Most runs in an over in Test Cricket: ಟೆಸ್ಟ್ ಕ್ರಿಕೆಟ್ ನ ಒಂದು ಓವರ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು 1 ವರ್ಷದ ಹಿಂದೆ ಈ ದಿನ (2 ಜುಲೈ 2023) ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನೊಬ್ಬ ನಿರ್ಮಿಸಿದ್ದಾನೆ. ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಓವರ್ ನಲ್ಲಿ ಟೀಂ ಇಂಡಿಯಾದ ಆಟಗಾರ 35 ರನ್ ಗಳಿಸಿದ್ದರು. ಟೆಸ್ಟ್ ಪಂದ್ಯದ ಓವರ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗ ಯಾರೆಂದು ನೋಡೋಣ.
ಇದನ್ನೂ ಓದಿ: ಮನಿ ಪ್ಲಾಂಟ್ ಬೇರಿಗೆ ಈ ವಸ್ತುವನ್ನು ಕಟ್ಟಿದರೆ ಮನೆಯಲ್ಲಿ ತುಂಬಿ ತುಳುಕುವುದು ಸಂಪತ್ತು!
ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟೆಸ್ಟ್ ಪಂದ್ಯವೊಂದರಲ್ಲಿ ಒಂದೇ ಓವರ್ ನಲ್ಲಿ ಅತಿ ಹೆಚ್ಚು 35 ರನ್ ಗಳಿಸಿದ ವಿಶ್ವದಾಖಲೆ ಹೊಂದಿದ್ದಾರೆ. ಜಸ್ಪ್ರೀತ್ ಬುಮ್ರಾ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಏಕೈಕ ಟೆಸ್ಟ್ನಲ್ಲಿ 2022 ರಲ್ಲಿ ಈ ಸಾಧನೆ ಮಾಡಿದ್ದಾರೆ. ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಈ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ ಬೌಲಿಂಗ್ ನಲ್ಲಿ ಬುಮ್ರಾ ಒಂದೇ ಓವರ್ ನಲ್ಲಿ 35 ರನ್ ಕಲೆ ಹಾಕಿದ್ದಾರೆ. ಇನ್ನು ಬುಮ್ರಾ ಬ್ಯಾಟ್ ನಿಂದ 29 ರನ್ ಗಳು ಬಂದಿದ್ದರೆ, ಉಳಿದ 6 ರನ್‌ಗಳು ಹೆಚ್ಚುವರಿಯಾಗಿ ಬಂದಿವೆ.
ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಶ್ರೇಷ್ಠ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಎರಡನೇ ಸ್ಥಾನದಲ್ಲಿದ್ದಾರೆ. 2003-04ರಲ್ಲಿ, ಬ್ರಿಯಾನ್ ಲಾರಾ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ರಾಬಿನ್ ಪೀಟರ್ಸನ್ ಅವರ ಒಂದು ಓವರ್ ನಲ್ಲಿ 28 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಏಕದಿನ ನಾಯಕ ಜಾರ್ಜ್ ಬೈಲಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಜಾರ್ಜ್ ಬೈಲಿ 2013-14ರಲ್ಲಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರ ಒಂದು ಓವರ್ ನಲ್ಲಿ 28 ರನ್ ಬಾರಿಸಿದ್ದರು. ಈ ಅವಧಿಯಲ್ಲಿ ಜಾರ್ಜ್ ಬೈಲಿ 3 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿದ್ದರು.
ದಕ್ಷಿಣ ಆಫ್ರಿಕಾದ ಆಫ್ ಸ್ಪಿನ್ ಆಲ್ ರೌಂಡರ್ ಕೇಶವ್ ಮಹಾರಾಜ್ ಕೂಡ ಒಂದು ಓವರ್ ನಲ್ಲಿ 28 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಜೋ ರೂಟ್ ಅವರ ಒಂದು ಓವರ್ ನಲ್ಲಿ ಕೇಶವ್ ಮಹಾರಾಜ್ 28 ರನ್ ಗಳಿಸಿದ್ದರು. ಈ ವೇಳೆ ಕೇಶವ್ ಮಹಾರಾಜ್ 2 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿದ್ದರು.
ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಈ ರಾಶಿಗಳ ಮೇಲಿರಲಿದೆ ಶಿವನ ಶ್ರೀರಕ್ಷೆ: ರಾಜವೈಭೋಗ ಸಿದ್ಧಿ-ಸಂಪತ್ತಿನಿಂದ ತಿಜೋರಿ ತುಂಬುವುದು!
ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಕೂಡ ಒಂದು ಓವರ್ ನಲ್ಲಿ 27 ರನ್ ಗಳಿಸಿದ್ದಾರೆ. 2005 ರಲ್ಲಿ, ಲಾಹೋರ್ ನಲ್ಲಿ ಭಾರತದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ, ಶಾಹಿದ್ ಆಫ್ರಿದಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಒಂದು ಓವರ್ ನಲ್ಲಿ 4 ಸಿಕ್ಸರ್‌ಗಳ ಸಹಾಯದಿಂದ 27 ರನ್ ಗಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.