವನ್ನು ಗೆಲ್ಲುವ ಮೂಲಕ ತನ್ನ ಸತತ ಎರಡನೇ ಗೆಲುವನ್ನು ದಾಖಲಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲೂ ತಂಡವು ತನ್ನ ಗೆಲುವಿನ ಖಾತೆ ತೆರೆಯುವಲ್ಲಿ ವಿಫಲವಾಗಿದೆ.


ಮುಂಬೈ ಪ್ಲೇಯಿಂಗ್ 11:


ಯಾಸ್ತಿಕಾ ಭಾಟಿಯಾ (ವಿ.ಕೀ), ಹೀಲಿ ಮ್ಯಾಥ್ಯೂಸ್, ನ್ಯಾಟ್ ಶಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ಕ್ಯಾ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಇಸಿ ವಾಂಗ್, ಅಮನ್‌ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್.


ಇದನ್ನೂ ಓದಿ: IND vs PAK: ಭಾರತಕ್ಕೆ ಮತ್ತೆ ಪಾಕಿಸ್ತಾನ ಎಂಟ್ರಿ! ಮಹಾ ಸುಳಿವು ನೀಡಿದ ಪಾಕ್ ನಾಯಕ ಬಾಬರ್ ಅಜಂ


ಆರ್ ಸಿ ಬಿ ಪ್ಲೇಯಿಂಗ್ 11:


ಸ್ಮೃತಿ ಮಂಧಾನ (ಕ್ಯಾ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ದಿಶಾ ಕ್ಯಾಸಟ್, ರಿಚಾ ಘೋಷ್ (ವಿ.ಕೀ), ಹೀದರ್ ನೈಟ್, ಕನಿಕಾ ಅಹುಜಾ, ಮೇಗನ್ ಶುಟ್, ಶ್ರೇಯಾಂಕಾ ಪಾಟೀಲ್, ಪ್ರೀತಿ ಬೋಸ್, ರೇಣುಕಾ ಸಿಂಗ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.