Nathan Lyon: ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನಡುವಿನ ಆಶಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯ ಲಂಡನ್‌ ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದ ನಾಲ್ಕನೇ ದಿನದಂದು ಲಾರ್ಡ್ಸ್ ಮೈದಾನವು ಓರ್ವ ಆಟಗಾರನ ಕ್ರೀಡಾ ಸ್ಪೂರ್ತಿಗೆ ತಲೆ ಬಾಗಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ನಾನು 10,000 ಮಹಿಳೆಯರೊಂದಿಗೆ ಸೆಕ್ಸ್ ಮಾಡಿದ್ದೇನೆ…”: ದಿಗ್ಗಜನ ಹೇಳಿಕೆಗೆ ಕೋಲಾಹಲ ಸೃಷ್ಟಿ


ಕೆಲ ಸಮಯದ ಹಿಂದೆ ಊರುಗೋಲುಗಳ ಸಹಾಯದಿಂದ ಓಡಾಡುತ್ತಿದ್ದ ನಾಥನ್ ಲಿಯಾನ್, ತಂಡಕ್ಕೆ ಅಗತ್ಯವಿರುವಾಗ ಧಾವಿಸಿ, “ನಾನಿದ್ದೇನೆ ಭಯಪಡಬೇಡಿ” ಎಂಬ ಧೈರ್ಯವನ್ನು ತುಂಬಿದ್ದಾರೆ. ಇವರ ಕ್ರೀಡಾ ಸ್ಪೂರ್ತಿಗೆ ಸದ್ಯ ಜಗತ್ತೇ ತಲೆ ಬಾಗಿದೆ.



 


ಆಸ್ಟ್ರೇಲಿಯನ್ ಕ್ರಿಕೆಟಿಗ ನಾಥನ್ ಲಿಯಾನ್ ಅವರು ಗಾಯಗೊಂಡಿದ್ದ ಕಾರಣ, ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಆಶಸ್ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡದಂತೆ ಹೇಳಿದ್ದರು.  ಆದರೆ ಅನುಭವಿ ಆಫ್ ಸ್ಪಿನ್ನರ್ ತನ್ನ ಸಹ ಆಟಗಾರರನ್ನು ಬೆಂಬಲಿಸಲು ಬ್ಯಾಟಿಂಗ್‌ ಗೆ ಬಂದರು. ತಮ್ಮ ಸತತ 100ನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಲಿಯಾನ್, ಲಾರ್ಡ್ಸ್‌ ನಲ್ಲಿ ನಡೆದ ಎರಡನೇ ಆಶಸ್ ಟೆಸ್ಟ್‌ ನ ಎರಡನೇ ದಿನದ ಆಟದಲ್ಲಿ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಬಲ ಕಾಲಿನ ಗಾಯಕ್ಕೆ ತುತ್ತಾಗಿದ್ದರು.


ನಾಥನ್ ಲಿಯಾನ್ ಪಂದ್ಯದ ನಾಲ್ಕನೇ ದಿನದಂದು ಬ್ಯಾಟಿಂಗ್‌ ಗೆ ಬಂದು, ಕೊನೆಯ ವಿಕೆಟ್‌ಗೆ ಮಿಚೆಲ್ ಸ್ಟಾರ್ಕ್‌ ನೊಂದಿಗೆ 15 ರನ್ ಸೇರಿಸಿ ಆಸ್ಟ್ರೇಲಿಯಾದ ಒಟ್ಟಾರೆ ಮುನ್ನಡೆಯನ್ನು 370 ರನ್‌ ಗಳಿಗೆ ತಲುಪಿಸಿದರು. ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ ನಲ್ಲಿ 279 ರನ್ ಗಳಿಸಿದಾಗ ಲಿಯಾನ್ ನಾಲ್ಕು ರನ್‌ ಗಳಿಗೆ ಔಟಾದ ಕೊನೆಯ ಬ್ಯಾಟ್ಸ್‌ಮನ್ ಆಗಿದ್ದರು. ಆಸ್ಟ್ರೇಲಿಯಾ ನೀಡಿದ 371 ರನ್ ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ನಾಲ್ಕನೇ ದಿನದಾಟದ ಅಂತ್ಯಕ್ಕೆ 114 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು.


ಈ ಬಗ್ಗೆ ಮಾತನಾಡಿದ ಲಿಯಾನ್, “ನೀನು ಈ ಬಾರಿ ಬ್ಯಾಟಿಂಗ್‌ ಮಾಡುವುದಿಲ್ಲ ಎಂದು ಪ್ಯಾಟ್ ಕಮಿನ್ಸ್ ಆರಂಭದಲ್ಲಿ ಹೇಳಿದ್ದರು. ಆದರೆ ನಾನು (ಮುಖ್ಯ ಕೋಚ್) ಆಂಡ್ರ್ಯೂ ಮ್ಯಾಕ್‌ ಡೊನಾಲ್ಡ್ ಮತ್ತು ನಮ್ಮ ವೈದ್ಯಕೀಯ ತಂಡದೊಂದಿಗೆ ಮಾತನಾಡಿ, ಕ್ರೀಸ್‌ ಗೆ ಮರಳಬಹುದೇ ಎಂಬುದನ್ನು ಕಂಡುಕೊಂಡೆ” ಎಂದರು.


ಆಸ್ಟ್ರೇಲಿಯ ಪರ 121 ಟೆಸ್ಟ್ ಪಂದ್ಯಗಳನ್ನಾಡಿರುವ ಲಿಯಾನ್, “ತಂಡದ ಫಿಸಿಯೋ ಶ್ರಮದಿಂದ ಎರಡನೇ ಇನ್ನಿಂಗ್ಸ್ ನಲ್ಲಿ 13 ಎಸೆತಗಳನ್ನು ಆಡಲು ಸಾಧ್ಯವಾಯಿತು” ಎಂದಿದ್ದಾರೆ.


ಇದನ್ನೂ ಓದಿ: ಟೆಸ್ಟ್ ಪಂದ್ಯದ 1 ಓವರ್’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗ Team Indiaದ ಈ ಬೌಲರ್


ಲಿಯಾನ್ ಅವರ ಹೆಸರಿನಲ್ಲಿ 496 ಟೆಸ್ಟ್ ವಿಕೆಟ್‌ ಗಳನ್ನು ಪಡೆದ ದಾಖಲೆಯಿದೆ. “ನಾನು ಲಾರ್ಡ್ಸ್‌ ನಲ್ಲಿರುವ ಜಿಮ್‌ ನಲ್ಲಿ ಫಿಸಿಯೋ ಜೊತೆಗೆ ಸಾಕಷ್ಟು ಸಮಯವನ್ನು ಕಳೆದಿದ್ದೇನೆ. ಕ್ರೀಸ್‌ ಗೆ ಬರಲು ಪ್ರಯತ್ನಿಸಲು ನನ್ನ ಕಾಲಿಗೆ ಟೇಪ್ ಹಾಕಿಕೊಂಡಿದ್ದೆ. ಕ್ರೀಸ್‌ ನಲ್ಲಿ ಇಳಿದು ನನ್ನ ಪಾತ್ರವನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದೆ. ನನ್ನ ಇನ್ನಿಂಗ್ಸ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ನಾನು ನನ್ನ ಸಹ ಆಟಗಾರರನ್ನು ಬೆಂಬಲಿಸಲು ಇಳಿದಿದ್ದೇನೆ” ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ